ಕೊನೆಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಪಂಜಾಬ್ ಸಿಎಮ್ ಅಮರಿಂದರ್ ಸಿಂಗ್

|

Updated on: Jul 06, 2021 | 9:19 PM

ಸೋನಿಯಾ ಅವರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದರೊಂದಿಗೆ ಮಾತಾಡಿದ ಸಿಂಗ್ ಅವರು, ‘ಕಾಂಗ್ರೆಸ್ ಅಧ್ಯಕ್ಷೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಪಂಜಾಬನಲ್ಲಿ ಜಾರಿಗೊಳಿಸಲಾಗುತ್ತದೆ. ಅವರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಸಮ್ಮತವಾಗಿರುತ್ತವೆ,’ ಅಂತ ಹೇಳಿದರು

ಕೊನೆಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಪಂಜಾಬ್ ಸಿಎಮ್ ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್ ಮತ್ತು ಸೋನಿಯಾ ಗಾಂಧಿ
Follow us on

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಕಡೆಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ದರ್ಶನ ಭಾಗ್ಯ ಮಂಗಳವಾರ ಸಿಕ್ಕಿದೆ. ಪಂಜಾಬ್​ ಕಾಂಗ್ರೆಸ್​ ಘಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇಡೀ ದೇಶದ ಗಮನ ಸೆಳೆದಿದ್ದು ಸಿಂಗ್ ಅವರ ಕಡು ವೈರಿಯಾಗಿ ಪರಿಣಮಿಸಿರುವ ನವಜೋತ್​ ಸಿಂಗ್ ಕಳೆದ ವಾರ ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿಯನ್ನು ಬೇಟಿಯಾದ ನಂತರ ಮುಖ್ಯಮಂತ್ರಿಗಳು ಸೋನಿಯಾ ಅವರನ್ನು ಬೇಟಿಯಾಗಿರುವುದು ರಾಜಕೀಯ ವಲಯಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಭೇಟಿಯ ನಂತರ ಪಿಟಿಐನೊಂದಿಗೆ ಮಾತಾಡಿದ ಸಿಂಗ್, ಪಂಜಾಬ ಕಾಂಗ್ರೆಸ್ ಸಂಘಟನೆಯಲ್ಲಿ ಸೋನಿಯಾ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ತಮ್ಮ ಸಮ್ಮತಿ ಇದೆ ಎಂದು ಹೇಳಿದರು. ಸೋನಿಯಾ ಮತ್ತು ಸಿಂಗ್ ನಡುವೆ ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಯಿತು.

ರಾಹುಲ್ ಗಾಂಧಿ ಮತ್ತು ಪಂಜಾಬ ಕಾಂಗ್ರೆಸ್​ನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಸೋನಿಯಾ ರಚಿಸಿರುವ ಮೂರು ಸದಸ್ಯರರ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಸಭೆ ನಡೆಯುವಾಗ ಕಾಂಗ್ರೆಸ್​ ಅಧ್ಯಕ್ಷೆಯೊಂದಿಗಿದ್ದರು. ಮುಂದಿನ ವರ್ಷ ಪಂಜಾಬನಲ್ಲಿ ವಿಧಾನ ಸಬೆ ಚುನಾವಣೆ ನಡೆಯಲಿರುವುದರಿಂದ ಮತ್ತು ಅಲ್ಲಿನ ಕಾಂಗ್ರೆಸ್ ನಾಯಕರ ನಡುವೆ ನಡೆಯುತ್ತಿರುವ ಒಳಗಜಗಳ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಸಭೆ ಮಹತ್ವ ಪಡೆದುಕೊಂಡಿದೆ.

2015 ರಲ್ಲಿ ಗುರು ಗ್ರಂಥ್ ಸಾಹಿಬ್​ಗೆ ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಅಮರಿಂದರ್ ಸರ್ಕಾರಕ್ಕೆ ಆಗಿರುವ ಕಾನೂನಿನ ಹಿನ್ನಡೆಗೆ ಸಂಬಂಧಿಸಿದಂತೆ ಸಿದ್ಧು ಅವರು ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ಸೋನಿಯಾ ಅವರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದರೊಂದಿಗೆ ಮಾತಾಡಿದ ಸಿಂಗ್ ಅವರು, ‘ಕಾಂಗ್ರೆಸ್ ಅಧ್ಯಕ್ಷೆ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಪಂಜಾಬನಲ್ಲಿ ಜಾರಿಗೊಳಿಸಲಾಗುತ್ತದೆ. ಅವರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಸಮ್ಮತವಾಗಿರುತ್ತವೆ,’ ಅಂತ ಹೇಳಿದರು. ತಾವು ದೆಹಲಿಗೆ ಬಂದಾಗಲೊಮ್ಮೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವುದಾಗಿ ಹೇಳಿದ ಸಿಂಗ್ ಮಂಗಳವಾರ ನಡೆದ ಸಭೆ ಅದೇ ತೆರನಾಗಿತ್ತು ಎಂದು ಹೇಳಿದರು. ‘ಸಿದ್ಧು ಸಾಹಿಬ್ ಅವರ ಬಗ್ಗೆ ಹೆಚ್ಚಿನದೇನೂ ನನಗೆ ಗೊತ್ತಿಲ್ಲ. ನಾನು ಕೇವಲ ನಮ್ಮ ಸರ್ಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ಮಾತ್ರ ಚರ್ಚಿಸಿದೆ,’ ಎಂದು ಅವರು ಸಭೆಯಲ್ಲಿ ಸಿದ್ಧು ಅವರ ಪಾತ್ರದ ಬಗ್ಗೆ ಚರ್ಚಿಸಲಾಯಿತೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಸೋನಿಯಾ ಅವರು ರಚಿಸಿದ ಸಮಿತಿಯನ್ನು ಭೇಟಿಯಾಗಲು ಸಿಂಗ್​ ಕಳೆದ ತಿಂಗಳು ಎರಡು ಬಾರಿ ದೆಹಲಿಗೆ ಹೋಗಿದ್ದರು. ಪಂಜಾಬಿನ ಪ್ರಮುಖ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿರುವ ಖರ್ಗೆ ನೇತೃತ್ವದ ಸಮಿತಿಯು ಸಿಂಗ್ ಅವರಿಗೆ ಹಲವಾರು ಸಲಹೆಗಳನ್ನು ನೀಡಿತ್ತು.

ಅದಾದ ಮೇಲೆ ರಾಹುಲ್ ಗಾಂಧಿಯವರು, ಪಕ್ಷದ ಶಾಸಕರು, ಸಂಸದರು ಸೇರಿದಂತೆ ಹಲವಾರು ನಾಯಕರನ್ನು ಭೇಟಿ ಮಾಡಿ ಅಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಹೈಕಮಾಂಡ್ ಜಗಳನಿರತ ನಾಯಕರೊಂದಿಗೆ ಸಭೆಗಳನ್ನು ನಡೆಸಿ ಅವರನ್ನು ಶಾಂತಗೊಳಿಸುವ ಪ್ರಯತ್ನ ನಡೆಸುತ್ತಿದೆಯಾದರೂ ಪಂಜಾಬ ಕಾಂಗ್ರೆಸ್​ನಲ್ಲಿ ಹೊತ್ತಿರುವ ಉರಿ ಇನ್ನೂ ಆರಿಲ್ಲ.

ಇದನ್ನೂ ಓದಿ: ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಅಮರಿಂದರ್ ಸಿಂಗ್ ಜತೆ ಕೆಲಸ ಮಾಡಲು ಸಿದ್ಧ: ನವಜೋತ್ ಸಿಂಗ್ ಸಿಧು