ಭೋಪಾಲ್​​ನಲ್ಲಿ ಡ್ರಗ್ಸ್ ಪತ್ತೆ: ಉಪ ಮುಖ್ಯಮಂತ್ರಿಗೆ ಕಿಂಗ್‌ಪಿನ್‌ನೊಂದಿಗೆ ನಿಕಟ ಸಂಪರ್ಕ: ಕಾಂಗ್ರೆಸ್ ಆರೋಪ

“ಇಂದು ಮಧ್ಯಪ್ರದೇಶದ ಪರಿಸ್ಥಿತಿ ಹೇಗಿದೆ? ಉಡ್ತಾ ಪಂಜಾಬ್ ನಂತರ, ಮಧ್ಯಪ್ರದೇಶವು ಈಗ ಉಡ್ತಾ ಎಂಪಿಯಾಗುತ್ತಿದೆ ಎಂದು ಪಟ್ವಾರಿ ಎಎನ್‌ಐಗೆ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಅಧಿಕಾರಿಗಳು ₹ 1,814 ಕೋಟಿ ಮೌಲ್ಯದ ಮೆಫೆಡ್ರೋನ್ (MD) ವಶಪಡಿಸಿಕೊಂಡ ನಂತರ ಉಪಮುಖ್ಯಮಂತ್ರಿ ರಕ್ಷಣೆಯಲ್ಲಿ ಅವರ ಆಪ್ತ ವ್ಯಕ್ತಿಗಳು ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ಭೋಪಾಲ್​​ನಲ್ಲಿ ಡ್ರಗ್ಸ್ ಪತ್ತೆ: ಉಪ ಮುಖ್ಯಮಂತ್ರಿಗೆ ಕಿಂಗ್‌ಪಿನ್‌ನೊಂದಿಗೆ ನಿಕಟ ಸಂಪರ್ಕ: ಕಾಂಗ್ರೆಸ್ ಆರೋಪ
ಜಿತು ಪಟ್ವಾರಿ
Follow us
ರಶ್ಮಿ ಕಲ್ಲಕಟ್ಟ
|

Updated on: Oct 11, 2024 | 7:49 PM

ದೆಹಲಿ ಅಕ್ಟೋಬರ್ 11: ಮಧ್ಯಪ್ರದೇಶ ಉಪಮುಖ್ಯಮಂತ್ರಿ ಜಗದೀಶ್ ದೇವದಾ (Jagdish Devda) ಅವರು ಭೋಪಾಲ್‌ನಲ್ಲಿ ನಡೆದ ಪ್ರಮುಖ ಮಾದಕ ದ್ರವ್ಯ ದಂಧೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ (Jitu Patwari), ಡಿಸಿಎಂ ರಾಜೀನಾಮೆ ನೀಡಬೇಕೆಂದು ಶುಕ್ರವಾರ ಒತ್ತಾಯಿಸಿದ್ದಾರೆ. ಪಟ್ವಾರಿ ಅವರು ಮಧ್ಯಪ್ರದೇಶದಲ್ಲಿ ಡ್ರಗ್ಸ್ ವ್ಯಾಪಕ ಲಭ್ಯತೆಯನ್ನು ಬಹಿರಂಗಪಡಿಸಿದ ಕುಟುಕು ಕಾರ್ಯಾಚರಣೆಯನ್ನು ಉಲ್ಲೇಖಿಸಿದ್ದು ರಾಜ್ಯವು “ಉಡ್ತಾ ಮಧ್ಯ ಪ್ರದೇಶ” ವಾಗಿ ಬದಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.

“ಇಂದು ಮಧ್ಯಪ್ರದೇಶದ ಪರಿಸ್ಥಿತಿ ಹೇಗಿದೆ? ಉಡ್ತಾ ಪಂಜಾಬ್ ನಂತರ, ಮಧ್ಯಪ್ರದೇಶವು ಈಗ ಉಡ್ತಾ ಎಂಪಿಯಾಗುತ್ತಿದೆ ಎಂದು ಪಟ್ವಾರಿ ಎಎನ್‌ಐಗೆ ತಿಳಿಸಿದ್ದಾರೆ. ಈ ವಾರದ ಆರಂಭದಲ್ಲಿ ಅಧಿಕಾರಿಗಳು ₹ 1,814 ಕೋಟಿ ಮೌಲ್ಯದ ಮೆಫೆಡ್ರೋನ್ (MD) ವಶಪಡಿಸಿಕೊಂಡ ನಂತರ ಉಪಮುಖ್ಯಮಂತ್ರಿ ರಕ್ಷಣೆಯಲ್ಲಿ ಅವರ ಆಪ್ತ ವ್ಯಕ್ತಿಗಳು ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

‘‘ಸರ್ಕಾರ ಜವಾಬ್ದಾರಿ ವಹಿಸದೇ, ಕೆಲಸ ಮಾಡಲು ವಿಫಲವಾಗಿರುವಾಗ ಅವರು ಇನ್ನೂ ಉಪಮುಖ್ಯಮಂತ್ರಿ ಹುದ್ದೆಯನ್ನು ಹೇಗೆ ನಿರ್ವಹಿಸುತ್ತಿದ್ದಾರೆ? ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪಟ್ವಾರಿ ಪ್ರಶ್ನಿಸಿದ್ದಾರೆ.

“ಪ್ರಧಾನಿ ಮೋದಿಯವರು ತಕ್ಷಣ ನಿರ್ಧಾರ ತೆಗೆದುಕೊಂಡು ಉಪಮುಖ್ಯಮಂತ್ರಿಯನ್ನು ತೆಗೆದುಹಾಕಬೇಕಲ್ಲವೇ? ಇಲ್ಲದಿದ್ದರೆ, ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ನಮ್ಮ ಆತಂಕವನ್ನು ವ್ಯಕ್ತಪಡಿಸುವುದು ಸಹಜ ಎಂದಿದ್ದಾರೆ ಕಾಂಗ್ರೆಸ್ ನಾಯಕ.

ಸಾರ್ವಜನಿಕ ವ್ಯಕ್ತಿಗಳೊಂದಿಗಿನ ಫೋಟೊಗಳು ಅಪರಾಧಿಗಳಿಗೆ ಯಾವುದೇ ರೀತಿಯ ರಕ್ಷಣೆಯನ್ನು ಸೂಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಉಪ ಮುಖ್ಯಮಂತ್ರಿ ಈ ಹಿಂದೆ ಯಾವುದೇ ತಪ್ಪು ಮಾಡಿಲ್ಲ ಎಂದು ನಿರಾಕರಿಸಿದ್ದರು. ಅದೇ ವೇಳೆ ಮಾದಕ ವಸ್ತು ಕಾರ್ಯಾಚರಣೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಭೋಪಾಲ್​​ನಲ್ಲಿ ಮೆಗಾ ಡ್ರಗ್ ಸಾಗಾಟ

ಈ ವಾರದ ಆರಂಭದಲ್ಲಿ, ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಭೋಪಾಲ್‌ನ ಹೊರವಲಯದಲ್ಲಿರುವ ಕಾರ್ಖಾನೆಯಿಂದ 907.09 ಕೆಜಿ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿತು. ಈ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳಾದ ಅಮಿತ್ ಚತುರ್ವೇದಿ ಮತ್ತು ಸನ್ಯಾಲ್ ಪ್ರಕಾಶ್ ಬಾನೆ ಅವರನ್ನು ಬಂಧಿಸಿತ್ತು. .

ಗುಜರಾತ್ ಎಟಿಎಸ್‌ನಿಂದ ಇದುವರೆಗೆ ಪತ್ತೆಯಾದ ಅತಿದೊಡ್ಡ ಅಕ್ರಮ ಎಂಡಿ ಡ್ರಗ್ ಫ್ಯಾಕ್ಟರಿ ಇದಾಗಿದ್ದು, ಘಟಕವು ದಿನಕ್ಕೆ 25 ಕೆಜಿ ಡ್ರಗ್ಸ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬಂಧಿತ ವ್ಯಕ್ತಿಗಳು ಹಲವಾರು ತಿಂಗಳುಗಳಿಂದ ಕಾರ್ಖಾನೆಯನ್ನು ನಡೆಸುತ್ತಿದ್ದು, ಆರ್ಥಿಕ ಲಾಭಕ್ಕಾಗಿ ಎಂಡಿ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರದ ಖ್ಯಾತ ನಟ ಸಯಾಜಿ ಶಿಂಧೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆ

“ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವಿದೆ. ಇಲ್ಲಿ ಭಯಾನಕ ಪರಿಸ್ಥಿತಿ ನಿರಂತರವಾಗಿ ಬೆಳೆಯುತ್ತಿದೆ. ಅಲ್ಲದೆ, ಕಳೆದ 10 ವರ್ಷಗಳಿಂದ ದೇಶದಲ್ಲಿ ಬಿಜೆಪಿ ಸರ್ಕಾರವಿದ್ದು, ದೇಶ ನಿರಂತರವಾಗಿ ಉಡ್ತಾ ಭಾರತದತ್ತ ಸಾಗುತ್ತಿದೆ. ಆದ್ದರಿಂದ ಪ್ರತಿ ವರ್ಷ 2 ಕೋಟಿ ಉದ್ಯೋಗಗಳ ಬಗ್ಗೆ ಮಾತನಾಡುತ್ತಿದ್ದಲ್ಲಿ, ಈಗ 2.5 ಕೋಟಿ ಹೊಸ ಯುವಕರು ಮಾದಕ ವ್ಯಸನಿಗಳಾಗಿದ್ದಾರೆ. ಹಾಗಾಗಿ, ಪ್ರಧಾನಿ ಮೋದಿ ಮತ್ತು ಬಿಜೆಪಿ ತಪ್ಪಿತಸ್ಥರು ಅಲ್ಲವೇ ಎಂದು ಪಟ್ವಾರಿ ಕೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ