AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹೋದರರ ಸಹಾಯದಿಂದ ಪತ್ನಿಯ ಕೊಂದು ರುಂಡ ಕತ್ತರಿಸಿ ಡ್ರಮ್​ನಲ್ಲಿಟ್ಟ ಪತಿ

ಆಸ್ತಿ ವಿವಾದ ಪತ್ನಿಯನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿದೆ. ಪತಿಯೊಬ್ಬ ತನ್ನ ಸಹೋದರರ ಸಹಾಯದಿಂದ ಪತ್ನಿಯನ್ನು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ. ಮೂವರು ಸಹೋದರರ ಸಹಾಯದಿಂದ ತನ್ನ ಹೆಂಡತಿಯನ್ನು ಕೊಂದು, ಆಕೆಯ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ, ಬಳಿಕ ರುಂಡವನ್ನು ಡ್ರಮ್​ನಲ್ಲಿರಿಸಿದ್ದ.

ಸಹೋದರರ ಸಹಾಯದಿಂದ ಪತ್ನಿಯ ಕೊಂದು ರುಂಡ ಕತ್ತರಿಸಿ ಡ್ರಮ್​ನಲ್ಲಿಟ್ಟ ಪತಿ
Woman (16)Image Credit source: India Today
ನಯನಾ ರಾಜೀವ್
|

Updated on: Jan 15, 2026 | 11:05 AM

Share

ಫಿರೋಜಾಬಾದ್, ಜನವರಿ 15: ಆಸ್ತಿ ವಿವಾದ ಪತ್ನಿಯನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿದೆ. ಪತಿಯೊಬ್ಬ ತನ್ನ ಸಹೋದರರ ಸಹಾಯದಿಂದ ಪತ್ನಿಯನ್ನು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ. ಮೂವರು ಸಹೋದರರ ಸಹಾಯದಿಂದ ತನ್ನ ಹೆಂಡತಿಯನ್ನು ಕೊಂದು, ಆಕೆಯ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ, ಬಳಿಕ ರುಂಡವನ್ನು ಡ್ರಮ್​ನಲ್ಲಿರಿಸಿದ್ದ.

ಆರೋಪಿಗಳು ಹರಿತವಾದ ಆಯುಧವನ್ನು ಬಳಸಿ ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುತ್ತಿಗೆಯ ಮೇಲಿನ ಭಾಗವನ್ನು ಡ್ರಮ್‌ನೊಳಗೆ ಬಚ್ಚಿಟ್ಟು, ಮುಂಡವನ್ನು ಮನೆಯೊಳಗೆ ಹಾಸಿಗೆಯ ಮೇಲೆ ಎಸೆಯಲಾಗಿತ್ತು ಎಂದು ಆರೋಪಿಸಲಾಗಿದೆ.

ಪೊಲೀಸರು ಕತ್ತರಿಸಿದ ತಲೆಯನ್ನು ಡ್ರಮ್‌ನಿಂದ ಮತ್ತು ಮುಂಡವನ್ನು ಮನೆಯೊಳಗಿನ ಹಾಸಿಗೆಯಲ್ಲಿ ವಶಪಡಿಸಿಕೊಂಡರು. ಮಾಹಿತಿಯ ಪ್ರಕಾರ, ಮೃತ ಲತಾ ದೇವಿ ಸುಮಾರು 25–26 ವರ್ಷಗಳ ಹಿಂದೆ ಅಶುತೋಷ್ ಅವರನ್ನು ವಿವಾಹವಾಗಿದ್ದರು. ದಂಪತಿ ನಡುವೆ ದೀರ್ಘಕಾಲದಿಂದ ಆಸ್ತಿ ವಿವಾದವಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅಶುತೋಷ್ ಅವರ ಸಹೋದರರು ಈ ಪಿತೂರಿ ನಡೆಸಿ ಜನವರಿ 12 ರ ಮಧ್ಯರಾತ್ರಿ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿಸಲಾಗಿದೆ.

ಅಶುತೋಷ್ ಒಬ್ಬ ಸರಳ ವ್ಯಕ್ತಿ ಆತ ಈ ಕೊಲೆ ಮಾಡಿದ್ದಾನೆಂದರೆ ನಂಬಲು ಸಾಧ್ಯವಾಗುತ್ತಿಲ್ಲ, ಆತನ ಸಹೋದರರ ಕೈವಾಡ ಇದರಲ್ಲಿದೆ, ಅವರ ಜತೆ ಸೇರಿಕೊಂಡು ಈತ ಕೂಡ ಈ ಘೋರ ಅಪರಾಧವೆಸಗಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ತಿಳಿಸಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿತು.

ಮತ್ತಷ್ಟು ಓದಿ: ವಿದೇಶದಿಂದ ಗುಟ್ಟಾಗಿ ಬಂದು ಅಮ್ಮನನ್ನೇ ಕೊಲೆ ಮಾಡಿದ ಮಗ!

ಮಹಿಳೆಯ ಕತ್ತು ಹಿಸುಕಿ, ಅವರ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿದ್ದಾರೆ. ಒಂದು ಭಾಗವು ಹಾಸಿಗೆಯ ಮೇಲೆ ಎಸೆದಿದ್ದಾರೆ, ಮತ್ತು ಇನ್ನೊಂದು ಭಾಗವನ್ನು ಕೋಣೆಯೊಳಗಿನ ಡ್ರಮ್‌ನಲ್ಲಿ ಇರಿಸಲಾಗಿತ್ತು.ಆದರೆ ಕೊಲೆ ಮಾಡುವ ನಿರ್ಧಾರವನ್ನು ಏಕೆ ತೆಗೆದುಕೊಂಡರು ಗೊತ್ತಿಲ್ಲವೆಂದು ಮಹಿಳೆಯ ಸಹೋದರ ಸಂಜೀವ್ ದೀಕ್ಷಿತ್ ಹೇಳಿದ್ದಾರೆ.

ಮಹಿಳೆಯ ಗಂಟಲು ಸೀಳಲಾಗಿದೆ, ಆ ಸಮಯದಲ್ಲಿ ಅಶುತೋಷ್ ಮತ್ತು ಅವನ ಮೂವರು ಸಹೋದರರು ಇದ್ದರು. ಅವರಲ್ಲಿ ಒಬ್ಬರು ಆಕೆಯ ಕೈಗಳನ್ನು ಹಿಡಿದು ಕುತ್ತಿಗೆ ಕತ್ತರಿಸಿ ಡ್ರಮ್​ನಲ್ಲಿ ಹಾಕಿದ್ದಾರೆ. ಮುಂಡವನ್ನು ಹಾಸಿಗೆಯ ಮೇಲೆ ಮಲಗಿಸಲಾಗಿತ್ತು. ಅಶುತೋಷ್ ನಗರದಲ್ಲಿ ವಾಸಿಸುವ ತನ್ನ ಸಹೋದರರಿಗೆ ಅಶುತೋಷ್ ಹಣ ಕೊಡುತ್ತಿದ್ದ ಎಂದು ಮತ್ತೊಬ್ಬ ಸಂಬಂಧಿ ಉಪೇಂದ್ರ ಪ್ರತಾಪ್ ಹೇಳಿದ್ದಾರೆ. ನಾವು ಅಶುತೋಷ್ ಅವರನ್ನು ಬಂಧಿಸಿದ್ದೇವೆ. ಇದು ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದ ಘಟನೆಯಾಗಿದೆ ಎಂದು ಸಿರ್ಸಗಂಜ್‌ನ ವೃತ್ತ ಅಧಿಕಾರಿ ಅನಿಮೇಶ್ ಸಿಂಗ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ