ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಭೂಷಣ ರಾಜನ್ ಮಿಶ್ರಾ ನಿಧನ

|

Updated on: Apr 25, 2021 | 9:28 PM

Rajan Mishra: ಬನಾರಸ್ ಘರಾಣೆಯ ಖ್ಯಾತ ಗಾಯಕರಾದ ರಾಜನ್​ ಮಿಶ್ರಾ ತಮ್ಮ ಸೋದರ ಸಾಜನ್ ಮಿಶ್ರಾ ಜೊತೆಗೂಡಿ ಹಲವು ದಶಕಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಸಾವಿರಾರು ಕಛೇರಿಗಳನ್ನು ನಡೆಸಿಕೊಟ್ಟಿದ್ದರು.

ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಭೂಷಣ ರಾಜನ್ ಮಿಶ್ರಾ ನಿಧನ
ಹಿಂದೂಸ್ತಾನಿ ಸಂಗೀತ ಕಲಾವಿದ ಪಂಡಿತ್ ರಾಜನ್ ಮಿಶ್ರಾ
Follow us on

ದೆಹಲಿ: ಖಾತ ಹಿಂದೂಸ್ತಾನಿ ಸಂಗೀತ ಕಲಾವಿದ ರಾಜನ್ ಮಿಶ್ರಾ ದೆಹಲಿಯಲ್ಲಿ ಭಾನುವಾರ (ಏಪ್ರಿಲ್ 25) ಕೋವಿಡ್-19ರಿಂದ ನಿಧನರಾದರು. ಕೊರೊನಾ ಸೋಂಕಿನ ಜೊತೆಗೆ ಹೃದಯದ ತೊಂದರೆ ಕಾರಣಕ್ಕೆ ಅವರನ್ನು ದೆಹಲಿಯ ಸ್ಟೀಫನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹೇಳಿವೆ. ರಾಜನ್​ ಮಿಶ್ರಾ ಕುಟುಂಬದ ಸದಸ್ಯರೂ ಮರಣದ ವಿಚಾರವನ್ನು ದೃಢಪಡಿಸಿದ್ದಾರೆ ಎಂದು ಎಎನ್​ಐ ಸುದ್ದಿಸಂಸ್ಥೆ ತಿಳಿಸಿದೆ.

ಸಾಜನ್ ಮಿಶ್ರಾ ನಿಧನದ ಬಗ್ಗೆ ಯುವ ಸಂಗೀತ ಕಲಾವಿದ ಸಲೀಂ ಮರ್ಚೆಂಟ್ ಟ್ವೀಟ್ ಮಾಡಿದ್ದಾರೆ. ‘ಬನಾರಸ್ ಘರಾಣೆಯ ಖ್ಯಾತ ಕಲಾವಿದರಾದ ಪದ್ಮಶ್ರೀ ರಾಜನ್​ ಮಿಶ್ರಾ ನಮ್ಮನ್ನು ಅಗಲಿದ್ದಾರೆ. ಅವರು ಕೋವಿಡ್​ನಿಂದಾಗಿ ದೆಹಲಿಯಲ್ಲಿ ನಿಧನರಾದರು. ಪಂಡಿತ್​ ರಾಜನ್ ಸಾಜನ್​ ಮಿಶ್ರಾ ಕಲಾವಿದ ಜೋಡಿಯ ಮೊದಲ ಹೆಸರು ಅವರದೇ ಆಗಿತ್ತು.

ರಾಜನ್ ಮಿಶ್ರಾ ಸಾವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ‘ಪಂಡಿತ್ ರಾಜನ್ ಮಿಶ್ರಾ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತೇನೆ’ ಎಂದಿದ್ದಾರೆ.

ಬನಾರಸ್ ಘರಾಣೆಯ ಖ್ಯಾತ ಗಾಯಕರಾದ ರಾಜನ್​ ಮಿಶ್ರಾ ತಮ್ಮ ಸೋದರ ಸಾಜನ್ ಮಿಶ್ರಾ ಜೊತೆಗೂಡಿ ಹಲವು ದಶಕಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಸಾವಿರಾರು ಕಛೇರಿಗಳಲ್ಲಿ ನಡೆಸಿಕೊಟ್ಟಿದ್ದರು. ವಾರಾಣಸಿಯಲ್ಲಿ 1951ರಲ್ಲಿ ಜನಿಸಿದ ರಾಜನ್ ಮಿಶ್ರಾ ತಮ್ಮ ತಂದೆ ಹನುಮಾನ್ ಪ್ರಸಾದ್, ತಾತ ಬಡೇ ರಾಮ್​ ದಾಸ್​ ಜಿ ಮಿಶ್ರಾ ಮತ್ತು ಚಿಕ್ಕಪ್ಪ ಸಾರಂಗಿ ಕಲಾವಿದ ಗೋಪಾಲ್ ಪ್ರಸಾದ್ ಮಿಶ್ರಾರಿಂದ ಸಂಗೀತ ಪಾಠ ಕಲಿತಿದ್ದರು.

ಹಿಂದೂಸ್ತಾನಿ ಸಂಗೀತದ ಖ್ಯಾಲ್​ ಪ್ರಕಾರದ ಹಾಡುಗಾರಿಕೆಯಲ್ಲಿ ಸೋದರರು ಪ್ರಸಿದ್ಧರಾಗಿದ್ದರು. ಪದ್ಮಭೂಷಣ, ಸಂಗೀತ ನಾಟಕ ಪ್ರಶಸ್ತಿ ಮತ್ತು ಗಂಧರ್ವ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ರಾಜನ್​ ಮಿಶ್ರಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಶಾಸ್ತ್ರೀಯ ಸಂಗೀತದ ಮಹಾನ್ ಗಾಯಕ ರಾಜನ್​ ಮಿಶ್ರಾ ಜಿ ಅವರ ನಿಧನದಿಂದ ತುಂಬಾ ದುಃಖವಾಗಿದೆ. ಇದು ಕಲೆ ಮತ್ತು ಸಂಗೀತ ಪ್ರಪಂಚಕ್ಕೆ ದೊಡ್ಡ ನಷ್ಟ’ ಎಂದು ಹೇಳಿದ್ದಾರೆ.

(Rajan Mishra of Hindustani Classical Singers Rajan Sajan Mishra duo dies due to Covid-19 related complications in Delhi)

ಇದನ್ನೂ ಓದಿ: Shravan Rathod: ಖ್ಯಾತ ಸಂಗೀತ ನಿರ್ದೇಶಕ ಶ್ರವಣ್​ ರಾಥೋಡ್​ ಕೊರೊನಾ ವೈರಸ್​ನಿಂದ ನಿಧನ; ಚಿತ್ರರಂಗಕ್ಕೆ ಆಘಾತ

ಇದನ್ನೂ ಓದಿ:  ಕೊವಿಡ್​ ವಾರ್ಡ್​ನಲ್ಲೂ ಜೀವನೋತ್ಸಾಹದ ಸಂಗೀತ; ಬಪ್ಪಿ ಲಹರಿ ವಿಡಿಯೋ ವೈರಲ್​

Published On - 9:20 pm, Sun, 25 April 21