ಪಂಜಾಬ್ ಸರ್ಕಾರದಲ್ಲಿ ಭಿನ್ನಮತದ ನಡುವೆಯೇ ಸಚಿವರ ವಿರುದ್ಧದ ಮೀಟೂ ಪ್ರಕರಣ ಮುನ್ನೆಲೆಗೆ

|

Updated on: May 18, 2021 | 12:56 PM

MeToo Case: ಮೂರು ವರ್ಷಗಳಿಂದ #MeToo ಪ್ರಕರಣದಲ್ಲಿ ಪಂಜಾಬ್ ಸಚಿವ ಚರಣಜಿತ್ ಸಿಂಗ್ ಚನ್ನಿ ಆರೋಪ ಎದುರಿಸುತ್ತಿದ್ದಾರೆ. ಚನ್ನಿ ಅವರು 2018 ರಲ್ಲಿ ಮಹಿಳಾ ಐಎಎಸ್ ಅಧಿಕಾರಿಗೆ ಅನುಚಿತ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ

ಪಂಜಾಬ್ ಸರ್ಕಾರದಲ್ಲಿ ಭಿನ್ನಮತದ ನಡುವೆಯೇ ಸಚಿವರ ವಿರುದ್ಧದ ಮೀಟೂ ಪ್ರಕರಣ ಮುನ್ನೆಲೆಗೆ
ಚರಣಜಿತ್ ಸಿಂಗ್ ಚನ್ನಿ
Follow us on

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಮ್ಮ ಸರ್ಕಾರದಲ್ಲಿ ಬಿಕ್ಕಟ್ಟು ಎದುರಿಸುತ್ತಿರುವ ಹೊತ್ತಲ್ಲಿಯೇ ಕೆಲವು ಸಚಿವರ ವಿರುದ್ಧದ ಹಳೇ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಬೇಕು ಎಂಬ ಕೂಗು ಎದ್ದಿದೆ. ಪಂಜಾಬ್‌ನ ಅನೇಕ ಕಾಂಗ್ರೆಸ್ ಶಾಸಕರು ಮತ್ತು ಸಚಿರವರು 2015 ರಲ್ಲಿ ಸಿಖ್ ಧರ್ಮಗ್ರಂಥ ಗುರು ಗ್ರಂಥ್  ಸಾಹೀಬ್ ಅವರ ಅಪವಿತ್ರತೆ ಮತ್ತು ಶಾಂತಿಯುತ ಪ್ರತಿಭಟನೆಯ ಸಮಯದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ಬಗ್ಗೆ ಸರ್ಕಾರದ ವಿರುದ್ಧ ದನಿಯೆತ್ತಿದ್ದಾರೆ.

ಮೂರು ವರ್ಷಗಳಿಂದ #MeToo ಪ್ರಕರಣದಲ್ಲಿ ಪಂಜಾಬ್ ಸಚಿವ ಚರಣಜಿತ್ ಸಿಂಗ್ ಚನ್ನಿ ಆರೋಪ ಎದುರಿಸುತ್ತಿದ್ದಾರೆ. ಚನ್ನಿ ಅವರು 2018 ರಲ್ಲಿ ಮಹಿಳಾ ಐಎಎಸ್ ಅಧಿಕಾರಿಗೆ ಅನುಚಿತ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಎಂದಿಗೂ ದೂರು ದಾಖಲಿಸಲಿಲ್ಲ ಮತ್ತು ಅಮರೀಂದರ್ ಸಿಂಗ್ ಅವರು ಈ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಈ ಆರೋಪಕ್ಕೆ ಸ್ಪಂದಿಸುವಂತೆ ಕೋರಿ ಪಂಜಾಬ್ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ನೋಟಿಸ್ ಕಳುಹಿಸುವುದರೊಂದಿಗೆ ಪ್ರಕರಣ ಸೋಮವಾರ ಮತ್ತೆ ಮುನ್ನೆಲೆಗೆ ಬಂದಿದೆ.

ಮಹಿಳಾ ಸಮಿತಿ ಮುಖ್ಯಸ್ಥೆ ಮನೀಷಾ ಗುಲಾಟಿ, ಇತ್ತೀಚೆಗೆ ಪಂಜಾಬ್‌ನ ಹೊರಗೆ ವರ್ಗಾವಣೆಯನ್ನು ಪಡೆದುಕೊಂಡಿದ್ದ ಅಧಿಕಾರಿಗೆ ನ್ಯಾಯ ದೊರಕಿಸಿಕೊಡಲು ಬಯಸುತ್ತೇನೆ ಎಂದು ಹೇಳಿದರು.

ಸಂತ್ರಸ್ತೆ ಈಗ ವರ್ಗಾವಣೆ ಪಡೆದುಪಂಜಾಬ್ ನಿಂದ ಹೊರಗೆ ಹೋಗಿದ್ದಾರೆ. ಐಎಎಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಹಾಗಾಗಿ ಪಂಜಾಬ್ ಸರ್ಕಾರಕ್ಕೆ ನೋಟಿಸ್ ಕಳುಹಿಸಿದ್ದೇನೆ. ರಾಜ್ಯ ಮುಖ್ಯ ಕಾರ್ಯದರ್ಶಿ ಮಹಿಳೆಯಾಗಿದ್ದಾಗ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಮಹಿಳೆಯಾಗಿದ್ದರೆ ಮಹಿಳಾ ಐಎಎಸ್ ಅಧಿಕಾರಿಗೆ ಹೇಗೆ ನ್ಯಾಯ ಸಿಗುವುದಿಲ್ಲ? ಒಂದು ವಾರದೊಳಗೆ ಸರ್ಕಾರ ಪ್ರತಿಕ್ರಿಯಿಸದೇ ಇದ್ದರೆ ನಾನು ಧರಣಿ ಪ್ರತಿಭಟನೆಗೆ ಕೂರುತ್ತೇನೆ ಎಂದು ಗುಲಾಟಿ ಹೇಳಿದರು.

ಮತ್ತೊಬ್ಬ ಕಾಂಗ್ರೆಸ್ ಶಾಸಕ ಮುಖ್ಯಮಂತ್ರಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಕಿ ತಂಡದ ಮಾಜಿ ನಾಯಕ ಪರಗತ್ ಸಿಂಗ್ ಸೋಮವಾರ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಕ್ಯಾಪ್ಟನ್ ಸಂದೀಪ್ ಸಂಧು ಅವರು ಕ್ರಮವನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಎಚ್ಚರಿಸಿದ್ದಾರೆ. ಭಾರತೀಯ ಹಾಕಿ ತಂಡದ ಮಾಜಿ ನಾಯಕನಾಗಿದ್ದರಿಂದ, ಅಂತಹ ಸಂದೇಶ ಬಂದಿರುವುದು ನನಗೆ ಆಘಾತವಾಯಿತು. ಆದರೆ ಪವಿತ್ರ ಮತ್ತು ಪೊಲೀಸ್ ಗುಂಡಿನ ಪ್ರಕರಣಗಳ ಬಗ್ಗೆ ಸತ್ಯವನ್ನು ಮಾತನಾಡುವುದು ಅವರಿಗೆ ಸ್ವೀಕಾರಾರ್ಹವಲ್ಲವಾದರೆ, ಅವರು ಏನು ಬೇಕಾದರೂ ಮಾಡಲಿ ಎಂದು ಶಾಸಕ ವಾಗ್ದಾಳಿ ನಡೆಸಿದ್ದಾರೆ.

ಪರಗತ್ ಸಿಂಗ್ ಅವರು ಮತ್ತೊಬ್ಬ ಕ್ರೀಡಾಪಟು-ರಾಜಕಾರಣಿ, ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರೊಂದಿಗೆ ಆಪ್ತರಾಗಿದ್ದಾರೆಂದು ಹೇಳಲಾಗುತ್ತದೆ.

ಸಿಧು ಅವರು ಕಳೆದ ವಾರ 2015 ರ ಘಟನೆಗಳ ಕುರಿತು ಸರಣಿ ಟ್ವೀಟ್‌ಗಳಲ್ಲಿ ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡಿದ್ದರು. ಸಿಧು ವಿರುದ್ಧದ ಆರೋಪಗಳನ್ನು ಪಂಜಾಬ್ ವಿಜಿಲೆನ್ಸ್ ಬ್ಯೂರೋ ತನಿಖೆ ನಡೆಸುತ್ತಿದೆ ಎಂಬ ವರದಿಗಳು ಹೊರಬರುತ್ತಿದ್ದಂತೆ, ಸಿಂಗ್ ಅವರ ವಿರುದ್ಧ ಕ್ರಮಕೈಗೊಳ್ಳಲು ಸವಾಲೆಸೆದಿದ್ದರು.
ಕಳೆದ ವಾರ ಶಾಸಕರು ಮತ್ತು ಸಚಿವರಿಗಾಗಿ ನಡೆಸಿದ ಸಭೆಯಲ್ಲಿ ಈ ಮೂವರೂ ಭಾಗಿಯಾಗಿದ್ದು, ಸಚಿವರು ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸಭೆಯಲ್ಲಿ ಸುಖ್ಜಿಂದರ್ ರಾಂಧವಾ ಮತ್ತು ಪಾರ್ಟಪ್ ಬಜ್ವಾ ಕೂಡಾ ಭಾಗಿಯಾಗಿದ್ದರು.

ಇದನ್ನೂ ಓದಿ:  Smiling Buddha: ಕೊನೆಗೂ ಬುದ್ಧ ನಗುಬೀರಿದ: ಭಾರತದ ಮೊದಲ ನ್ಯೂಕ್ಲಿಯರ್ ಪರೀಕ್ಷೆ ಪೋಖ್ರಾನ್​ನಲ್ಲಿ ನಡೆದು ಇಂದಿಗೆ 47 ವರ್ಷ

ವಿಧಿಯಾಟಕ್ಕೆ ಹೊಣೆ ಯಾರು? ಕೊರೊನಾ ಸೋಂಕಿಗೆ ಅವಳಿ ಪುತ್ರರನ್ನು ಕಳೆದುಕೊಂಡ ಪೋಷಕರು

(Punjab Minister Charanjit Singh Channi faces action in a three year old MeToo case)