ನವದೆಹಲಿ: ವಾಯುವ್ಯ ಭಾರತದಲ್ಲಿ ಇಂದು ಭಾರೀ ಮಳೆಯಾಗಲಿದೆ. ಉತ್ತರ ಪ್ರದೇಶ (Uttar Pradesh Rain) ಮತ್ತು ರಾಜಸ್ಥಾನದ (Rajasthan Rain) ಕೆಲವು ಭಾಗಗಳಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗುವ (Heavy Rainfall) ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಸೇರಿದಂತೆ ಹಲವಾರು ಈಶಾನ್ಯ ರಾಜ್ಯಗಳಲ್ಲಿ ನಾಳೆ (ಸೆಪ್ಟೆಂಬರ್ 24)ಯವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರೀ ಮಳೆಯಾಗಲಿದೆ. ತೆಲಂಗಾಣ, ಉತ್ತರಾಖಂಡ, ಛತ್ತೀಸ್‌ಗಢ, ಒಡಿಶಾ ಮತ್ತು ಗುಜರಾತ್ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಸೆ. 24ರವರೆಗೆ ಅರುಣಾಚಲ ಪ್ರದೇಶದಲ್ಲಿ ಸಾಕಷ್ಟು ವ್ಯಾಪಕವಾದ ಮಳೆ ಬೀಳುವ ಸಾಧ್ಯತೆ ಇದೆ. ಅಸ್ಸಾಂ ಮತ್ತು ಮೇಘಾಲಯದಲ್ಲಿ ಕೂಡ ಇನ್ನೆರಡು ದಿನ ಮಳೆಯಾಗಲಿದೆ.
Isolated heavy falls & thunderstorm/lightning very likely over Uttarakhand during 23rd-26th; Himachal Pradesh and West Uttar Pradesh during 23rd-25th; Haryana, Chandigarh and East Rajasthan on 23rd & 24th; East Uttar Pradesh on 25th and Delhi & West Madhya Pradesh on 23rd Sept pic.twitter.com/YPH5AaeuAF
— India Meteorological Department (@Indiametdept) September 23, 2022
ಇದನ್ನೂ ಓದಿ: Rain Updates: ತೆಲಂಗಾಣದಲ್ಲಿ ಇನ್ನೂ ಕೆಲವು ದಿನ ಭಾರೀ ಮಳೆ ಸಾಧ್ಯತೆ; ಹೈದರಾಬಾದ್ನಲ್ಲಿ ಹಳದಿ ಅಲರ್ಟ್ ಘೋಷಣೆ
ಬಂಗಾಳಕೊಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಭಾರತದ ಅನೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಈ ರಾಜ್ಯಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
oFairly widespread/widespread light/moderate rainfall with isolated heavy falls & thunderstorm/lightning very likely over Odisha & Telangana on 22nd, Madhya Pradesh during 22nd & 23rd September, 2022. pic.twitter.com/6nNT620dA2
— India Meteorological Department (@Indiametdept) September 22, 2022
ಒಡಿಶಾದ ಹಲವು ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ರಾಜ್ಯದ ಕರಾವಳಿ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸತತ 2 ದಿನಗಳ ಕಾಲ ಕಡಿಮೆ ಒತ್ತಡದ ರಚನೆಯಿಂದಾಗಿ ಭಾರೀ ಮಳೆಯಾಗಲಿದೆ. ಒಡಿಶಾ ರಾಜ್ಯದ ಪಶ್ಚಿಮ ಮತ್ತು ಒಳನಾಡಿನ ಭಾಗಗಳ ಜೊತೆಗೆ ಭುವನೇಶ್ವರದಲ್ಲಿ ತೀವ್ರವಾದ ಮಳೆ ಮುಂದುವರೆಯಲಿದೆ.
ಇದನ್ನೂ ಓದಿ: Gurgaon Rains: ಗುರುಗ್ರಾಮದಲ್ಲಿ ಭಾರೀ ಮಳೆ, ರಸ್ತೆ ಮೇಲೆ ಪ್ರವಾಹ; ವರ್ಕ್ ಫ್ರಂ ಹೋಮ್ ಮಾಡಿ ಎಂದ ಅಧಿಕಾರಿಗಳು
ಮಧ್ಯಪ್ರದೇಶದ ಮೊರೆನಾ, ಛತ್ತರ್‌ಪುರ, ಟಿಕಮ್‌ಗಢ ಮತ್ತು ನಿವಾರಿಯಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ನರ್ಮದಾಪುರಂ ಮತ್ತು ಗ್ವಾಲಿಯರ್ ವಿಭಾಗಗಳ ಜಿಲ್ಲೆಗಳು ಸೇರಿದಂತೆ ಸುಮಾರು 20 ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ದೆಹಲಿಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮುಂದಿನ 2-3 ದಿನಗಳ ಕಾಲ ದೆಹಲಿಯಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.