Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ, ಕಾಂಗ್ರೆಸ್​ ಪೋಸ್ಟರ್ ವಾರ್:ರಾಹುಲ್​ ಗಾಂಧಿಯನ್ನು ರಾವಣ ಎಂದ ಬಿಜೆಪಿ, ಮೋದಿ ಸುಳ್ಳುಗಾರ ಎಂದ ಕಾಂಗ್ರೆಸ್​

ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress)​ ನಡುವೆ ರಾಜಕೀಯ ಯುದ್ಧ ಶುರುವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಪೋಸ್ಟರ್​ ವಾರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಡಳಿತಾರೂಢ ಬಿಜೆಪಿಯು ಟ್ವಿಟ್ಟರ್​ನಲ್ಲಿ ಪೋಸ್ಟರ್​ವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ರಾಹುಲ್ ಗಾಂಧಿ(Rahul Gandhi)ಯನ್ನು ಹೊಸ ಯುಗದ ರಾವಣ ಎಂದು ಕರೆದಿದೆ ಇದನ್ನು ಕಾಂಗ್ರೆಸ್​ ಬದಲವಾಗಿ ಟೀಕಿಸಿದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಚಿತ್ರವನ್ನು ಹಾಕಿ ಸುಳ್ಳುಗಾರ ಎಂದು ಕರೆದಿದೆ.

ಬಿಜೆಪಿ, ಕಾಂಗ್ರೆಸ್​ ಪೋಸ್ಟರ್ ವಾರ್:ರಾಹುಲ್​ ಗಾಂಧಿಯನ್ನು ರಾವಣ ಎಂದ ಬಿಜೆಪಿ, ಮೋದಿ ಸುಳ್ಳುಗಾರ ಎಂದ ಕಾಂಗ್ರೆಸ್​
ರಾಹುಲ್ ಗಾಂಧಿImage Credit source: India Today
Follow us
ನಯನಾ ರಾಜೀವ್
|

Updated on:Oct 06, 2023 | 9:57 AM

ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress)​ ನಡುವೆ ರಾಜಕೀಯ ಯುದ್ಧ ಶುರುವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಪೋಸ್ಟರ್​ ವಾರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಡಳಿತಾರೂಢ ಬಿಜೆಪಿಯು ಟ್ವಿಟ್ಟರ್​ನಲ್ಲಿ ಪೋಸ್ಟರ್​ವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ರಾಹುಲ್ ಗಾಂಧಿ(Rahul Gandhi)ಯನ್ನು ನವ ಯುಗದ ರಾವಣ ಎಂದು ಕರೆದಿದೆ ಇದನ್ನು ಕಾಂಗ್ರೆಸ್​ ಬದಲವಾಗಿ ಟೀಕಿಸಿದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಚಿತ್ರವನ್ನು ಹಾಕಿ ಸುಳ್ಳುಗಾರ ಎಂದು ಕರೆದಿದೆ.

ಜಾರ್ಜ್ ಸೊರೊಸ್ ನಿರ್ದೇಶನದ – ಇಂಡಿಯಾ ಇನ್ ಡೇಂಜರ್ – ಕಾಂಗ್ರೆಸ್ ಪಾರ್ಟಿ ಪ್ರೊಡಕ್ಷನ್ ಎಂಬ ಶೀರ್ಷಿಕೆಯ ಹ್ಯಾಂಡಲ್‌ನಲ್ಲಿ ರಾಹುಲ್ ಗಾಂಧಿಯ ಬಹು-ತಲೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಹೊಸ ಯುಗದ ರಾವಣ ಎಂದು ಬಿಜೆಪಿ ಬರೆದಿದೆ.

ಟ್ವೀಟ್‌ನಲ್ಲಿ ಬಿಜೆಪಿ ಹಂಗೇರಿ-ಅಮೆರಿಕನ್ ಉದ್ಯಮಿ ಜಾರ್ಜ್ ಸೊರಸ್ ಅವರನ್ನೂ ಗುರಿಯಾಗಿಸಿದೆ. ಪೋಸ್ಟರ್ ನಲ್ಲಿ ರಾಹುಲ್ ಗಾಂಧಿ ರಾವಣನ ರೂಪದಲ್ಲಿರುವ ಚಿತ್ರವನ್ನು ಶೇರ್ ಮಾಡುವ ಭರದಲ್ಲಿ ಬಿಜೆಪಿ ಹೊಸ ಯುಗದ ರಾವಣ ಎಂದು ಬರೆದುಕೊಂಡಿದೆ. ಅವರು ದುಷ್ಟ, ಧರ್ಮ ವಿರೋಧಿ ಮತ್ತು ರಾಮ ವಿರೋಧಿ. ಭಾರತವನ್ನು ನಾಶ ಮಾಡುವುದು ಇವರ ಗುರಿಯಾಗಿದೆ ಎಂದು ಬರೆದಿದೆ.

ಈ ಬಗ್ಗೆ ಕಾಂಗ್ರೆಸ್​ನ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿದಾಳಿ ನಡೆಸಿದ್ದಾರೆ. ಹಿಂಸಾಚಾರವನ್ನು ಉತ್ತೇಜಿಸುವುದು ಬಿಜೆಪಿಯ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಅವರು ಪ್ರತಿದಿನ ಹೇಳುವುದೆಲ್ಲಾ ಸುಳ್ಳು ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

ನೀವು ರಾಜಕೀಯ ಮತ್ತು ಚರ್ಚೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತೀರಿ? ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಟ್ವೀಟ್‌ಗಳನ್ನು ನೀವು ಒಪ್ಪುತ್ತೀರಾ? ನಿಮ್ಮ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಪಿ ನಡ್ಡಾ ಅವರ ಬಳಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:44 am, Fri, 6 October 23