ಪುಣೆ: ಕೊರೊನಾ 2ನೆಯ ಅಲೆಯಿಂದ ಚೇತರಿಸಿಕೊಳ್ಳುವ ಹೊತ್ತಿನಲ್ಲಿ 3 ನೆಯ ಅಲೆ ಅಪ್ಪಳಿಸುವುದಕ್ಕೂ ಮುನ್ನ… ಭಾರತದಲ್ಲಿ ಹೊಸ ಪ್ರಭೇದದ ವೈರಸ್ ಪತ್ತೆಯಾಗಿದೆ! ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ( Pune National Institute of Virology -NIV) ವೈರಸ್ ಜೆನೋಮ್ ಸಿಕ್ವೇನ್ಸಿಂಗ್ ವೇಳೆ ಈ ಹೊಸ ಪ್ರಭೇದ ಪತ್ತೆಯಾಗಿದೆ. ಇದು ಇನ್ನೂ ಹೆಚ್ಚು ಅಪಾಯಕಾರಿ ಎಂಬದು ಆತಂಕಕಾರಿಯಾಗಿದೆ!
ಬ್ರೆಜಿಲ್, ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದವರ ಮೂಗು, ಗಂಟಲು ದ್ರವ ಪರೀಕ್ಷೆಯ ವೇಳೆ ಹೊಸ ಪ್ರಭೇದ ಪತ್ತೆಯಾಗಿರುವುದು ಗಮನಾರ್ಹವಾಗಿದೆ. ಹೊಸ ಪ್ರಭೇದದ ವೈರಸ್‌ಗೆ B.1.1.28.2 ಎಂದು ನಾಮಕರಣ ಮಾಡಲಾಗಿದೆ. ಹೊಸ ವೈರಸ್‌ನಿಂದ ತೂಕ ಇಳಿಕೆ, ಶ್ವಾಸಕೋಶಕ್ಕೆ ತೊಂದರೆಯಾಗಲಿದೆ. ವೈರಾಣು ಮರುಸೃಷ್ಟಿಯಿಂದ ಉಸಿರಾಟಕ್ಕೆ ತೊಂದರೆಯಾಗುವುದಾಗಿ ತಿಳಿದುಬಂದಿದೆ.
ಅನಾಹುತಕಾರಿ ಅಂದ್ರೆ ಈ ಹೊಸ B.1.1.28.2 ತಳಿ ಕೊರೊನಾ ಸೋಂಕಿನ ವಿರುದ್ಧ ವ್ಯಾಕ್ಸಿನ್ ಪ್ರಭಾವ ಬೀರುವುದು ಅನುಮಾನವಾಗಿದೆ. ಆದರೂ ಕೋವ್ಯಾಕ್ಸಿನ್ (covaxin) ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.
ಕೊರೊನಾ ಮ್ಯೂಟೆಂಟ್ ತಳಿಗಳ ಬಗ್ಗೆ ನಿಗಾ ವಹಿಸಲುಭಾರತ ಸರ್ಕಾರ ಈಗಾಗಲೇ 10 ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಸುಮಾರು 30 ಸಾವಿರ ಮಾದರಿಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ.
(Pune NIV lab Finds New CoronaVirus Variant B.1.1.28.2 detected from samples from international travellers from UK and Brazil)
ಇದನ್ನು ಓದಿ:
ಕೊರೊನಾ ಹೊಸ ಪ್ರಭೇದದ ಬಗ್ಗೆ ಕಟ್ಟೆಚ್ಚರವಹಿಸಿ : ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ
Published On - 10:15 am, Tue, 8 June 21