Rahul Gandhi: ಭಾರತ್ ಜೋಡೋ ಯಾತ್ರೆಯ ವಿಶ್ರಾಂತಿ ವೇಳೆ ಮನೆ ಮಾಲೀಕಳನ್ನೇ ಹೊರಗೆ ನಿಲ್ಲಿಸಿದ ರಾಹುಲ್ ಗಾಂಧಿ

| Updated By: ಸುಷ್ಮಾ ಚಕ್ರೆ

Updated on: Dec 09, 2022 | 6:14 PM

ರಾಹುಲ್ ಗಾಂಧಿ ಅವರ 3,570 ಕಿ.ಮೀ ಉದ್ದದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 5ರಂದು ಜಲಾವರ್‌ನಿಂದ ರಾಜಸ್ಥಾನವನ್ನು ಪ್ರವೇಶಿಸಿತು.

Rahul Gandhi: ಭಾರತ್ ಜೋಡೋ ಯಾತ್ರೆಯ ವಿಶ್ರಾಂತಿ ವೇಳೆ ಮನೆ ಮಾಲೀಕಳನ್ನೇ ಹೊರಗೆ ನಿಲ್ಲಿಸಿದ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆ ವೇಳೆ ತನ್ನ ಮನೆಯ ಹೊರಗೆ ಕಾಯುತ್ತಾ ನಿಂತ ಮಹಿಳೆ
Follow us on

ಕೋಟಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಫಾರ್ಮ್​ಹೌಸ್​ ಒಂದರಲ್ಲಿ ಚಹಾ ಮತ್ತು ತಿಂಡಿಯನ್ನು ಸೇವಿಸುತ್ತಿರುವಾಗ ಆ ಫಾರ್ಮ್​ಹೌಸ್​ನ ಮಾಲೀಕರಾದ ಮಹಿಳೆ ಹೊರಗೆ ನಿಂತು ಕಾಯುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಡಿಸೆಂಬರ್ 7ರಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ರಾಜಸ್ಥಾನದ ಕೋಟಾ ಜಿಲ್ಲೆಯ ಲಾಡ್‌ಪುರ ಬ್ಲಾಕ್‌ಗೆ ಪ್ರವೇಶಿಸಿದಾಗ ಈ ಘಟನೆ ನಡೆದಿದೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ರಾಂತಿಗಾಗಿ ಮನೆಯೊಂದಕ್ಕೆ ಹೋದಾಗ ಆ ಮನೆಯ ಒಡತಿ ತನ್ನ ಮನೆಯ ಹೊರಗೆ ಕಾಯುತ್ತಿರುವ ಹಲವಾರು ವಿಡಿಯೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ವಿಷಯವು ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: Bharat Jodo: ಕಾಂಗ್ರೆಸ್​ನ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ಶಾಲಾ ಶಿಕ್ಷಕರೊಬ್ಬರ ಅಮಾನತು

ರಾಹುಲ್ ಗಾಂಧಿ ಅವರ 3,570 ಕಿ.ಮೀ ಉದ್ದದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 5ರಂದು ಜಲಾವರ್‌ನಿಂದ ರಾಜಸ್ಥಾನವನ್ನು ಪ್ರವೇಶಿಸಿತು. ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮದ ಎರಡನೇ ದಿನದಂದು ಕೋಟಾ ಜಿಲ್ಲೆಯ ಎನ್‌ಎಚ್ -52 ರ ಗೋಪಾಲಪುರ ಗ್ರಾಮದಲ್ಲಿರುವ ಲಾಡ್‌ಪುರ ಪಂಚಾಯತ್ ಸಮಿತಿ ಉಪಾಧ್ಯಕ್ಷ ಅಶೋಕ್ ಮೀನಾ ಅವರ ಫಾರ್ಮ್‌ಹೌಸ್‌ನಲ್ಲಿ ರಾಹುಲ್ ಗಾಂಧಿ ಮತ್ತು ಕೆಲವು ಕಾಂಗ್ರೆಸ್ ನಾಯಕರು ವಿಶ್ರಾಂತಿ ಪಡೆದರು. ಸುಮಾರು 40 ನಿಮಿಷಗಳ ಕಾಲ ಅವರು ಅಲ್ಲಿಯೇ ಇದ್ದರು.

ಇದನ್ನೂ ಓದಿ: ಭರವಸೆ ಈಡೇರಿಸಲಾಗುವುದು: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ನಂತರ ರಾಹುಲ್ ಗಾಂಧಿ ಭರವಸೆ

ಈ ಮಧ್ಯೆ ಅಶೋಕ್ ಮೀನಾ ಅವರ ತಾಯಿ ಊರ್ಮಿಳಾ ಮೀನಾ ಆ ಫಾರ್ಮ್​ಹೌಸ್​ಗೆ ಹೋಗಿದ್ದರು. ಆದರೆ, ಆ ವೇಳೆಗೆ ಅಶೋಕ್ ಮೀನಾ ಅವರ ತಾಯಿ ಊರ್ಮಿಳಾ ಮೀನಾಗೆ ರಾಹುಲ್ ಗಾಂಧಿಯ ಭದ್ರತಾ ಸಿಬ್ಬಂದಿ ಒಳಗೆ ಹೋಗಲು ಅನುಮತಿ ನೀಡಲಿಲ್ಲ. ಭದ್ರತೆಯ ದೃಷ್ಟಿಯಿಂದ ರಾಹುಲ್ ಗಾಂಧಿ ಮತ್ತಿತರ ನಾಯಕರು ಆ ಸ್ಥಳದಿಂದ ಹೊರಡುವವರೆಗೂ ಭದ್ರತಾ ಸಿಬ್ಬಂದಿ ಅವರನ್ನು ಫಾರ್ಮ್‌ಹೌಸ್‌ನೊಳಗೆ ಹೋಗಲು ಬಿಡಲಿಲ್ಲ.

ಹೀಗಾಗಿ, ತಮ್ಮದೇ ಫಾರ್ಮ್​ಹೌಸ್​ನಲ್ಲಿ ಊರ್ಮಿಳಾ ಹೊರಗೆ ನಿಂತು ಸುಮಾರು 40 ನಿಮಿಷಗಳ ಕಾಲ ಕಾಯಬೇಕಾಯಿತು. ಈ ಘಟನೆಯ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ