AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rain Updates: ಒಡಿಶಾದಲ್ಲಿ ಇಂದಿನಿಂದ 1 ವಾರ ಭಾರೀ ಮಳೆ; ಮಹಾರಾಷ್ಟ್ರದಲ್ಲಿ ರೈಲ್ವೆ ಹಳಿಗಳು ಮುಳುಗಡೆ

Maharashtra Rain: ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಥಾಣೆಯ ಹಲವಾರು ಪ್ರದೇಶಗಳು ಜಲಾವೃತವಾಗಿದೆ. ಥಾಣೆ ರೈಲು ನಿಲ್ದಾಣದ ರೈಲು ಹಳಿಗಳು ಮಳೆ ನೀರಿನಿಂದ ಮುಳುಗಿವೆ.

Rain Updates: ಒಡಿಶಾದಲ್ಲಿ ಇಂದಿನಿಂದ 1 ವಾರ ಭಾರೀ ಮಳೆ; ಮಹಾರಾಷ್ಟ್ರದಲ್ಲಿ ರೈಲ್ವೆ ಹಳಿಗಳು ಮುಳುಗಡೆ
ಒಡಿಶಾದಲ್ಲಿ ಭಾರೀ ಮಳೆ
TV9 Web
| Edited By: |

Updated on: Sep 18, 2022 | 10:59 AM

Share

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಮುಂದಿನ ಕೆಲವು ದಿನಗಳ ಕಾಲ ಒಡಿಶಾದಲ್ಲಿ (Odisha Rain) ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಚಂಡಮಾರುತವು (Cyclone) ಮಂಗಳವಾರ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವನ್ನು ರೂಪಿಸುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ಭಾರೀ ಮಳೆಯಿಂದ ಮನೆಯ ಗೋಡೆ ಕುಸಿದು ಉತ್ತರ ಪ್ರದೇಶದ ದಿಯೋರಿಯಲ್ಲಿ ಮೂರು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಹಲವು ದಿನಗಳಿಂದ ದಿಯೋರಿಯ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಜಲಾವೃತವಾಗಿದೆ. ಜನರ ಮನೆಗಳಿಗೆ ನೀರು ನುಗ್ಗಿದೆ.

ಒಡಿಶಾದಲ್ಲಿ, ಕಟಕ್, ಖುರ್ದಾ, ಪುರಿ, ಜಗತ್‌ಸಿಂಗ್‌ಪುರ, ಗಂಜಾಂ, ಗಜಪತಿ, ಕಲಹಂಡಿ, ಕೇಂದ್ರಪಾರಾ ಮತ್ತು ಕಂಧಮಾಲ್ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಒಡಿಶಾ ರಾಜ್ಯದ ಕರಾವಳಿ ಮತ್ತು ದಕ್ಷಿಣ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಸೋಮವಾರ ಹಳದಿ ಅಲರ್ಟ್​ ಘೋಷಿಸಲಾಗಿದೆ. ಮಂಗಳವಾರ ಮತ್ತು ಬುಧವಾರ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನೂ ನೀಡಲಾಗಿದೆ.ಹೀಗಾಗಿ, ಸಮುದ್ರದ ಪ್ರದೇಶಗಳಿಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Weather Today: ಉತ್ತರ ಪ್ರದೇಶ, ಉತ್ತರಾಖಂಡ ಸೇರಿ ಈ ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಮಹಾರಾಷ್ಟ್ರದಲ್ಲಿ ಭಾರೀ ಮಳೆ: ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಥಾಣೆಯ ಹಲವಾರು ಪ್ರದೇಶಗಳು ಜಲಾವೃತವಾಗಿದೆ. ಥಾಣೆ ರೈಲು ನಿಲ್ದಾಣದ ರೈಲು ಹಳಿಗಳು ಮಳೆ ನೀರಿನಿಂದ ಮುಳುಗಿವೆ. ಪುಣೆಯಲ್ಲಿ ನಿರಂತರ ಮಳೆಯಿಂದ ಮುಲಾಮುತಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಖಡಕ್ವಾಸ್ಲಾ ಅಣೆಕಟ್ಟು ತೆರೆದ ನಂತರ ಬಾಬಾ ಭಿಡೆ ಸೇತುವೆಯು ನೀರಿನಲ್ಲಿ ಮುಳುಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!