ಮುಂಬೈ: ಮನೆಯ ಕಿಟಕಿ ಅಥವಾ ಬಾಗಿಲು ಮುರಿದು ಒಳನುಗ್ಗಿದ್ದ ಚೋರರು ಮನೆಯಲ್ಲಿದ್ದ ಚಿನ್ನ, ಒಡವೆ ಹಣವನ್ನೆಲ್ಲಾ ಕದ್ದು ಪರಾರಿಯಾದರು ಅನ್ನೋ ಸುದ್ದಿನ ನಾವೆಲ್ಲರೂ ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗೃಹಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಅವುಗಳು ಸಹ ಕದಿಯಲು ಯೋಗ್ಯವೆಂಬಂತೆ ಭಾಸವಾಗುತ್ತಿದೆ.
ಅಲ್ಲಿಗೂ ಸೈಕಲ್ ಗ್ಯಾಪ್ನಲ್ಲಿ 9 ಮೂಟೆ ಮಾರಿಬಿಟ್ಟಿದ್ದಾರೆ!
ಅಕ್ಟೋಬರ್ 21ರಂದು ರೈತನೊಬ್ಬ ತನ್ನ ಉಗ್ರಾಣದಲ್ಲಿ ಶೇಖರಿಸಿದ್ದ ಈರುಳ್ಳಿ ಮೂಟೆಗಳನ್ನು ಈ ಕಳ್ಳ ಮಹಾಶಯರು ಹೊತ್ತೊಯ್ದಿದ್ದರು. ಇನ್ನು ರೈತ ನೀಡಿದ ದೂರಿನನ್ವಯ ಖದೀಮರನ್ನು ಬೆನ್ನಟಿದ ಪೊಲೀಸರು ಎಲ್ಲರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದ ಹಾಗೆ, ಈರುಳ್ಳಿ ಕಳ್ಳರು ಅರೆಸ್ಟ್ ಆಗೋ ಸೈಕಲ್ ಗ್ಯಾಪ್ನಲ್ಲಿ 9 ಮೂಟೆ ಮಾರಿಬಿಟ್ಟಿದ್ದಾರೆ ಎಂದು ಖಾಕಿ ಪಡೆ ಮಾಹಿತಿ ನೀಡಿದೆ. ಕದ್ದ ಈರುಳ್ಳಿ ಒಟ್ಟು ಮೌಲ್ಯ ಸುಮಾರು 2.35 ಲಕ್ಷ ರೂಪಾಯಿ ಇದ್ದು ಈರುಳ್ಳಿ ಸಹ ಕಳ್ಳರ ಕೈಚಳಕಕ್ಕೆ ಒಳಗಾಗುವಂಥ ಸೂಕ್ತ ಟಾರ್ಗೆಟ್ ಆಗಿ ಪರಿಣಮಿಸಿದೆ.