Viral Video ಹೀಗೂ ಉಂಟೆ…? ಬಡವರಿಗೆ ಸಲ್ಲಬೇಕಾದ ಉಚಿತ ಪಡಿತರವನ್ನು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದು, ತೆಗೆದುಕೊಂಡು ಹೋದರು! ಎಲ್ಲಿ?
ವೈರಲ್ ವಿಡಿಯೋ: ಬಡವರ ಆಸರೆಗಾಗಿ ಸರ್ಕಾರ ಪಡಿತರ ಅಕ್ಕಿ ನೀಡುತ್ತದೆ. ಆದರೆ ಇಲ್ಲಿ ಬೆಂಜ್ ಕಾರಿನಲ್ಲಿ ಪಡಿತರ ಸಾಮಾನು ಸಾಗಿಸುವುದು ಸಾಮಾನ್ಯವಾಗಿದೆ.
Viral Video: ಬಡವರ ಆಸರೆಗಾಗಿ ಸರ್ಕಾರ ಪಡಿತರ ಆಹಾರ ಪದಾರ್ಥಗಳನ್ನು (Ration) ತಿಂಗಳಾ ತಿಂಗಳ ನೀಡುತ್ತದೆ. ಆದರೆ ಇಲ್ಲಿ ಬೆಂಜ್ ಕಾರಿನಲ್ಲಿ (Mercedes Benz Car) ಪಡಿತರ ಸಾಮಗ್ರಿ ಸಾಗಿಸುತ್ತಿರುವುದು ತೀವ್ರ ಟೀಕೆ, ಕೆಂಗಣ್ಣಿಗೆ ಗುರಿಯಾಗುತ್ತಿದೆ. ವಿವರಗಳಿಗೆ ಹೋಗುವುದಾದರೆ… ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಉಚಿತ ರೇಷನ್ ತೆಗೆದುಕೊಳ್ಳಲು ವ್ಯಕ್ತಿಯೊಬ್ಬ ಬೆಂಜ್ ಕಾರಿನಲ್ಲಿ ಬಂದಿದ್ದ. ಪಂಜಾಬ್ ಸರ್ಕಾರ ನೀಡಿದ ಉಚಿತ ಪಡಿತರವನ್ನು ಬೆಂಜ್ ಕಾರಿನಲ್ಲಿ ತೆಗೆದುಕೊಂಡು ಹೋಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಉದಾರೀಕರಣದ ಫಲವಾದ ಯೋಜನೆಗಳು ದುರ್ಬಳಕೆ ಆಗುತ್ತಿವೆ ಎಂಬ ಟೀಕೆಗಳು ದೇಶದೆಲ್ಲೆಡೆ ಕೇಳಿ ಬರುತ್ತಿರುತ್ತದೆ. ಆದರೆ… ಪಡಿತರ ಅಂಗಡಿಗೆ ಬಂದವರು ಬೆಂಜ್ ಕಾರಿನಲ್ಲಿ ರೇಶನ್ ತೆಗೆದುಕೊಂಡು ಹೋಗಿದ್ದಾರೆ. ಆದರೆ ಬೆಂಜ್ ಕಾರಿನಲ್ಲಿ ರೇಶನ್ ತೆಗೆದುಕೊಂಡು ಹೋಗಿದ್ದು ಏಕೆ ಎಂಬುದಕ್ಕೆ ಬಳಿಕ ವಿವರಣೆ ನೀಡಿದ್ದಾರೆ. ಆ ವ್ಯಕ್ತಿಯ ಹೆಸರು ಸುಮಿತ್ ಶೈನಿ. ಕಾರು ಅವರದ್ದಲ್ಲವಂತೆ. ವಿದೇಶದಲ್ಲಿರುವ ತನ್ನ ಸಂಬಂಧಿಕರಿಗೆ ಸೇರಿದ್ದು ಎಂದು ಹೇಳಿಕೊಂಡಿದ್ದಾನೆ. ನನ್ನ ಮಕ್ಕಳು ಪಡಿತರ ಅಂಗಡಿಯಲ್ಲಿ ಸರದಿಯಲ್ಲಿ ನಿಂತಿದ್ದರು. ಅದರಂತೆ ಪಡಿತರ ತೆಗೆದುಕೊಂಡಿದ್ದಾರೆ. ಬಳಿಕ ಅದನ್ನು ಮನೆಗೆ ಕೊಂಡೊಯ್ಯಲು ಮನೆಯಲ್ಲಿರುವ ಬೆಂಜ್ ಕಾರು ತೆಗೆದುಕೊಂಡು ಬರುವಂತೆ ಹೇಳಿದ್ದರಿಂದ ತಾನು ಕಾರು ತಂದಿದ್ದಾಗಿ ತಿಳಿಸಿದ್ದಾರೆ. ತಾನು ಬಡವನಾಗಿದ್ದು, ತನ್ನ ಮಕ್ಕಳು ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಬೇಕಾದರೆ ತನಿಖೆ ನಡೆಸಬಹುದು ಎಂದಿದ್ದಾರೆ.
#Punjab person arrived in a Mercedes to buy free wheat under the Ata Dal scheme by Punjab Government. A video of #Hoshiarpur Naloyan Chowk is going viral pic.twitter.com/9WHYN6IOaq
— Parmeet Singh Bidowali (@ParmeetBidowali) September 6, 2022