ಜಲ್ಲಿಕಟ್ಟುವಿನಿಂದ ಹೋರಿಗಳಿಗೆ ತೊಂದರೆ ಆಗುವುದಿಲ್ಲ: ರಾಹುಲ್ ಗಾಂಧಿ

| Updated By: Lakshmi Hegde

Updated on: Jan 14, 2021 | 5:43 PM

ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದ ರಾಹುಲ್ ಗಾಂಧಿ​ , ಕೇಂದ್ರ ಸರ್ಕಾರ ರೈತರನ್ನು ನಿರ್ಲಕ್ಷಿಸುತ್ತಿಲ್ಲ. ಬದಲಿಗೆ ಅವರನ್ನು ನಾಶಮಾಡಲು ಸಂಚು ರೂಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಜಲ್ಲಿಕಟ್ಟುವಿನಿಂದ ಹೋರಿಗಳಿಗೆ ತೊಂದರೆ ಆಗುವುದಿಲ್ಲ: ರಾಹುಲ್ ಗಾಂಧಿ
ಜಲ್ಲಿಕಟ್ಟು ಆಚರಣೆಯಲ್ಲಿ ಪಾಲ್ಗೊಂಡ ರಾಹುಲ್​ ಗಾಂಧಿ
Follow us on

ತಮಿಳುನಾಡು: ಜಲ್ಲಿಕಟ್ಟುವಿನಿಂದ ಹೋರಿಗಳಿಗೆ ತೊಂದರೆ ಆಗುವುದಿಲ್ಲ ಎಂದು ತಮಿಳುನಾಡಿನಲ್ಲಿ ‘ಕೈ’ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.

ಇಂದು ಜಲ್ಲಿಕಟ್ಟು ವೀಕ್ಷಿಸಿದ ಬಳಿಕ ಜನರು ಜಲ್ಲಿಕಟ್ಟು ಇಷ್ಟಪಡುವುದು ಏಕೆಂದು ತಿಳಿಯಿತು ಎಂದರು. ಜೊತೆಗೆ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದ ರಾಹುಲ್​, ಕೇಂದ್ರ ಸರ್ಕಾರ ರೈತರನ್ನು ನಿರ್ಲಕ್ಷಿಸುತ್ತಿಲ್ಲ. ಬದಲಿಗೆ ಅವರನ್ನು ನಾಶಮಾಡಲು ಸಂಚು ರೂಪಿಸುತ್ತಿದೆ. ಏಕೆಂದರೆ ಕೇಂದ್ರ ತಮ್ಮ 2-3 ಸ್ನೇಹಿತರಿಗೆ ಲಾಭವನ್ನು ಬಯಸುತ್ತಿದೆ. ರೈತರಿಗೆ ಸೇರಿದ್ದನ್ನು ತಮ್ಮ ಸ್ನೇಹಿತರಿಗೆ ನೀಡಲು ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರದ ವಿರುದ್ದ ಕಿಡಿಕಾರಿದರು.

ಭಾರತದ ಭವಿಷ್ಯಕ್ಕೆ ತಮಿಳು ಸಂಸ್ಕೃತಿ ಅತ್ಯವಶ್ಯಕ: ರಾಹುಲ್ ಗಾಂಧಿ