ಚೀನಾದ ಕಮ್ಯುನಿಸ್ಟ್ ಪಾರ್ಟಿ ಪ್ರಜಾಪ್ರಭುತ್ವದ ಮಿತ್ರನಲ್ಲ -ಮೋದಿ ಭೇಟಿ ಬಳಿಕ ಅಮೆರಿಕ ಕಾರ್ಯದರ್ಶಿ ಹೇಳಿಕೆ
ದೆಹಲಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪ್ರಜಾಪ್ರಭುತ್ವದ ಮಿತ್ರನಲ್ಲ ಎಂದು ಚೀನಾದ ವಿರುದ್ಧ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ವಾಗ್ದಾಳಿ ನಡೆಸಿದರು. ಭಾರತ-ಅಮೆರಿಕ ಹೊಸ ಯುಗದ ಆಕಾಂಕ್ಷೆಯತ್ತ ಹೆಜ್ಜೆ ಹಾಕ್ತಿವೆ ಎಂದು ಪಾಂಪಿಯೋ ಹೇಳಿದರು. ಜೊತೆಗೆ, ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಪಾಂಪಿಯೋ ಶ್ರದ್ಧಾಂಜಲಿ ಸಹ ಸಲ್ಲಿಸಿದರು. ದೆಹಲಿಯಲ್ಲಿ ಭಾರತ-ಅಮೆರಿಕ ಸಚಿವರ ಮಟ್ಟದ ಸಭೆಯ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಮಾತನಾಡಿದರು. ಹೈದರಾಬಾದ್ ಹೌಸ್‌ನಲ್ಲಿ 2+2 ಸಚಿವರ ಮಟ್ಟದ ಸಭೆ […]
ದೆಹಲಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪ್ರಜಾಪ್ರಭುತ್ವದ ಮಿತ್ರನಲ್ಲ ಎಂದು ಚೀನಾದ ವಿರುದ್ಧ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ವಾಗ್ದಾಳಿ ನಡೆಸಿದರು. ಭಾರತ-ಅಮೆರಿಕ ಹೊಸ ಯುಗದ ಆಕಾಂಕ್ಷೆಯತ್ತ ಹೆಜ್ಜೆ ಹಾಕ್ತಿವೆ ಎಂದು ಪಾಂಪಿಯೋ ಹೇಳಿದರು. ಜೊತೆಗೆ, ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಪಾಂಪಿಯೋ ಶ್ರದ್ಧಾಂಜಲಿ ಸಹ ಸಲ್ಲಿಸಿದರು.
ದೆಹಲಿಯಲ್ಲಿ ಭಾರತ-ಅಮೆರಿಕ ಸಚಿವರ ಮಟ್ಟದ ಸಭೆಯ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಮಾತನಾಡಿದರು. ಹೈದರಾಬಾದ್ ಹೌಸ್‌ನಲ್ಲಿ 2+2 ಸಚಿವರ ಮಟ್ಟದ ಸಭೆ ಜರುಗಿತು. ಸಭೆಯಲ್ಲಿ ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಇಲಾಖೆ ಸಚಿವ ಜೈಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ಅಮೆರಿಕ ರಕ್ಷಣಾ ಸಚಿವ ಮಾರ್ಕ್ ಎಸ್ಪರ್ ಭಾಗಿಯಾದರು.
ಭಾರತ-ಅಮೆರಿಕದ ನಡುವೆ ಐದು ಒಪ್ಪಂದಗಳಿಗೆ ಸಹಿ ಭಾರತ-ಅಮೆರಿಕದ ನಡುವೆ ಐದು ಒಪ್ಪಂದಗಳಿಗೆ ಸಹಿಯಾಗಿದೆ. 2+2 ಸಚಿವರ ಮಟ್ಟದ ಸಭೆಯಲ್ಲಿ ಐದು ಒಪ್ಪಂದಕ್ಕೆ ಸಹಿಯಾಗಿದ್ದು ಬೇಸಿಕ್ ಎಕ್ಸ್ಚೇಂಜ್ ಮತ್ತು ಕೋಆಪರೇಷನ್ ಒಪ್ಪಂದಕ್ಕೆ ಉಭಯ ದೇಶಗಳ ನಾಯಕರು ಸಹಿ ಹಾಕಿದರು. ಇದರಿಂದ, ಭಾರತವು ಅಮೆರಿಕದ ಸ್ಯಾಟಲೈಟ್ ಬಳಸಬಹುದು. ಭಾರತ-ಅಮೆರಿಕದ ನಡುವೆ ಮಾಹಿತಿ ವಿನಿಮಯವಾಗಲಿದೆ. ಜೊತೆಗೆ, ರಕ್ಷಣಾ ಇಲಾಖೆ ರಹಸ್ಯ ಮಾಹಿತಿಗಳು ಕೂಡ ವಿನಿಮಯ ಮಾಡಬಹುದು. ಇದರಿಂದ ಭಾರತಕ್ಕೆ ರಕ್ಷಣೆಯ ವಿಷಯದಲ್ಲಿ ಭಾರಿ ನೆರವು ಆಗಲಿದೆ ಎಂದು ಹೇಳಲಾಗಿದೆ.
ಇನ್ನು ಸಭೆಯ ಮುಂಚೆ ಮೈಕ್ ಪಾಂಪಿಯೋ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಭೇಟಿಯಾದರು. ಈ ವೇಳೆ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಅಮೆರಿಕ ರಕ್ಷಣಾ ಸಚಿವ ಮಾರ್ಕ್ ಎಸ್ಪರ್ ಸಹ ಉಪಸ್ಥಿತರಿದ್ದರು. ಈ ಮುಂಚೆ, ಪಾಂಪಿಯೋ ಹಾಗೂ ಮಾರ್ಕ್ ಎಸ್ಪರ್‌ರಿಂದ ರಾಜಧಾನಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.