ಪಂಜಾಬ್: 1.5 ಕೋಟಿ ರೂ. ಲಾಟರಿ ಗೆದ್ದ ದಂಪತಿ, ಆದರೆ ಮನೆಯನ್ನೇ ತೊರೆಯಬೇಕಾಯ್ತು
ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಈ ದಿನಗೂಲಿ ಕಾರ್ಮಿಕನ ಕುಟುಂಬದಲ್ಲಿ ಈಗ ಸಂಭ್ರಮವೋ ಸಂಭ್ರಮ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಕೋಟ್ಯಧಿಪತಿಯಾಗಿದ್ದಾರೆ. ಆದರೆ ಈ ಹಣದಿಂದಾಗಿ ಅವರು ಮನೆಯನ್ನು ತೊರೆಯಬೇಕಾಯಿತು. ದಂಪತಿಗೆ ಸಂತೋಷ ಹಾಗೂ ಭಯ ಒಟ್ಟೊಟ್ಟಿಗೆ ಆಗಿದೆ. ಫರೀದ್‌ಕೋಟ್ ಜಿಲ್ಲೆಯ ಸೈಡೆಕೆ ಗ್ರಾಮದ ದಿನಗೂಲಿ ಕೃಷಿ ಕಾರ್ಮಿಕರಾದ ನಸೀಬ್ ಕೌರ್ ಮತ್ತು ಅವರ ಪತಿ ರಾಮ್ ಸಿಂಗ್, ಪಂಜಾಬ್ ರಾಜ್ಯ ಲಾಟರಿಯಲ್ಲಿ 1.5 ಕೋಟಿ ರೂ. ಗಳಿಸಿದ್ದರು.

ಫರೀದ್‌ಕೋಟ್, ಡಿಸೆಂಬರ್ 10: ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಈ ದಿನಗೂಲಿ ಕಾರ್ಮಿಕನ ಕುಟುಂಬದಲ್ಲಿ ಈಗ ಸಂಭ್ರಮವೋ ಸಂಭ್ರಮ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಲಾಟರಿ(Lottery)ಯಿಂದ ಕೋಟ್ಯಧಿಪತಿಯಾಗಿದ್ದಾರೆ. ಆದರೆ ಈ ಹಣದಿಂದಾಗಿ ಅವರು ಮನೆಯನ್ನು ತೊರೆಯಬೇಕಾಯಿತು. ದಂಪತಿಗೆ ಸಂತೋಷ ಹಾಗೂ ಭಯ ಒಟ್ಟೊಟ್ಟಿಗೆ ಆಗಿದೆ. ಫರೀದ್‌ಕೋಟ್ ಜಿಲ್ಲೆಯ ಸೈಡೆಕೆ ಗ್ರಾಮದ ದಿನಗೂಲಿ ಕೃಷಿ ಕಾರ್ಮಿಕರಾದ ನಸೀಬ್ ಕೌರ್ ಮತ್ತು ಅವರ ಪತಿ ರಾಮ್ ಸಿಂಗ್, ಪಂಜಾಬ್ ರಾಜ್ಯ ಲಾಟರಿಯಲ್ಲಿ 1.5 ಕೋಟಿ ರೂ. ಗಳಿಸಿದ್ದರು.
ಖರ್ಚು ಮಾಡಿದ್ದು ಕೇವಲ 200 ರೂ. ಲಾಟರಿ ಗೆದ್ದ ದಂಪತಿಗೆ ಸಂತೋಷದ ಜತೆ ಭಯ ಹಾಗೂ ಆತಂಕವೂ ಎದುರಾಗಿತ್ತು. ಈ ಸುದ್ದಿ ಅಕ್ಕ ಪಕ್ಕದ ಮನೆಯವರೆಗೆ ಸುದ್ದಿ ತಿಳಿದರೆ ಹಣ ಕಳ್ಳತನವಾಗಬಹುದು ಅಥವಾ ಯಾರಾದರೂ ಹಣವನ್ನು ಕೇಳಬಹುದು ಎನ್ನುವ ಭಯದಲ್ಲಿ ಮನೆಯನ್ನೇ ಬಿಟ್ಟು ಹೋಗಿದ್ದಾರೆ.
ತಮ್ಮ ಸುರಕ್ಷತೆಯ ದೃಷ್ಟಿಯಿಂದ ಭಯದಲ್ಲಿ ಕುಟುಂಬವು ಮನೆಗೆ ಬೀಗ ಹಾಕಿ, ಮೊಬೈಲ್ ಫೋನ್ಗಳನ್ನು ಸ್ವಿಚ್ ಆಫ್ ಮಾಡಿ, ರಹಸ್ಯ ಸ್ಥಳಕ್ಕೆ ಹೋಗಿತ್ತು. ಮಂಗಳವಾರ ಪರಿಸ್ಥಿತಿಯ ಬಗ್ಗೆ ತಿಳಿದ ಫರೀದ್‌ಕೋಟ್ ಪೊಲೀಸರು ತಕ್ಷಣವೇ ಕುಟುಂಬವನ್ನು ಸಂಪರ್ಕಿಸಿ ಧೈರ್ಯ ತುಂಬಿ ರಕ್ಷಣೆ ನೀಡಿದರು.
ಮತ್ತಷ್ಟು ಓದಿ: 34 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ: ಆದ್ರೂ ಒಂದು ದಿನವೂ ಸುಖದ ಜೀವನ ನಡೆಸಿಲ್ಲ
ನಸೀಬ್ ಕೌರ್ ಎಂಬ ಮಹಿಳೆ ಸುಮಾರು 15-20 ದಿನಗಳ ಹಿಂದೆ 200 ರೂ. ಮೌಲ್ಯದ ಲಾಟರಿ ಟಿಕೆಟ್ ಖರೀದಿಸಿದ್ದರು, ಅದರಲ್ಲಿ ಅವರು 1.5 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ತರ್ಲೋಚನ್ ಸಿಂಗ್ ಹೇಳಿದ್ದಾರೆ.
ತಮ್ಮ ಹಠಾತ್ ಸಂಪತ್ತಿನಿಂದ ಯಾರಾದರೂ ತಮಗೆ ಹಾನಿ ಮಾಡಬಹುದು ಅಥವಾ ಸುಲಿಗೆ ಬೇಡಿಕೆ ಇಡಬಹುದು ಎಂಬ ಭಯವನ್ನು ಕುಟುಂಬ ವ್ಯಕ್ತಪಡಿಸಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಯಾವಾಗಲೂ ಇದ್ದಾರೆ ಮತ್ತು ಅವರ ಕುಟುಂಬಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ನಾವು ಅವರಿಗೆ ಭರವಸೆ ನೀಡಿದ್ದೇವೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




