ರೈತರಿಗೆ ಪರಿಹಾರ, ಉದ್ಯೋಗ ಸಿಗಬೇಕು: ಲೋಕಸಭೆಯಲ್ಲಿ ಮೃತ ರೈತರ ಪಟ್ಟಿ ತೋರಿಸಿ ಕೇಂದ್ರವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 07, 2021 | 1:18 PM

Lok Sabha ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರೈತರ ಪ್ರತಿಭಟನೆಯಲ್ಲಿ ಸುಮಾರು 700 ರೈತರು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. "ಪ್ರಧಾನಿ ಅವರು ಮಾಡಿದ ತಪ್ಪನ್ನು ಒಪ್ಪಿಕೊಂಡು ದೇಶ ಮತ್ತು ರೈತರ ಕ್ಷಮೆಯಾಚಿಸಿದರು.

ರೈತರಿಗೆ ಪರಿಹಾರ, ಉದ್ಯೋಗ ಸಿಗಬೇಕು: ಲೋಕಸಭೆಯಲ್ಲಿ ಮೃತ ರೈತರ ಪಟ್ಟಿ ತೋರಿಸಿ ಕೇಂದ್ರವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ದೆಹಲಿ: ದೇಶದಲ್ಲಿ ಕೃಷಿ ಕಾನೂನು (farm laws) ವಿರೋಧಿಸಿ ನಡೆದ ಆಂದೋಲನದ ವೇಳೆ ಸಾವನ್ನಪ್ಪಿದ ರೈತರ ಪಟ್ಟಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಲೋಕಸಭೆಯಲ್ಲಿ (Lok Sabha) ತೋರಿಸಿದ್ದಾರೆ.ಅದೇ ವೇೆಳೆ ಮೃತ ರೈತರ ಮುಂದಿನ ಕುಟುಂಬಗಳಿಗೆ ಪರಿಹಾರ ಮತ್ತು ಉದ್ಯೋಗ ನೀಡಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ (Question Hour of Lok Sabha) ಮಾತನಾಡಿದ ರಾಹುಲ್ ಗಾಂಧಿ, ರೈತರ ಪ್ರತಿಭಟನೆಯಲ್ಲಿ ಸುಮಾರು 700 ರೈತರು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. “ಪ್ರಧಾನಿ ಅವರು ಮಾಡಿದ ತಪ್ಪನ್ನು ಒಪ್ಪಿಕೊಂಡು ದೇಶ ಮತ್ತು ರೈತರ ಕ್ಷಮೆಯಾಚಿಸಿದರು. ನವೆಂಬರ್ 30 ರಂದು ಕೃಷಿ ಸಚಿವರಲ್ಲಿ ಆಂದೋಲನದಲ್ಲಿ ಎಷ್ಟು ರೈತರು ಮೃತಪಟ್ಟಿದ್ದಾರೆ ಎಂದು ಕೇಳಲಾಯಿತು. ಅವರು ತಮ್ಮ ಬಳಿ ಯಾವುದೇ ಡೇಟಾ ಇಲ್ಲ ಎಂದು ಹೇಳಿದರು. ನಂತರ ಆಂದೋಲನದ ವೇಳೆ ಸಾವನ್ನಪ್ಪಿದ ಪಂಜಾಬ್‌ನ 400 ರೈತರ ಪಟ್ಟಿಯನ್ನು ತೋರಿಸಿದರು. ಈ ರೈತರ ಕುಟುಂಬಗಳಿಗೆ ಪಂಜಾಬ್ ಸರ್ಕಾರವು 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ ಮತ್ತು ಅವರಲ್ಲಿ 152 ಮಂದಿಗೆ ಉದ್ಯೋಗವನ್ನೂ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಪಂಜಾಬ್ ಸರ್ಕಾರವು ಸುಮಾರು 400 ರೈತರಿಗೆ ರೂ 5 ಲಕ್ಷ ಪರಿಹಾರವನ್ನು ನೀಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ಅವರಲ್ಲಿ 152 ಮಂದಿಗೆ ಉದ್ಯೋಗವನ್ನೂ ಒದಗಿಸಿದೆ. ನನ್ನ ಬಳಿ ಪಟ್ಟಿ ಇದೆ. ನಾವು ಹರ್ದಯಾಣ   70 ರೈತರ ಮತ್ತೊಂದು ಪಟ್ಟಿಯನ್ನು ಮಾಡಿದ್ದೇವೆ. ಅವರ ಹೆಸರಿಲ್ಲ ಎಂದು ನಿಮ್ಮ ಸರ್ಕಾರ ಹೇಳುತ್ತಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ರೈತರಿಗೆ ಅವರ ಹಕ್ಕುಗಳನ್ನು ನೀಡಬೇಕು, ಅವರಿಗೆ ಪರಿಹಾರದ ಜೊತೆಗೆ ಉದ್ಯೋಗ ನೀಡಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ ರಾಹುಲ್ .

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸದ ಪ್ರಧಾನಿ ನರೇಂದ್ರ ಮೋದಿ ಅವರು “ಸಂವೇದನಾಶೀಲರಾಗಿದ್ದಾರೆ” ಎಂದು ಡಿಸೆಂಬರ್ 4 ರಂದು ರಾಹುಲ್ ಗಾಂಧಿ ಆರೋಪಿಸಿದ್ದರು. “ಆಂದೋಲನದಲ್ಲಿ ಈ ಜನರು ಸಾವನ್ನಪ್ಪಿದ್ದಾರೆ. ನಾವು ಬಿಲಿಯನ್ ಡಾಲರ್, ಸಾವಿರಾರು ಕೋಟಿ ರೂಪಾಯಿಗಳ ಬಗ್ಗೆ ಮಾತನಾಡುತ್ತಿಲ್ಲ. ಅವರು ಮಾಡಿದ ತ್ಯಾಗಕ್ಕೆ ಕನಿಷ್ಠ ಪರಿಹಾರದ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ:  ಪ್ರತಿಭಟನೆಯಲ್ಲಿ ಸಾವಿಗೀಡಾದ ರೈತರ ಬಗ್ಗೆ ಮಾಹಿತಿ ಇಲ್ಲ ಎಂದ ಕೇಂದ್ರ ವಿರುದ್ಧ ವಾಗ್ದಾಳಿ; ಮೃತ ರೈತರ ಪಟ್ಟಿ ಹಂಚಿಕೊಂಡ ರಾಹುಲ್ ಗಾಂಧಿ

ಇದನ್ನೂ ಓದಿ: Parliament Winter Session ಸಂಸದರ ಅಮಾನತು ಖಂಡಿಸಿ ವಿಪಕ್ಷ ಪ್ರತಿಭಟನೆ, ಈಗ ಕ್ಷಮೆ ಕೇಳಿದರೂ ಅಮಾನತು ಹಿಂಪಡೆಯಲು ಸಿದ್ಧ ಎಂದ ಪ್ರಹ್ಲಾದ ಜೋಶಿ

Published On - 1:12 pm, Tue, 7 December 21