ವಿದ್ಯಾರ್ಥಿನಿಗೆ ನಿತ್ಯ ಪೀಡಿಸುತ್ತಿದ್ನಂತೆ ವಾರ್ಡನ್, ಪೋಷಕರಿಂದ ಕಾಮುಕನಿಗೆ ಧರ್ಮದೇಟು

ವಿದ್ಯಾರ್ಥಿನಿಗೆ ನಿತ್ಯ ಪೀಡಿಸುತ್ತಿದ್ನಂತೆ ವಾರ್ಡನ್, ಪೋಷಕರಿಂದ ಕಾಮುಕನಿಗೆ ಧರ್ಮದೇಟು

ಹೈದರಾಬಾದ್: ಇತ್ತೀಚೆಗಷ್ಟೇ ಮೂವರು ಹಾಸ್ಟೆಲ್ ವಿದ್ಯಾರ್ಥಿನಿಯರು ಪ್ರೆಗ್ನೆಂಟ್ ಆದ ಪ್ರಕರಣ ಮಾಸುವ ಮುನ್ನ, ತೆಲಂಗಾಣದಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ. ಈ ಬಾರಿ ಶಾಲಾ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ನಡೆದಿದ್ದು, ವಿಷಯ ತಿಳಿದ ವಿದ್ಯಾರ್ಥಿನಿ ಮನೆಯವರು ವಾರ್ಡನ್​ಗೆ ಹಿಗ್ಗಾಮುಗ್ಗಾ ಧರ್ಮದೇಟು ಕೊಟ್ಟಿದ್ದಾರೆ.

ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ವಾರ್ಡನ್:
ತೆಲಂಗಾಣದ ಆದಿಲಾಬಾದ್​ನಲ್ಲಿ ಇರುವ ಹಾಸ್ಟೆಲ್​ಗೆ ಬಂದಿದ್ದ ಪೋಷಕರು ಕಾಮುಕ ವಾರ್ಡನ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ತಮ್ಮ ಮನೆ ಹುಡುಗಿಗೆ ಟಾರ್ಚರ್ ಕೊಟ್ಟ ಆಸಾಮಿ ವಿರುದ್ಧ ಸಿಕ್ಕಾಪಟ್ಟೆ ಆಕ್ರೋಶವೂ ಇದೆ. ಆದಿಲಾಬಾದ್​ನ ಗಿರಿಜನ ವಸತಿಯುತ ಪ್ರೌಢ ಶಾಲೆಯಲ್ಲಿ ಹಾಸ್ಟೆಲ್ ವಾರ್ಡನ್ ಆಗಿರೋ ವಸಂತರಾವ್. ತನ್ನಪಾಡಿಗೆ ನೌಕರಿ ಮಾಡ್ಕೊಂಡು ಇದ್ದಿದ್ರೆ ಈ ಗತಿ ಬರ್ತಿರಲಿಲ್ಲ. ಆದ್ರೆ ಈ ಕಾಮುಕ 8ನೇ ತರಗತಿ ವಿದ್ಯಾರ್ಥಿನಿಗೆ ನಿತ್ಯವೂ ಕಾಟ ಕೊಡ್ತಿದ್ದನಂತೆ. ತನ್ನ ಮಾತು ಕೇಳಿದ್ರೆ ಮನೆಯವರ ಜತೆ ಮಾತನಾಡಲು ಅವಕಾಶ ಕೊಡ್ತೀನಿ ಅಂತಾ ಪುಸಲಾಯಿಸ್ತಿದ್ದನಂತೆ. ಇದನ್ನ ವಿದ್ಯಾರ್ಥಿನಿ ಮನೆಯವರಿಗೆ ತಿಳಿಸಿದ್ದು, ವಿದ್ಯಾರ್ಥಿನಿ ಮನೆಯರು ಶಾಲೆಗೆ ಎಂಟ್ರಿ ಕೊಟ್ಟು ಕಾಮುಕನಿಗೆ ಬುದ್ಧಿ ಕಲಿಸಿದ್ದಾರೆ.

ಘಟನೆ ಖಂಡಿಸಿ ಆಕ್ರೋಶ, ಅಮಾನತಿಗೆ ಒತ್ತಾಯ!
ಇನ್ನು ಘಟನೆ ಖಂಡಿಸಿ, ಬಾಲಕಿ ಮನೆಯವರು ಮಾತ್ರವಲ್ಲ ವಿವಿಧ ಸಂಘಟನೆಗಳು ಕೂಡ ಪ್ರತಿಭಟನೆಯನ್ನ ನಡೆಸಿದ್ವು. ವಾರ್ಡನ್ ಅಮಾನತು ಮಾಡುವಂತೆ ಆಕ್ರೋಶ ವ್ಯಕ್ತಪಡಿಸಲಾಯಿತು. ಕಡೆಗೂ ಈ ಒತ್ತಡಕ್ಕೆ ಮಣಿದ ಶಿಕ್ಷಣ ಇಲಾಖೆ, ಕಾಮುಕನಿಗೆ ಮನೆಯ ದಾರಿ ತೋರಿಸಿದೆ. ವಾರ್ಡನ್ ವಸಂತರಾವ್​ನ ಅಮಾನತು ಮಾಡಲಾಗಿದೆ.
ಒಟ್ನಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವೆಸಗಿ, ಸಲೀಸಾಗಿ ಪಾರಾಗಬಹುದು ಅಂತಾ ಅಂದುಕೊಂಡಿದ್ದ ಕಿರಾತಕನಿಗೆ ಸರಿಯಾಗಿ ಪಾಠ ಕಲಿಸಲಾಗಿದೆ. ಘಟನೆ ಕುರಿತು ‘ಪೋಕ್ಸೋ’ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಆರೋಪಿ ವಾರ್ಡನ್ ವಸಂತರಾವ್​ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Click on your DTH Provider to Add TV9 Kannada