ಹೈದರಾಬಾದ್‌ನಲ್ಲಿ ದುರ್ಗಾ ದೇವಿಯ ವಿಗ್ರಹಕ್ಕೆ ಭಾಗಶಃ ಹಾನಿ; ಪ್ರತಿಭಟನೆ

|

Updated on: Oct 11, 2024 | 6:43 PM

ಯಾವುದೇ ವಿಧ್ವಂಸಕ ಕೃತ್ಯಗಳಿಗೆ ಎಲ್ಲಾ ಹಿಂದೂಗಳು ಪ್ರತೀಕಾರ ತೀರಿಸಿಕೊಳ್ಳುವ ಸಮಯ ಬಂದಿದೆ. ಬಹುಶಃ ಅವರು ನಮ್ಮನ್ನು ಒಡೆಯಲು ಹೊರಟಿದ್ದಾರೆ ಎಂದು ಅವರು ಭಾವಿಸುತ್ತಿದ್ದಾರೆ. ಆದರೆ ಅವರು ಮತ್ತೆ ಮತ್ತೆ ಇಂತಹ ಕೆಲಸಗಳನ್ನು ಮಾಡುವ ಮೂಲಕ ನಮ್ಮನ್ನು ಒಂದುಗೂಡಿಸುತ್ತಾರೆ. ನಾನು ಅವರಿಗೆ ಎಚ್ಚರಿಕೆ ನೀಡುತ್ತೇನೆ ಎಂದು ಬಿಜೆಪಿ ನಾಯಕಿ ಮಾಧವಿ ಲತಾ ಎಚ್ಚರಿಕೆ ನೀಡಿದ್ದಾರೆ

ಹೈದರಾಬಾದ್‌ನಲ್ಲಿ ದುರ್ಗಾ ದೇವಿಯ ವಿಗ್ರಹಕ್ಕೆ ಭಾಗಶಃ ಹಾನಿ; ಪ್ರತಿಭಟನೆ
ದುರ್ಗಾ ದೇವಿ ವಿಗ್ರಹ
Follow us on

ಹೈದರಾಬಾದ್ ಅಕ್ಟೋಬರ್ 11: ಹೈದರಾಬಾದ್‌ನಲ್ಲಿ ಶುಕ್ರವಾರ ದುರ್ಗಾ ಪೂಜೆಯ ಮಂಟಪದಲ್ಲಿ ಅಪರಿಚಿತ ದುಷ್ಕರ್ಮಿಗಳು ದುರ್ಗಾ ಮಾತೆಯ ವಿಗ್ರಹವನ್ನು ಭಾಗಶಃ ಹಾನಿಗೊಳಿಸಿದ್ದಾರೆ. ಬೇಗಂ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಸಹಾಯಕ ಪೊಲೀಸ್ ಆಯುಕ್ತ (ಏಬಿಡ್ಸ್) ಎ ಚಂದ್ರಶೇಖರ್ ಪ್ರಕಾರ, ಶುಕ್ರವಾರ ಮುಂಜಾನೆ ಅಪರಿಚಿತ ವ್ಯಕ್ತಿಗಳು ವಿಗ್ರಹದ ಒಂದು ಕೈಗೆ ಹಾನಿಯುಂಟು ಮಾಡಿದ್ದಾರೆ. ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಅಧಿಕಾರಿ ಹೇಳಿದರು.

ಅಂದಿನಿಂದ ವಿಗ್ರಹವನ್ನು ಸರಿಮಾಡಲಾಗಿದ್ದು ಪೆಂಡಾಲ್​​ನಲ್ಲಿ ಪೂಜೆ ಮುಂದುವರಿಯುತ್ತದೆ. ವಿಧ್ವಂಸಕ ಕೃತ್ಯವು ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಅವರು ನಾಂಪಲ್ಲಿ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕಿ ಮಾಧವಿ ಲತಾ ಅವರು ಕೃತ್ಯವನ್ನು ಖಂಡಿಸಿದ್ದು, ಹಿಂದೂಗಳು ತಮ್ಮ ಪೂಜಾ ಸ್ಥಳಗಳ ಮೇಲೆ ಪದೇ ಪದೇ ದಾಳಿ ನಡೆಸಿದರೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

“ಯಾವುದೇ ವಿಧ್ವಂಸಕ ಕೃತ್ಯಗಳಿಗೆ ಎಲ್ಲಾ ಹಿಂದೂಗಳು ಪ್ರತೀಕಾರ ತೀರಿಸಿಕೊಳ್ಳುವ ಸಮಯ ಬಂದಿದೆ. ಬಹುಶಃ ಅವರು ನಮ್ಮನ್ನು ಒಡೆಯಲು ಹೊರಟಿದ್ದಾರೆ ಎಂದು ಅವರು ಭಾವಿಸುತ್ತಿದ್ದಾರೆ. ಆದರೆ ಅವರು ಮತ್ತೆ ಮತ್ತೆ ಇಂತಹ ಕೆಲಸಗಳನ್ನು ಮಾಡುವ ಮೂಲಕ ನಮ್ಮನ್ನು ಒಂದುಗೂಡಿಸುತ್ತಾರೆ. ನಾನು ಅವರಿಗೆ ಎಚ್ಚರಿಕೆ ನೀಡುತ್ತೇನೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ರಾಹುಲ್ ಗಾಂಧಿಯವರ ಕಾರ್ಯವೈಖರಿಯಿಂದಾಗಿ ವಿಪಕ್ಷ ನಾಯಕ ಸ್ಥಾನ ಬದಲಿಸಲು ಇಂಡಿಯಾ ಬ್ಲಾಕ್ ಚಿಂತಿಸುತ್ತಿದೆ: ಬಿಜೆಪಿ

ಈ ಸಂಬಂಧ ಬೇಗಂ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ