ಇದು ಸಾವುಗಳೋ ಅಥವಾ ಕೊಲೆಯೋ; ರಾಜ್ಯ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಆಕ್ಸಿಜನ್ ಕೊರತೆ ವಿಚಾರ ದೆಹಲಿ ಅಂಗಳಕ್ಕೆ ತಲುಪಿದ್ದು, ಇದು ಸಾವುಗಳೋ ಅಥವಾ ಕೊಲೆಯೋ ಎಂದು ರಾಜ್ಯ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ದೆಹಲಿ: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ ಸುಮಾರು 24 ಜನ ಆಕ್ಸಿಜನ್ ಸಿಗದೆ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಕೈ ನಾಯಕ ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಆಕ್ಸಿಜನ್ ಕೊರತೆ ವಿಚಾರ ದೆಹಲಿ ಅಂಗಳಕ್ಕೆ ತಲುಪಿದ್ದು, ಇದು ಸಾವುಗಳೋ ಅಥವಾ ಕೊಲೆಯೋ ಎಂದು ರಾಜ್ಯ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ದುರಂತದ ಬಗ್ಗೆ ಟ್ವಿಟ್ ಮಾಡಿರುವ ರಾಹುಲ್ ಗಾಂಧಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದರು. ಈ ದುರಂತದಂತೆ ಇನ್ನೆಷ್ಟು ಜನ ಬಳಲಬೇಕು? ಎಂದು ಪ್ರಶ್ನೆ ಮಾಡಿರುವ ಅವರು ಮಲಗಿರುವ ವ್ಯವಸ್ಥೆ ಎದ್ದೇಳಬೇಕು ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
Died or Killed?
My heartfelt condolences to their families.
How much more suffering before the ‘system’ wakes up? pic.twitter.com/JrfZbIo7zm
— Rahul Gandhi (@RahulGandhi) May 3, 2021
ಇದನ್ನೂ ಓದಿ
ಬಾಗಲಕೋಟೆಯಲ್ಲೂ ಹೆಚ್ಚಿದ ರೆಮ್ಡೆಸಿವಿರ್ ಬೇಡಿಕೆ; ಕೊರೊನಾಗಿಂತಲೂ ಇಂಜೆಕ್ಷನ್ ಸಿಗುತಿಲ್ಲ ಎನ್ನುವ ಆತಂಕವೆ ಹೆಚ್ಚು
ಏಪ್ರಿಲ್ನಲ್ಲಿ ಉತ್ಪಾದನೆ ಚಟುವಟಿಕೆ ಸ್ವಲ್ಪ ಮಟ್ಟದ ಏರಿಕೆ; ಸತತ ಎಂಟನೇ ತಿಂಗಳು ರಫ್ತು ಹೆಚ್ಚಳ
(Rahul Gandhi questioned the state government whether it was death or murder)