Rahul Gandhi: ರೈತರೊಂದಿಗೆ ನಾಟಿ ಮಾಡಿದ ರಾಹುಲ್​​ ಗಾಂಧಿ

ರಾಹುಲ್ ಗಾಂಧಿ ದೆಹಲಿಯಿಂದ ಶಿಮ್ಲಾಕ್ಕೆ ತೆರಳುತ್ತಿದ್ದಾಗ ಸೋನೆಪತ್‌ನ ಮದೀನಾ ಗ್ರಾಮದ ರೈತರನ್ನು ಭೇಟಿ ಮಾಡಿ, ಅವರ ಜತೆಗೆ ಭತ್ತ ನಾಟಿ ಮಾಡಿದ್ದಾರೆ.

Rahul Gandhi: ರೈತರೊಂದಿಗೆ ನಾಟಿ ಮಾಡಿದ ರಾಹುಲ್​​ ಗಾಂಧಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jul 08, 2023 | 10:51 AM

ಶಿಮ್ಲಾ: ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ (Rahul Gandhi) ಅವರು ಇಂದು (ಜು.8) ಬೆಳಗ್ಗೆ ದೆಹಲಿಯಿಂದ ಶಿಮ್ಲಾಕ್ಕೆ ತೆರಳುತ್ತಿದ್ದಾಗ ಸೋನೆಪತ್‌ನ ಮದೀನಾ ಗ್ರಾಮದ ರೈತರನ್ನು ಭೇಟಿ ಮಾಡಿ, ಅವರ ಜತೆಗೆ ಭತ್ತ ನಾಟಿ ಮಾಡಿದ್ದಾರೆ. ತುಂತುರು ಮಳೆಯ ನಡುವೆಯೂ ರಾಹುಲ್ ಗಾಂಧಿ ಹೊಲಕ್ಕೆ ಇಳಿದು ಟ್ರ್ಯಾಕ್ಟರ್ ಓಡಿಸಿ ರೈತರೊಂದಿಗೆ ಸಂವಾದ ನಡೆಸಿದ್ದಾರೆ. ಸೋನೆಪತ್‌ನ ಬರೋಡಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮದೀನಾ ಗ್ರಾಮದಲ್ಲಿ ರೈತರು ನಾಟಿ ಮಾಡುತ್ತಿದ್ದ ವೇಳೆ, ರೈತ ಸಂಜಯ್ ಕುಮಾರ್ ಅವರ ಹೊಲದ ಬಳಿ ಏಕಾಏಕಿ ಸುಮಾರು ಕಾರುಗಳ ಜತೆಗೆ ಪೊಲೀಸರ ವಾಹನವು ಬರುವುದನ್ನು ಕಂಡು ಒಂದು ಬಾರಿ ಸಂಜಯ್ ಕುಮಾರ್ ಗಾಬರಿಯಾಗಿದ್ದಾರೆ. ಕಾರಿನ ಬಳಿ ಹೋದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಹನದಿಂದ ಹೊರಬರುವುದನ್ನು ನೋಡಿ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ರಾಹುಲ್​​ ಗಾಂಧಿ ಅವರನ್ನು ನೇರ ನೇರ ನೋಡಿ ಭತ್ತ ನಾಟಿ ಮಾಡುತ್ತಿದ್ದ ಕಾರ್ಮಿಕರು ಮತ್ತು ಮಹಿಳೆಯರಿಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ರಾಹುಲ್ ಗಾಂಧಿ​​ ಅವರ ಸಿಬ್ಬಂದಿಗಳು ಹೊಲಕ್ಕೆ ಬಂದಾಗ ನಾವೆಲ್ಲರೂ ಸಂತೋಷಪಟ್ಟೆವು. ನಾನು ತಂದಿದ್ದ ಉಪಹಾರವನ್ನು ಅವರಿಗೂ ನೀಡಿದೆ, ಅದನ್ನು ಅವರು ಸಂತೋಷದಿಂದ ಸ್ವೀಕರಿಸಿದ್ದಾರೆ, ಇದರ ಜತೆಗೆ ಅವರು ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದಾರೆ, ನಂತರ ನಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮ ಜತೆಗೆ ಸಂವಾದ ನಡೆಸಿದ್ದಾರೆ ಎಂದು ಸಂಜಯ್ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi Defamation Case: ನ್ಯಾಯಾಲಯದಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆ, 2 ವರ್ಷಗಳ ಶಿಕ್ಷೆ ಕಾಯಂ

ರಾಹುಲ್ ಗಾಂಧಿ ಭೇಟಿಯ ಸುದ್ದಿ ತಿಳಿದ ಕಾಂಗ್ರೆಸ್‌ನ ಬರೋಡಾ ಶಾಸಕ ಇಂದುರಾಜ್ ನರ್ವಾಲ್ ಮತ್ತು ಗೋಹಾನಾ ಶಾಸಕ ಜಗಬೀರ್ ಮಲಿಕ್ ಕೂಡ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಗೋಹಾನಾ ಶಾಸಕ ಜಗಬೀರ್ ಮಲಿಕ್ ಮಾತನಾಡಿ, ರಾಹುಲ್ ಗಾಂಧಿ ಅವರನ್ನು ಹೊಲಗಳಲ್ಲಿ ನೋಡಿ ಸಂತೋಷವಾಯಿತು. ಅವರು ಕಾರ್ಮಿಕರು, ಟ್ರಕ್ ಚಾಲಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಮಾಜದ ಇತರ ವರ್ಗಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವ ನಾಯಕ ಎಂದು ಹೇಳಿದ್ದಾರೆ.

ರಾಹುಲ್​​ ಗಾಂಧಿ ಒಂದು ಕಡೆ ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಗುಜರಾತ್​ ಹೈಕೋರ್ಟ್​ಗೆ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ. ಇದರ ಜತೆಗೆ ಸೂರತ್​ ಕೋರ್ಟ್​ ನೀಡಿರುವ ಆದೇಶವನ್ನು ಎತ್ತಿಹಿಡಿದಿದೆ. ಆದರೆ ರಾಹುಲ್​​ ಈ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಜನರ ನಡುವೆ ಬೇರೆತುಕೊಳ್ಳವ ಕೆಲಸ ಮಾಡುತ್ತಿದ್ದಾರೆ, ಸಾಮಾನ್ಯರ ಕಷ್ಟಕ್ಕೆ ಸ್ಪಂಧಿಸುತ್ತಿದ್ದಾರೆ ಎಂದು ಕಾಂಗ್ರೆಸ್​​ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ