ಪುಣೆಯಲ್ಲಿ ಬಿಜೆಪಿಯ ರಾಜ್ಯಸಭಾ ಸಂಸದೆ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಹಸಿರು ಗೋಡೆಗೆ ಕೇಸರಿ ಬಣ್ಣ ಬಳಿದಿರುವುದು ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ ನಾಯಕಿಯ ಕಾರ್ಯವೈಖರಿಯನ್ನು ಉದ್ಧವ್ ಸೇನಾ ನಾಯಕ ಪ್ರಶ್ನಿಸಿದ್ದಾರೆ. ಪುಣೆ ನಗರದ ಸದಾಶಿವ ಪೇಠೆಯಲ್ಲಿ ಗೋಡೆಗೆ ಹಸಿರು ಬಣ್ಣ ಬಳಿದು ಹೂವುಗಳನ್ನು ಹಾಕಲಾಗಿತ್ತು.
ಇದು ಗಮನಕ್ಕೆ ಬಂದ ತಕ್ಷಣ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಆ ಜಾಗಕ್ಕೆ ತೆರಳಿ ಹಸಿರು ಬಣ್ಣದ ಮೇಲೆ ಕೇಸರಿ ಬಣ್ಣ ಬಳಿದು ಗಣೇಶನ ಫೋಟೊ ಇರಿಸಿದ್ದಾರೆ. ಜಾಗೃತ ಹಿಂದೂಗಳಾದ ನಾವು ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರತ್ತ ಗಮನ ಹರಿಸಬೇಕು ಎಂದು ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಮನವಿ ಮಾಡಿದ್ದಾರೆ. ಈ ಸ್ಥಳದಲ್ಲಿ ಕೇಸರಿ ಬಣ್ಣ ಬಳಿದಿರುವ ಫೋಟೋಗಳು ಮತ್ತು ಸಂಬಂಧಿತ ಪೋಸ್ಟ್ ಅನ್ನು ಮೇಧಾ ಕುಲಕರ್ಣಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಜ್ಞಾನಪ್ರಬೋಧಿನಿ ಶಾಲೆಯ ಮುಂದಿನ ರಸ್ತೆಗೆ ಹಸಿರು ಬಣ್ಣ ಬಳಿದು ಹೂಮಾಲೆ, ಹೂ, ಅಗರಬತ್ತಿಗಳಿಂದ ಪೂಜೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಹಾಗೂ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಬಗ್ಗೆ ಮಾಹಿತಿ ಪಡೆದ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಸೇರಿದಂತೆ ಕೆಲವರು ಹಸಿರು ಬಣ್ಣ ಬಳಿದಿದ್ದ ಗೋಡೆಗೆ ಮತ್ತೆ ಕೇಸರಿ ಬಣ್ಣ ಬಳಿದು ಗಣೇಶನ ಫೋಟೋ ಹಾಕಿದ್ದರು. ಈ ಪ್ರಕರಣ ಪುಣೆ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ .
ಮತ್ತಷ್ಟು ಓದಿ:ಬೆಳಗಾವಿ: ‘ಜೈ ಮಹಾರಾಷ್ಟ್ರ’ ಎಂದು ಬರೆದು ಪುಂಡಾಟಿಕೆ ಮೆರೆದಿದ್ದ ಎಂಇಎಸ್ ಪುಂಡರ ಬಂಧನ
ಇದು ಪಿತೂರಿಯ ಭಾಗ ಎಂದು ಬಣ್ಣಿಸಿದ ಬಿಜೆಪಿ ಸಂಸದರು, ಪುಣೆಯಲ್ಲಿ ಮಾತ್ರವಲ್ಲ, ಮಹಾರಾಷ್ಟ್ರ ಸೇರಿದಂತೆ ಇತರ ಹಲವು ಕಡೆಗಳಲ್ಲಿ ಇಂತಹ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಿವೆ. ಪ್ರಜ್ಞಾಪೂರ್ವಕ ಹಿಂದೂವಾಗಿ ನಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನಹರಿಸಿ ಕ್ರಮ ತೆಗೆದುಕೊಳ್ಳೋಣ ಎಂದಿರುವ ಸಂಸದೆ ಇದರೊಂದಿಗೆ ತಮ್ಮ ಫೋನ್ ನಂಬರ್ ಕೂಡ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ