ಗುಜರಾತ್ ನೂತನ ಸಿಎಂ ಆಯ್ಕೆ ವೀಕ್ಷಕರಾಗಿ ಬಿಎಸ್ವೈ ನೇಮಕ: ಅಹಮದಾಬಾದ್‌ಗೆ ಹೊರಟ ಯಡಿಯೂರಪ್ಪ
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನೆಲೆ ಹೈ ಕಮಾಂಡ್ ಮುಖ್ಯಮಂತ್ರಿ ಆಯ್ಕೆಗೆ ಶಾಸಕಾಂಗ ಪಕ್ಷದ ವೀಕ್ಷಕರ ಸಮಿತಿ ರಚಿಸಿದೆ.
ಬೆಂಗಳೂರು/ ನವದೆಹಲಿ: ಪ್ರಧಾನಿ ಮೋದಿ (Narendra Modi) ತವರು ರಾಜ್ಯ ಗುಜರಾತ್ (Gujarat) ವಿಧಾನಸಭೆ ಬಿಜೆಪಿ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿ ಅಭೂತಪೂರ್ವ ಗೆಲವು ಸಾಧಿಸಿದೆ. ಈಗ ಸರ್ಕಾರ ರಚಿಸಲು ತುದಿಗಾಲಿನಲ್ಲಿ ನಿಂತಿದೆ. ಈ ಸಂಬಂಧ ಬಿಜೆಪಿ ನಾಳೆ (ಡಿ.10) (BJP) ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) , ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಕೇಂದ್ರ ಸಚಿವ ಅರ್ಜುನ್ ಮುಂಡಾ (Arjun Munda) ಅವರನ್ನು ವೀಕ್ಷಕರನ್ನಾಗಿ ಬಿಜೆಪಿ ಹೈ ಕಮಾಂಡರ್ ನೇಮಿಸಿದೆ.
Defence Minister Rajnath Singh, Former Karnataka CM BS Yediyurappa and Union Minister Arjun Munda appointed as observers for the Gujarat BJP Legislature party meet. pic.twitter.com/JQ7rmIRX3n
— ANI (@ANI) December 9, 2022
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಯಡಿಯೂರಪ್ಪ ಗುಜರಾತ್ ನೂತನ ಸಿಎಂ ಆಯ್ಕೆ ಸಂಬಂಧ ಸಮಿತಿ ರಚಿಸಿದ್ದಾರೆ. ರಾಜನಾಥ್, ಅರ್ಜುನ್ ಮುಂಡಾ, ನನ್ನನ್ನು ಸೇರಿಸಿ ಸಮಿತಿ ರಚನೆ ಮಾಡಿದ್ದಾರೆ. ಹೀಗಾಗಿ ಅಹಮದಾಬಾದ್‌ಗೆ ಬರುವಂತೆ ನನಗೆ ದೂರವಾಣಿ ಕರೆ ಬಂದಿತ್ತು. ಈ ಹಿನ್ನೆಲೆ ನಾನು ಅಹಮದಾಬಾದ್‌ಗೆ ಹೊರಟಿದ್ದೇನೆ. ನಾಳೆ ಸಭೆ ಮುಗಿಸಿ ನಾಡಿದ್ದು ಬೆಂಗಳೂರಿಗೆ ವಾಪಸ್ ಬರುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಬಿಜೆಪಿ ದಾಖಲೆಯ ಗೆಲುವು: ವಿಮರ್ಶೆ, ವಿರೋಧ ಎಲ್ಲವನ್ನೂ ಮೀರಿ ನಿಂತಿದೆ ಮೋದಿ ಸಾಧನೆ ಎಂದ ವಿದೇಶಿ ಮಾಧ್ಯಮಗಳು
ಗಡಿ ವಿವಾದದ ಬಗ್ಗೆ ವರಿಷ್ಠರ ಜೊತೆ ಚರ್ಚಿಸುತ್ತೇನೆ
ಬೆಳಗಾವಿ ಗಡಿ ವಿವಾದ ಸಂಬಂಧ ಅಮಿತ್ ಶಾಗೆ ಮಹಾರಾಷ್ಟ್ರ ನಾಯಕರು ದೂರು ನೀಡಿರುವ ವಿಚಾರವಾಗಿ ಮಾತನಾಡಿದ ಅವರು ಗಡಿ ವಿವಾದದ ಬಗ್ಗೆ ಬಿಜೆಪಿ ವರಿಷ್ಠರ ಜೊತೆ ಚರ್ಚಿಸುತ್ತೇನೆ. ನಾಡಿನ ನೆಲ, ಜಲ, ಗಡಿ, ಭಾಷೆ ವಿಚಾರದಲ್ಲಿ ರಾಜಿ ಆಗುವುದಿಲ್ಲ. ಯಾರು ಯಾರಿಗೆ ದೂರು ನೀಡಿದರೂ ನಮಗೆ ಸಂಬಂಧ ಇಲ್ಲ. ನಮ್ಮ ರಾಜ್ಯದ ಹಿತವನ್ನು ಕಾಪಾಡುವುದು ಮುಖ್ಯ. ಈ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಹೇಳಿದರು.
ಇದನ್ನೂ ಓದಿ: ಮೋದಿ ತವರಿನಲ್ಲಿ ಬಿಜೆಪಿ ಅಧಿಕಾರ ಮುಂದುವರಿಕೆ; ಗುಜರಾತ್ ಮಾಡೆಲ್ನಿಂದ ಕಲಿಯಬೇಕಾದ ಪಾಠಗಳಿವು
ಮೀಸಲಾತಿಗಾಗಿ ಹಲವು ಸಮುದಾಯಗಳು ಬೇಡಿಕೆ ಇಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಮೀಸಲಾತಿ ನೀಡಲು ಏನು ಸಾಧ್ಯವಿದೆಯೋ ಅದನ್ನೆಲ್ಲ ಮಾಡ್ತಿದ್ದೇವೆ. ಮುಂದಿನ ಚುನಾವಣೆಗೆ ಬಿಜೆಪಿ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಭವಿಷ್ಯ ನುಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Fri, 9 December 22