ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿವಾಸಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. ನಿವಾಸದೆದುರು ಕಸ ಸುರಿದಿದ್ದಕ್ಕಾಗಿ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ದಂಡ ವಿಧಿಸಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಟಾಲಿಯನ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ಹರ್ಜಿಂದರ್ ಸಿಂಗ್ ಅವರ ಹೆಸರಿನಲ್ಲಿ ಚಲನ್ ನೀಡಲಾಗಿದೆ.
ಸ್ಥಳೀಯ ಬಿಜೆಪಿ ಪುರಸಭಾ ಸದಸ್ಯ ಮಹೇಶಿಂದರ್ ಸಿಂಗ್ ಸಿಧು ಮಾತನಾಡಿ, ಕೆಲ ದಿನಗಳಿಂದ ಮುಖ್ಯಮಂತ್ರಿ ನಿವಾಸದ ಮನೆ ಸಂಖ್ಯೆ-7ರ ಹಿಂಭಾಗದಲ್ಲಿ ಸಿಬ್ಬಂದಿಯಿಂದ ಕಸ ವಿಲೇವಾರಿ ಕುರಿತು ನಿವಾಸಿಗಳಿಂದ ದೂರುಗಳು ಬರುತ್ತಿತ್ತು. ಮನೆ ಸಂಖ್ಯೆ 44, 45, 6 ಮತ್ತು 7 ಮುಖ್ಯಮಂತ್ರಿ ನಿವಾಸದ ಭಾಗವಾಗಿದೆ ಎಂದು ಹೇಳಿದರು.
ಇನ್ನು ಸಿಎಂ ನಿವಾಸದ ಸಿಬ್ಬಂದಿಗೂ ಮನೆಯಿಂದ ಹೊರಗೆ ತ್ಯಾಜ್ಯ ಎಸೆಯದಂತೆ ಹಲವು ಬಾರಿ ಮನವಿ ಮಾಡಿದ್ದರೂ ನಿಲ್ಲಿಸಿಲ್ಲ ಎಂದರು. ಹೀಗಾಗಿ ಚಲನ್ ನೀಡಲಾಗಿದೆ ಎಂದರು. ಮನೆ ಸಂಖ್ಯೆ 44, 45, 6 ಮತ್ತು 7 ಮುಖ್ಯಮಂತ್ರಿಗಳ ನಿವಾಸದ ಭಾಗವಾಗಿದೆ ಎಂದು ಬಿಜೆಪಿ ನಾಯಕ ಹೇಳಿದರು.
ಕಸ ಹಾಕುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದ್ದ ಹಿನ್ನೆಲೆ ಚಂಡೀಗಢ ನಗರ ಪಾಲಿಕೆ ಶನಿವಾರ ಬೆಳಗ್ಗೆ 10 ಸಾವಿರ ರೂ. ದಂಡದ ಚಲನ್ ನೀಡಿದೆ. ಅಂದಹಾಗೆ, ಈ ಚಲನ್ ನೀಡಿರುವುದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಹೆಸರಿನಲ್ಲಿ ಅಲ್ಲ.
ಬದಲಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ ಬೆಟಾಲಿಯನ್ ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಹರ್ಜಿಂದರ್ ಸಿಂಗ್ ಹೆಸರಿನಲ್ಲಿ ಎಂಬುದು ಗೊತ್ತಾಗಿದೆ. ಮನೆ ನಂಬರ್ – 7, ಸೆಕ್ಟರ್ – 2, ಚಂಡೀಗಢ ಎಂಬ ಮನೆಯ ವಿಳಾಸಕ್ಕೆ ಈ 10 ಸಾವಿರ ರೂ. ದಂಡ ಮೊತ್ತದ ಚಲನ್ ಅನ್ನು ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.