ನಾನೂ ನಿಮ್ಮಂತೆ ಸಾಮಾನ್ಯ ನಾಗರಿಕ; ರೈಲು ಪ್ರಯಾಣ ಮಾಡಿ ಅಭಿಪ್ರಾಯ ಸಂಗ್ರಹಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
Ashwini Vaishnaw: ಮತ್ತೊಂದು ವಿಡಿಯೋದಲ್ಲಿ ಅವರು ಇತರ ಅಧಿಕಾರಿಗಳ ಜೊತೆ ಕುಳಿತು, ಯೋಜನೆಗಳ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂದಿದೆ. ರಾಯಗಢಕ್ಕೆ ಪ್ರಯಾಣ ಬೆಳೆಸಿರುವ ವೇಳೆ ವಿವಿಧ ರೈಲ್ವೇ ಯೋಜನೆಯ ಬಗ್ಗೆ ಚರ್ಚಿಸಿದೆ ಎಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ.
ದೆಹಲಿ: ಭುವನೇಶ್ವರ್ನಿಂದ ರಾಯಗಢ ರೈಲಿನಲ್ಲಿ ಗುರುವಾರ ರಾತ್ರಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ಆಶ್ಚರ್ಯಕರ ಘಟನೆಯೊಂದನ್ನು ಎದುರಿಸಿದರು. ಅದೇನೆಂದರೆ, ಭಾರತದ ರೈಲ್ಬೇ ಸಚಿವ ಅಶ್ವಿನಿ ವೈಷ್ಣವ್ ಸ್ವತಃ ರೈಲು ಪ್ರಯಾಣಕ್ಕೆ ಜೊತೆಯಾದದ್ದು! ಹೌದು. ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಗುರುವಾರ ರಾತ್ರಿ ರೈಲಿನಲ್ಲಿ ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ಸಂಚರಿಸುತ್ತಾ ರೈಲು ಸೇವೆ ಹಾಗೂ ಕಾರ್ಯನಿರ್ವಹಿಸುವ ವಿಧಾನದ ಬಗ್ಗೆ ಪ್ರಯಾಣಿಕರಿಂದ ಅಭಿಪ್ರಾಯ ಪಡೆದರು.
ಮಾಜಿ ಐಎಎಸ್ ಅಧಿಕಾರಿ ಆಗಿರುವ ಅಶ್ವಿನಿ ವೈಷ್ಣವ್, ಕಳೆದ ತಿಂಗಳು ಕೇಂದ್ರ ಸಚಿವ ಸಂಪುಟವನ್ನು ಸೇರಿಕೊಂಡಿದ್ದರು. ರೈಲ್ವೇ ಸಚಿವರಾಗಿ ಅಧಿಕಾರ ವಹಿಸಿದ್ದರು. ಅವರು ಬಿಜೆಪಿಯ ಜನ ಆಶೀರ್ವಾದ ಯಾತ್ರೆಯ ಹಿನ್ನೆಲೆಯಲ್ಲಿ, ನಾಲ್ಕು ದಿನಗಳ ಒಡಿಶಾ ಪ್ರವಾಸದಲ್ಲಿ ಇದ್ದಾರೆ. ಈ ವೇಳೆ, ಅವರು ಭುವನೇಶ್ವರ್ನಿಂದ ರಾಯಗಢದ ರೈಲಿನಲ್ಲಿ ಗುರುವಾರ ಸಂಚಾರ ಮಾಡಿದ್ದಾರೆ.
ಸಚಿವ ಅಶ್ವಿನಿ ವೈಷ್ಣವ್ ರೈಲಿನಲ್ಲಿ ಪ್ರಯಾಣಿಕರ ಜೊತೆಗೆ ಸಂವಾದ ನಡೆಸುತ್ತಿರುವುದು, ಸಹಪ್ರಯಾಣಿಕರಂತೆ ಜನರ ಜೊತೆಯಾಗಿ ಅಭಿಪ್ರಾಯ ಸಂಗ್ರಹಿಸುತ್ತಿರುವ ವಿಡಿಯೋಗಳು ಹರಿದಾಡಿವೆ. ರೈಲು ಸ್ವಚ್ಛವಾಗಿದೆಯೇ ಎಂದು ರೈಲು ಪ್ರಯಾಣದ ಬಗ್ಗೆ ಅನುಭವ ಕೇಳಿದ್ದಾರೆ.
सबका साथ, सबका विकास, सबका विश्वास, सबका प्रयास |
ରେଳ ଯାତ୍ରୀ ମାନଙ୍କ ସହିତ ବାର୍ତ୍ତାଳାପ ସମୟରେ ବିଭିନ୍ନ ବର୍ଗର ଯାତ୍ରୀ ମାନଙ୍କ ସହିତ କଥା ହେଇ ବିଭିନ୍ନ ବିଷୟବସ୍ତୁ ସମ୍ବନ୍ଧରେ ଅବଗତ ହେଲି I. ?#JanAshirwadYatra pic.twitter.com/o1BLRUpokc
— Ashwini Vaishnaw (@AshwiniVaishnaw) August 19, 2021
ಮತ್ತೊಂದು ವಿಡಿಯೋದಲ್ಲಿ, ಇನ್ನೂ ಕೆಲವು ಪ್ರಯಾಣಿಕರೊಂದಿಗೆ ಅವರು ಮಾತನಾಡಿರುವುದು ಕಂಡುಬಂದಿದೆ. ಪ್ರಯಾಣಿಕರೊಬ್ಬರು ‘ಪ್ರಧಾನಿ ಮೋದಿ ಒಡಿಶಾಗೆ ಮೊದಲ ಬಾರಿಗೆ ರೈಲ್ವೇ ಸಚಿವರನ್ನು ನೀಡಿದ್ದಾರೆ’ ಎಂದು ಹೇಳುವುದು ಕೇಳಿಬಂದಿದೆ. ಅಶ್ವಿನಿ ವೈಷ್ಣವ್ ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ, ಅವರು ಪ್ರಯಾಣಿಕರ ಜೊತೆ ಕುಳಿತು ಮಾತನಾಡುತ್ತಿರುವುದು ಕಂಡುಬಂದಿದೆ. ಅದರಲ್ಲಿ ಅವರು, ನಿಮ್ಮಂತಹಾ ಯುವಜನರನ್ನು ಭೇಟಿ ಆಗಲು ಅವಕಾಶ ಸಿಕ್ಕಿರುವುದು ಖುಷಿ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ଭୁବନେଶ୍ୱର ଷ୍ଟେସନ ବୁଲିବା ସମୟରେ ଯାତ୍ରୀ ମାନଙ୍କ ସହିତ କଥା ହେଲି। ଯାତ୍ରୀ ମାନଙ୍କ ସହ କଥା ହେବା ବେଳେ ସେମାନଙ୍କର ବିଭିନ୍ନ ସମସ୍ୟା ଓ ସୁବିଧା ସମ୍ପର୍କରେ ପଚାରି ବୁଝିଲି I. ?#JanAshirwadJatra pic.twitter.com/PK7LFX7dv8
— Ashwini Vaishnaw (@AshwiniVaishnaw) August 19, 2021
ಒಬ್ಬರು ಮಹಿಳೆ, ನಿಮ್ಮನ್ನು ಭೇಟಿ ಆಗಲು ಸಿಕ್ಕಿರುವುದು ದೊಡ್ಡ ಅವಕಾಶ. ನಾವು ನಿಮ್ಮನ್ನು ಹೀಗೆ ಭೇಟಿ ಆಗಬಹದು ಎಂದು ಅಂದುಕೊಂಡೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ವೈಷ್ಣವ್, ನಾವು ಕೂಡ ನಿಮ್ಮ ಹಾಗೆ ಸಾಮಾನ್ಯ ನಾಗರಿಕರೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Reviewed various Railways projects in Odisha while en route to Rayagada on an overnight train journey. pic.twitter.com/ckgb6wpOtC
— Ashwini Vaishnaw (@AshwiniVaishnaw) August 19, 2021
ಮತ್ತೊಂದು ವಿಡಿಯೋದಲ್ಲಿ ಅವರು ಇತರ ಅಧಿಕಾರಿಗಳ ಜೊತೆ ಕುಳಿತು, ಯೋಜನೆಗಳ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂದಿದೆ. ರಾಯಗಢಕ್ಕೆ ಪ್ರಯಾಣ ಬೆಳೆಸಿರುವ ವೇಳೆ ವಿವಿಧ ರೈಲ್ವೇ ಯೋಜನೆಯ ಬಗ್ಗೆ ಚರ್ಚಿಸಿದೆ ಎಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Neo Metro: ಮೈಸೂರಿಗೆ ಬರಲಿರುವ ನಿಯೋ ಮೆಟ್ರೋ ವಿಶೇಷತೆಗಳೇನು? ರಸ್ತೆಯ ಮೇಲೆ ಓಡಾಡುವ ರೈಲು ಹೇಗಿರಲಿದೆ?
‘ಹೆಮ್ಮೆಯ ಕ್ಷಣ’: ಪುನರ್ನಿರ್ಮಾಣಗೊಂಡ ಗುಜರಾತ್ ರೈಲ್ವೇ ನಿಲ್ದಾಣದಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡ ಅಶ್ವಿನಿ ವೈಷ್ಣವ್
(Railway Minister Ashwini Vaishnaw boards over night Train from Bhuvaneshwar to Rayagada collects feedback from Passengers)