AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಲಂಕಾದಿಂದ ಬಂಧನಕ್ಕೊಳಗಾದ 37 ತಮಿಳುನಾಡು ಮೀನುಗಾರರನ್ನು ಬಿಡಿಸಲು ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಮನವಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತೀಯ ಮೀನುಗಾರರ ವಿರುದ್ಧದ ಅನ್ಯಾಯವನ್ನು ಒತ್ತಿ ಹೇಳಿದ್ದಾರೆ. ಅವರ ಬಿಡುಗಡೆ ಮತ್ತು ವಶಪಡಿಸಿಕೊಂಡ ದೋಣಿಗಳನ್ನು ಹಿಂದಿರುಗಿಸಲು ತ್ವರಿತ ರಾಜತಾಂತ್ರಿಕ ಪ್ರಯತ್ನಗಳಿಗಾಗಿ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರನ್ನು ಒತ್ತಾಯಿಸಿದ್ದಾರೆ.

ಶ್ರೀಲಂಕಾದಿಂದ ಬಂಧನಕ್ಕೊಳಗಾದ 37 ತಮಿಳುನಾಡು ಮೀನುಗಾರರನ್ನು ಬಿಡಿಸಲು ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಮನವಿ
ರಾಹುಲ್ ಗಾಂಧಿ
ಸುಷ್ಮಾ ಚಕ್ರೆ
|

Updated on: Sep 28, 2024 | 8:21 PM

Share

ನವದೆಹಲಿ: ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಶ್ರೀಲಂಕಾ ಅಧಿಕಾರಿಗಳು ಇತ್ತೀಚೆಗೆ 37 ತಮಿಳು ಮೀನುಗಾರರನ್ನು ಬಂಧಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 21ರಂದು ಮೀನುಗಾರರನ್ನು ಬಂಧಿಸಲಾಗಿತ್ತು.

ರಾಹುಲ್ ಗಾಂಧಿಯವರ ಪತ್ರದ ಪ್ರಕಾರ, ಮೈಲಾಡುತುರೈ ಸಂಸದೀಯ ಕ್ಷೇತ್ರದಿಂದ ಬಂದಿರುವ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾದ ದೋಣಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಅವರನ್ನು ಬಂಧಿಸಲಾಯಿತು. ಶ್ರೀಲಂಕಾದ ಅಧಿಕಾರಿಗಳಿಂದ ಸಹಾಯ ಪಡೆಯಲು ಅವರ ಪ್ರಯತ್ನಗಳ ಹೊರತಾಗಿಯೂ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು ದಾಟಿದ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು. ಈ ಘಟನೆಯ ಸಂದರ್ಭದಲ್ಲಿ ಸಮುದಾಯದ ಆಸ್ತಿ ಎಂದು ವಿವರಿಸಲಾದ ಮೀನುಗಾರರ ದೋಣಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಎಡವಟ್ಟಾಯ್ತು!; ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ

ಮಾಯಿಲಾಡುತುರೈ ಸಂಸದರಾದ ಆರ್.ಸುಧಾ ಅವರು ಈ ಸಮಸ್ಯೆಯನ್ನು ರಾಹುಲ್ ಗಾಂಧಿಯವರ ಗಮನಕ್ಕೆ ತಂದರು. ಈ ಪ್ರದೇಶದ ಸಣ್ಣ ಪ್ರಮಾಣದ ಮೀನುಗಾರರ ಅನಿಶ್ಚಿತ ಪರಿಸ್ಥಿತಿಯನ್ನು ಎತ್ತಿ ತೋರಿಸಿದರು. “ಈ ವ್ಯಕ್ತಿಗಳು ಕೇವಲ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದರು” ಎಂದು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ