Delhi Chalo: ಮಳೆಯಿಂದ ಪಾರಾಗಲು ಪಂಜಾಬ್ ರೈತರ ಪ್ರಯತ್ನಗಳು ಹೀಗಿವೆ..

| Updated By: ಸಾಧು ಶ್ರೀನಾಥ್​

Updated on: Jan 07, 2021 | 11:38 AM

ದೆಹಲಿಯಲ್ಲಿ ಚಳಿ, ಜೊತೆಜೊತೆಗೆ ಮಳೆ. ಪಂಜಾಬ್ ರೈತರು ಇವುಗಳ ನಡುವೆಯೇ ಹೇಗೆ ಚಳುವಳಿ ಮುಂದುವರೆಸಿದ್ದಾರೆ? ಇಲ್ಲಿದೆ ವಿವರ..

Delhi Chalo: ಮಳೆಯಿಂದ ಪಾರಾಗಲು ಪಂಜಾಬ್ ರೈತರ ಪ್ರಯತ್ನಗಳು ಹೀಗಿವೆ..
ಟೆಂಟ್​ಗೆ ನೀರು ನುಗ್ಗದಂತೆ ಇಟ್ಟಂಗಿ ತಡೆಗೋಡೆ ನಿರ್ಮಿಸಿರುವುದು
Follow us on

ದೆಹಲಿ: ಕಳೆದ ಕೆಲ ದಿನಗಳಿಂದ ದೇಶದ ರಾಜಧಾನಿಯಲ್ಲಿ ಸುರಿದ ಮಳೆಯಿಂದ ಪಂಜಾಬ್ ರೈತರ ಚಳುವಳಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿತ್ತು. ವಾಸದ ಟೆಂಟ್​ಗಳಿಗೆ ನೀರು ನುಗ್ಗಿ ತೊಂದರೆಯಾಗಿತ್ತು. ಇನ್ನೂ ಕೆಲ ಕಾಲ ಮಳೆ ಸುರಿಯುವ ಲಕ್ಷಣವಿರುವುದರಿಂದ ಚಳುವಳಿ ನಿರತ ರೈತರು ಮಳೆಯಿಂದ ರಕ್ಷಣೆ ಪಡೆಯಲು ತಾತ್ಕಾಲಿತ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಟಿಕ್ರಿ ಗಡಿ ಭಾಗದಲ್ಲಿರುವ ರೈತರ ಟೆಂಟ್​ಗಳಿಗೆ ನೀರು ನುಗ್ಗದಂತೆ ಇಟ್ಟಿಗೆ, ಜಲ್ಲಿ ಮತ್ತು ಸಿಮೆಂಟ್​ಗಳಿಂದ ತಾತ್ಕಾಲಿಕ ತಡೆ ಒಡ್ಡಿದ್ದಾರೆ. ಚಿಕ್ಕ ಚಿಕ್ಕ ಕಟ್ಟೆಗಳನ್ನು ಕಟ್ಟಿ ನೀರಿಗೆ ಪ್ರತಿರೋಧ ಒಡ್ಡಿರುವುದು ಕಂಡುಬಂದಿದೆ.

ಇಷ್ಟೇ ಅಲ್ಲದೇ, ಸಿಂಘು ಗಡಿ ಭಾಗದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಬೃಹತ್ ಟೆಂಟ್ ನಿರ್ಮಿಸಲಾಗಿದೆ. ಪ್ರಮುಖ ಪ್ರತಿಭಟನಾ ಸ್ಥಳದ ಸಮೀಪವೇ ಸಾವಿರಾರು ರೈತರು ಏಕ ಕಾಲಕ್ಕೆ ಸೇರಬಹುದಾಗಿದೆ.

ಟೆಂಟ್​ನೊಳಗೆ ಕುಳಿತಿರುವ ರೈತರು