ಕೊಡೈನ್ ಹೊಂದಿರುವ ಕೆಮ್ಮು ಸಿರಪ್‌ ನಿಷೇಧ ನಿರ್ಧಾರಕ್ಕೆ ಶೀಘ್ರದಲ್ಲೇ ಸಭೆ ಸೇರಲಿದೆ ಭಾರತದ ಔಷಧ ನಿಯಂತ್ರಣ ಸಂಸ್ಥೆ ಸಮಿತಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊಡೈನ್ ಹೊಂದಿರುವ  ಕೆಮ್ಮು ಸಿರಪ್‌ಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸುವ ನೀತಿಯನ್ನು ಪರಿಶೀಲಿಸುತ್ತಿದೆ.

ಕೊಡೈನ್ ಹೊಂದಿರುವ ಕೆಮ್ಮು ಸಿರಪ್‌ ನಿಷೇಧ ನಿರ್ಧಾರಕ್ಕೆ ಶೀಘ್ರದಲ್ಲೇ ಸಭೆ ಸೇರಲಿದೆ ಭಾರತದ ಔಷಧ ನಿಯಂತ್ರಣ ಸಂಸ್ಥೆ ಸಮಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 23, 2022 | 2:34 PM

ಭಾರತದ ಔಷಧ ನಿಯಂತ್ರಣ ಸಂಸ್ಥೆಯ ಅಡಿಯಲ್ಲಿರುವ ಅಪೆಕ್ಸ್ ಪ್ಯಾನೆಲ್ ಶೀಘ್ರದಲ್ಲೇ ಕೊಡೈನ್ ಹೊಂದಿರುವ ಕೆಮ್ಮಿನ  ಸಿರಪ್‌ಗಳನ್ನು ಒಳಗೊಂಡಂತೆ ಕಾಕ್‌ಟೈಲ್ ಔಷಧಿಗಳ ಭವಿಷ್ಯವನ್ನು ನಿರ್ಧರಿಸಲು ಸಜ್ಜಾಗಿದೆ ಎಂದು ನ್ಯೂಸ್ 18 ಡಾಟ್ ಕಾಂ ವರದಿ ಮಾಡಿದೆ. ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (DTBA) ಸಮಿತಿ ಆಯ್ದ ಫಿಕ್ಸೆಡ್ ಡೋಸ್ ಸಂಯೋಜನೆ (FDC) ಔಷಧಿಗಳ ಬಗ್ಗೆ ನಿರ್ಧರಿಸಲು ಸೆಪ್ಟೆಂಬರ್ 26 ರಂದು ಸಭೆ ಸೇರುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಅಂಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) 19 FDC ಗಳ ಪಟ್ಟಿಯನ್ನು ಮಾಡಿದೆ. ಇವುಗಳನ್ನು irrational combinations ಎಂದು ಪರಿಗಣಿಸಲಾಗಿದೆ. ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್‌ನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಎಂ.ಎಸ್.ಭಾಟಿಯಾ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞರ ಸಮಿತಿಯು ಪಟ್ಟಿಯನ್ನು ಪರಿಶೀಲಿಸಿದೆ. ಸುಮೋ, ಡಿ’ಕೋಲ್ಡ್ ಟೋಟಲ್, ಟೆಡ್ಡಿಕಾಫ್, ಟೋಸೆಕ್ಸ್, ಆಸ್ಕೋರಿಲ್, ಕೋಡಿಸ್ಟಾರ್, ಡೋಲೋ ಕೋಲ್ಡ್, ಪಿರಿಟಾನ್ ಮತ್ತು ಸ್ಯಾರಿಡಾನ್ ಮುಂತಾದ ಔಷಧಗಳು 19 ಕಾಕ್‌ಟೈಲ್ ಡ್ರಗ್ ಫಾರ್ಮುಲೇಶನ್‌ಗಳ ಪಟ್ಟಿಯ ಭಾಗವಾಗಿದೆ. ಕಾಕ್‌ಟೈಲ್ ಔಷಧಿಗಳ ಹೊರತಾಗಿ, ಕೇಂದ್ರ ಸರ್ಕಾರವು ಕೊಡೈನ್ ಆಧಾರಿತ ಔಷಧಿಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕುವತ್ತ ಗಮನಹರಿಸಿದೆ.

ಕೊಡೈನ್-ಆಧಾರಿತ ಸೂತ್ರೀಕರಣಗಳು ಸೇರಿದಂತೆ ಎಫ್‌ಡಿಸಿ ಔಷಧಿಗಳ ಕುರಿತು ಚರ್ಚೆಯನ್ನು ಪ್ರಾರಂಭಿಸಲು ಡಿಟಿಎಬಿ ಸಮಿತಿಯು ಬರುವ ಸೋಮವಾರ ಸಭೆ ಸೇರಲಿದೆ ಎಂದು ಅಭಿವೃದ್ಧಿಯ ಗೌಪ್ಯ ಸರ್ಕಾರಿ ಅಧಿಕಾರಿ ಹೇಳಿರುವುದಾಗಿ ನ್ಯೂಸ್ 18 ಡಾಟ್ ಕಾಂ ಉಲ್ಲೇಖಿಸಿದೆ.

ಸಮಿತಿಯ ಎಲ್ಲಾ ಸದಸ್ಯರ ಲಭ್ಯತೆಯನ್ನು ಪರಿಶೀಲಿಸಿ ಅಂತಿಮಗೊಳಿಸಲಾಗಿದೆ. ಎಫ್ ಡಿಸಿ ಗಳ ಭವಿಷ್ಯವನ್ನು ನಿರ್ಧರಿಸುವುದು ಔಷಧ ನಿಯಂತ್ರಕ ಕಚೇರಿಯಿಂದ ಬಾಕಿ ಉಳಿದಿರುವ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ವಿಜಿ ಸೋಮಾನಿ ಅವರಿಗೆ ಎರಡು ಪ್ರಮುಖ ಕಾರ್ಯಗಳನ್ನು ನೀಡಲಾಗಿದ್ದು ಕೇಂದ್ರ ಸರ್ಕಾರ ಅವರ ಅಧಿಕಾರಾವಧಿಯನ್ನು ಇತ್ತೀಚೆಗೆ ಮೂರು ತಿಂಗಳವರೆಗೆ ವಿಸ್ತರಿಸಿತು. ಇರೇಷನಲ್ ಕಾಕ್ಟೈಲ್ ಔಷಧಗಳು ಮತ್ತು ಕೊಡೈನ್ ಆಧಾರಿತ ಔಷಧಗಳನ್ನು ಹಂತ ಹಂತವಾಗಿ ನಿಷೇಧಿಸುವುದರ ಬಗ್ಗೆ ಮುಂಬರುವ ತಿಂಗಳುಗಳಲ್ಲಿ ಎರಡು ಯೋಜನೆಗಳನ್ನು ಪೂರ್ಣಗೊಳಿಸಲು ಡಿಸಿಜಿಐ ಅನ್ನು ಕೇಳಲಾಗಿದೆ.

ಕೊಡೈನ್ ಆಧಾರಿತ ಔಷಧಗಳನ್ನು ನಿಷೇಧ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊಡೈನ್ ಹೊಂದಿರುವ  ಕೆಮ್ಮು ಸಿರಪ್‌ಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸುವ ನೀತಿಯನ್ನು ಪರಿಶೀಲಿಸುತ್ತಿದೆ.  ಈ ಔಷಧಿಗಳನ್ನು ಔಷಧಿ ಆಗಿ ಬಳಸುವುದಕ್ಕಿಂತ ಹೆಚ್ಚು ಮಾದಕವಸ್ತುಗಳಾಗಿ ಬಳಸಲಾಗುತ್ತಿದೆ ಎಂದು ಎಂದು ಸಂಸತ್ತಿನಲ್ಲಿ ಹಲವಾರು ಸದಸ್ಯರು ಕಳವಳ ವ್ಯಕ್ತಪಡಿಸಿದ್ದರು.

ಕೊಡೈನ್ ಎಂಬುದು ಒಪಿಯಾಡ್ ಹೊಂದಿರುವ ನೋವು ನಿವಾರಕ. ಇದನ್ನು ಹೆಚ್ಚಾಗಿ ಕೆಮ್ಮು, ನೋವು ಮತ್ತು ಅತಿಸಾರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಕೆಮ್ಮು ಸಿರಪ್‌ಗಳನ್ನು ನಿಷೇಧಿಸುವಂತೆ ಹಲವಾರು ರಾಜಕಾರಣಿಗಳು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಮಾಡಿದ ಮನವಿಯ ಆಧಾರದ ಮೇಲೆ ಆರೋಗ್ಯ ಸಚಿವಾಲಯವು ಮಾರ್ಚ್‌ನಲ್ಲಿ DCGI ಗೆ ಪರಿಶೀಲನೆ ನಡೆಸಿ ಶಿಫಾರಸು ಸಲ್ಲಿಸಲು ಕೇಳಿತ್ತು. ಇತ್ತೀಚೆಗೆ ಡಿಸಿಜಿಐ ತನ್ನ ಪರಿಶೀಲನಾ ವರದಿಯನ್ನು ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಿತು, ಅಲ್ಲಿ ಕೆಲವು ಷರತ್ತುಗಳ ಆಧಾರದ ಮೇಲೆ ನಿಷೇಧ ಪಟ್ಟಿಯಿಂದ ಐದು ಎಫ್ ಡಿಸಿಗಳನ್ನು ತೆಗೆದುಹಾಕಲು ಮತ್ತು ಉಳಿದ 14 ಫಾರ್ಮುಲೇಷನ್ಸ್ ನಿಷೇಧಿಸಲು ಸಲಹೆ ನೀಡಿತು.

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ