2 ಕೋಟಿ ಮೌಲ್ಯದ ಹೆರಾಯಿನ್, ಥಾರ್ ಕಾರಿನೊಂದಿಗೆ ಸಿಕ್ಕಿಬಿದ್ದ ಪಂಜಾಬ್​ನ ಇನ್​ಸ್ಟಾಗ್ರಾಂ ಕ್ವೀನ್ ಮಹಿಳಾ ಕಾನ್‌ಸ್ಟೆಬಲ್

ಪಂಜಾಬ್ ಸರ್ಕಾರ ನಡೆಸುತ್ತಿರುವ ಮಾದಕ ದ್ರವ್ಯ ವಿರೋಧಿ ಅಭಿಯಾನ 'ಯುದ್ಧ್ ನಶೇಯಾನ್ ವಿರುಧ್' (ಮಾದಕ ದ್ರವ್ಯಗಳ ವಿರುದ್ಧ ಸಮರ)ದ ಭಾಗವಾಗಿ ಮಹಿಳಾ ಕಾನ್‌ಸ್ಟೆಬಲ್ ಅಮನ್‌ದೀಪ್ ಕೌರ್ ಅವರನ್ನು 17.71 ಗ್ರಾಂ ಹೆರಾಯಿನ್‌ನೊಂದಿಗೆ ಬಂಧಿಸಲಾಗಿದೆ. ಭಟಿಂಡಾದಲ್ಲಿ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಮಾದಕ ದ್ರವ್ಯಗಳ ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದ ನಂತರ ಪಂಜಾಬ್ ಪೊಲೀಸರು ಆಕೆಯನ್ನು ವಜಾಗೊಳಿಸಿದ್ದಾರೆ.

2 ಕೋಟಿ ಮೌಲ್ಯದ ಹೆರಾಯಿನ್, ಥಾರ್ ಕಾರಿನೊಂದಿಗೆ ಸಿಕ್ಕಿಬಿದ್ದ ಪಂಜಾಬ್​ನ ಇನ್​ಸ್ಟಾಗ್ರಾಂ ಕ್ವೀನ್ ಮಹಿಳಾ ಕಾನ್‌ಸ್ಟೆಬಲ್
Amandeep Kaur

Updated on: Apr 04, 2025 | 4:05 PM

ನವದೆಹಲಿ, ಏಪ್ರಿಲ್ 4: ಪಂಜಾಬ್​ನ ಭಟಿಂಡಾ ಜಿಲ್ಲೆಯಲ್ಲಿ 17.71 ಗ್ರಾಂ ಹೆರಾಯಿನ್ ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳಾ ಕಾನ್​ಸ್ಟೆಬಲ್ ಒಬ್ಬರನ್ನು ಬಂಧಿಸಲಾಗಿತ್ತು. ಅದಾದ ಒಂದು ದಿನದ ನಂತರ, ಪಂಜಾಬ್ ಪೊಲೀಸರು ಗುರುವಾರ ಆ ಮಹಿಳಾ ಕಾನ್‌ಸ್ಟೆಬಲ್ ಅನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿದೆ.  ಮೂಲತಃ ಮಾನ್ಸಾದಲ್ಲಿ ನಿಯೋಜನೆಗೊಂಡಿದ್ದ ಚಕ್ ಫತೇ ಸಿಂಗ್ ವಾಲಾ ನಿವಾಸಿ ಕಾನ್‌ಸ್ಟೆಬಲ್ ಅಮನ್‌ದೀಪ್ ಕೌರ್ (Amandeep Kaur) ಅವರನ್ನು ಭಾರತದ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಖ್‌ಚೈನ್ ಸಿಂಗ್ ಗಿಲ್ ತಿಳಿಸಿದ್ದಾರೆ.

“ಮಾದಕ ವಸ್ತುಗಳ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸೂಚನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಅಪರಾಧದ ಆದಾಯದ ಮೂಲಕ ಆ ಮಹಿಳಾ ಕಾನ್‌ಸ್ಟೆಬಲ್ ಸಂಪಾದಿಸಿರುವ ಎಲ್ಲಾ ಆಸ್ತಿಗಳ ಬಗ್ಗೆಯೂ ನಾವು ವಿಚಾರಣೆ ನಡೆಸುತ್ತೇವೆ. ಆಕೆಯ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ” ಎಂದು ಗಿಲ್ ಹೇಳಿದ್ದಾರೆ.

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು


“ನಮಗೆ ಸಿಕ್ಕ ಸುಳಿವಿನ ಮೇರೆಗೆ ಪೊಲೀಸರು ವಾಹನದ ಶೋಧ ನಡೆಸಿದಾಗ ಕಾರಿನ ಗೇರ್‌ಶಿಫ್ಟ್‌ಗೆ ಜೋಡಿಸಲಾದ ಪೆಟ್ಟಿಗೆಯೊಳಗೆ ಹೆರಾಯಿನ್ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಆ ಮಹಿಳಾ ಕಾನ್‌ಸ್ಟೆಬಲ್‌ ಅನ್ನು ತಕ್ಷಣವೇ ಬಂಧಿಸಲಾಯಿತು ಮತ್ತು ಅವರ ಕಾರನ್ನು ವಶಪಡಿಸಿಕೊಳ್ಳಲಾಯಿತು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು: ಸೈಬರ್ ವಂಚನೆಗಾಗಿ ಬಡ ಜನರ ಬ್ಯಾಂಕ್​ ಖಾತೆ ಬಳಕೆ, ಇಬ್ಬರ ಬಂಧನ

ಮಾದಕವಸ್ತು ಸಂಬಂಧಿತ ಅಪರಾಧಗಳಲ್ಲಿ ಭಾಗಿಯಾಗಿರುವ ಯಾವುದೇ ಸಿಬ್ಬಂದಿಯನ್ನು ತೆಗೆದುಹಾಕುವಂತೆ ಪಂಜಾಬ್ ಕಟ್ಟುನಿಟ್ಟಾದ ನಿರ್ದೇಶನಗಳಿಗೆ ಅನುಸಾರವಾಗಿ ಅಮನ್​ದೀಪ್ ಕೌರ್ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಸುಖ್‌ಚೈನ್ ಸಿಂಗ್ ಗಿಲ್ ದೃಢಪಡಿಸಿದರು.

“ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಯಾವುದೇ ಉದ್ಯೋಗಿಯನ್ನು ಬಿಡಬಾರದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಟ್ಟುನಿಟ್ಟಿನ ಆದೇಶಗಳನ್ನು ನೀಡಿದ್ದಾರೆ. ಮಾನ್ಸಾದ ಎಸ್‌ಎಸ್‌ಪಿಗೆ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಯಿತು ಮತ್ತು ಕಾನ್‌ಸ್ಟೆಬಲ್ ಅಮನ್‌ದೀಪ್ ಕೌರ್ ಅವರನ್ನು ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಯಿತು” ಎಂದು ಸುಖ್‌ಚೈನ್ ಸಿಂಗ್ ಗಿಲ್ ಹೇಳಿದ್ದಾರೆ.


ಬಂಧನದ ಸಮಯದಲ್ಲಿ ಭಟಿಂಡಾ ಪೊಲೀಸ್ ಲೈನ್ಸ್‌ನಲ್ಲಿ ನಿಯೋಜಿಸಲ್ಪಡುವ ಮೊದಲು ಕಾನ್‌ಸ್ಟೆಬಲ್ ಮಾನ್ಸಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಮನ್​ದೀಪ್ ಕೌರ್ ಅವರ ಆಸ್ತಿಗಳು ಮತ್ತು ಅಕ್ರಮ ಮಾದಕವಸ್ತು ಚಟುವಟಿಕೆಗಳಿಂದ ಗಳಿಸಿದ ಆದಾಯದ ಮೂಲಕ ಗಳಿಸಬಹುದಾದ ಯಾವುದೇ ಆಸ್ತಿಗಳ ಬಗ್ಗೆ ತನಿಖೆ ನಡೆಸಲು ಈಗ ಸಮಗ್ರ ತನಿಖೆ ನಡೆಯುತ್ತಿದೆ. ಅಮನ್​ದೀಪ್ ಕೌರ್ ಆಡಿ, 2 ಇನ್ನೋವಾ ಕಾರುಗಳು, ಬುಲೆಟ್ ಮೋಟಾರ್ ಬೈಕ್ ಮತ್ತು 2 ಕೋಟಿ ರೂ. ಮೌಲ್ಯದ ಮನೆ ಸೇರಿದಂತೆ ಬಹು ಐಷಾರಾಮಿ ವಸ್ತುಗಳನ್ನು ಹೊಂದಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಇದನ್ನೂ ಓದಿ: ಬೆಂಗಳೂರು: ಬಿಹಾರದ ಯುವತಿಯ ಅಪಹರಿಸಿ ಅತ್ಯಾಚಾರ, ಇಬ್ಬರ ಬಂಧನ

ಅಮನ್​ದೀಪ್ ಕೌರ್ ಇನ್​ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದರು. ಆಕೆ ಇನ್‌ಸ್ಟಾ ಕ್ವೀನ್ ಎಂದೇ ಜನಪ್ರಿಯರಾಗಿದ್ದರು. ಕೆಲವು ದಿನಗಳ ಹಿಂದೆ, ಅವರು ಥಾರ್‌ನ ಬಾನೆಟ್‌ನಲ್ಲಿ ಕೇಕ್ ಕತ್ತರಿಸಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದರು. ಹರಿಯಾಣದಲ್ಲೂ ಅವರು ಹೆರಾಯಿನ್ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಮಹಿಳಾ ಕಾನ್‌ಸ್ಟೆಬಲ್ ಅಮನ್‌ದೀಪ್ ಕೌರ್ ಅವರನ್ನು ಬುಧವಾರ ರಾತ್ರಿ ಭಟಿಂಡಾದ ಬಾದಲ್ ರಸ್ತೆಯಿಂದ ಬಂಧಿಸಲಾಯಿತು. ಅವರ ಥಾರ್‌ನ ಗೇರ್ ಬಾಕ್ಸ್‌ನಿಂದ 17 ಗ್ರಾಂ ಗಿಂತ ಹೆಚ್ಚು ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಹೆರಾಯಿನ್ ಜೊತೆ ಸಿಕ್ಕಿಬಿದ್ದ ಮಹಿಳಾ ಕಾನ್ಸ್ಟೇಬಲ್ ಅನ್ನು ಎಸ್ಎಸ್ಪಿ ಮಾನ್ಸಾ ತಕ್ಷಣವೇ ಸೇವೆಯಿಂದ ವಜಾಗೊಳಿಸಿದ್ದಾರೆ. ಸಿಎಂ ಭಗವಂತ್ ಮಾನ್ ಅವರು ಮಾದಕ ದ್ರವ್ಯಗಳೊಂದಿಗೆ ಸಿಕ್ಕಿಬಿದ್ದ ಉದ್ಯೋಗಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ.

ಬಂಧನದ ನಂತರ ಮಹಿಳಾ ಕಾನ್‌ಸ್ಟೆಬಲ್ ಅಮನ್‌ದೀಪ್ ಕೌರ್ ಪ್ರಕರಣದ ಹಳೆಯ ಘಟನೆಗಳು ಸಹ ಬೆಳಕಿಗೆ ಬರುತ್ತಿವೆ. 2022ರ ಆರಂಭದಲ್ಲಿ, ಅಮನ್‌ದೀಪ್ ಕೌರ್ ಭಟಿಂಡಾದ ಎಸ್‌ಎಸ್‌ಪಿ ಕಚೇರಿಯ ಮುಂದೆ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಹಲ್ಲೆ ಪ್ರಕರಣದಲ್ಲಿ ಬಂಧನವನ್ನು ತಪ್ಪಿಸಲು ಅವಳು ಮತ್ತು ಅವಳ ಸ್ನೇಹಿತ ಈ ಹೈಡ್ರಾಮಾ ಮಾಡಿದ್ದರು. ಆ ಸಮಯದಲ್ಲಿ, ಮಹಿಳಾ ಕಾನ್‌ಸ್ಟೆಬಲ್ ಅಮನ್‌ದೀಪ್ ಕೌರ್ ಮತ್ತು ಆಕೆಯ ಸಹಚರನನ್ನು ಬಂಧಿಸಲು ಪೊಲೀಸರಿಗೆ 2 ಗಂಟೆಗಳು ಬೇಕಾಯಿತು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Fri, 4 April 25