ವೈದ್ಯಕೀಯೇತರ ಉದ್ದೇಶಗಳಿಗೆ ದ್ರವ ಆಮ್ಲಜನಕ ಬಳಕೆಗೆ ನಿರ್ಬಂಧ; ಕೇಂದ್ರ ಸರ್ಕಾರ ಆದೇಶ

Medical Oxygen: ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿನ್ನೆಯಷ್ಟೇ ಇನ್ನೊಂದು ಮಹತ್ವದ ಹೆಜ್ಜೆಯಿಟ್ಟಿತ್ತು.  ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ಕಡಿತಕ್ಕೆ ಆದೇಶ ನೀಡಿತ್ತು. ನಿನ್ನೆಯ ಆದೇಶದ ಮೂಲಕ ಆಕ್ಸಿಜನ್​ ಸರಬರಾಜು, ವ್ಯಾಕ್ಸಿನ್​ ಆಮದಿಗೂ ಸುಂಕ ಕಡಿತಗೊಳಿಸಿತ್ತು.

ವೈದ್ಯಕೀಯೇತರ ಉದ್ದೇಶಗಳಿಗೆ ದ್ರವ ಆಮ್ಲಜನಕ ಬಳಕೆಗೆ ನಿರ್ಬಂಧ; ಕೇಂದ್ರ ಸರ್ಕಾರ ಆದೇಶ
ಪ್ರಾತಿನಿಧಿಕ ಚಿತ್ರ

ದೆಹಲಿ: ಕೊವಿಡ್ ಸೋಂಕಿತರ ಚಿಕಿತ್ಸೆಗಾಗಿ ತುರ್ತು ಕ್ರಮ ಕೈಗೊಂಡಿರುವ ಕೇಂದ್ರ ಗೃಹ ಇಲಾಖೆ ವೈದ್ಯಕೀಯ ದ್ರವ ಆಮ್ಲಜನಕವನ್ನು ವೈದ್ಯಕೀಯೇತರ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ. ಈ ಕುರಿತು ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ನಿರ್ದೇಶನ ನೀಡಿದೆ. ಮುಂದಿನ ಆದೇಶ ಬರುವವರೆಗೂ ಮೆಡಿಕಲ್ ಆಕ್ಸಿಜನ್​ನ್ನು ವೈದ್ಯಕೀಯ ಉಪಯೋಗ ಹೊರತುಪಡಿಸಿ ಬೇರೆ ಯಾವ ಉಪಯೋಗಕ್ಕೂ ಬಳಸುವಂತಿಲ್ಲ ಎಂದು ತಿಳಿಸಿದೆ. ಸದ್ಯ ದೇಶದಲ್ಲಿ ದಾಸ್ತಾನು ಇರುವ ವೈದ್ಯಕೀಯ ಆಮ್ಲಜನಕಕ್ಕೂ ಇದೇ ಆದೇಶ ಅನ್ವಯವಾಗಲಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿನ್ನೆಯಷ್ಟೇ ಇನ್ನೊಂದು ಮಹತ್ವದ ಹೆಜ್ಜೆಯಿಟ್ಟಿತ್ತು.  ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ಕಡಿತಕ್ಕೆ ಆದೇಶ ನೀಡಿತ್ತು. ನಿನ್ನೆಯ ಆದೇಶದ ಮೂಲಕ ಆಕ್ಸಿಜನ್​ ಸರಬರಾಜು, ವ್ಯಾಕ್ಸಿನ್​ ಆಮದಿಗೂ ಸುಂಕ ಕಡಿತಗೊಳಿಸಿದೆ. ಸೀಮಾ ಸುಂಕದಿಂದ ಕೊರೊನಾ ವ್ಯಾಕ್ಸಿನ್​ಗೆ ವಿನಾಯಿತಿ ನೀಡಲಾಗಿದ್ದು, ಆಮದಿಗೆ ವಿಧಿಸಲಾಗುತ್ತಿದ್ದ ಹೆಲ್ತ್​ ಸೆಸ್​ ಕೂಡ ರದ್ದು ಮಾಡಲಾಗಿದೆ. 3 ತಿಂಗಳವರೆಗೆ ಈ ತೆರಿಗೆ ವಿನಾಯಿತಿಗಳು ಅನ್ವಯವಾಗಲಿವೆ ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರವು ಆಕ್ಸಿಜನ್​ ಸರಬರಾಜು, ವ್ಯಾಕ್ಸಿನ್​ ಆಮದು ಮೇಲಿನ ಸುಂಕ ಕಡಿತಗೊಳಿಸಿರುವುದರಿಂದ ಈ ವೈದ್ಯಕೀಯ ಉಪಕರಣಗಳು ಈಗ ಅಗ್ಗವಾಗಲಿದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ. ಇಂತಹ ಉಪಕರಣಗಳ ಸರಬರಾಜಿಗೆ ಯಾವುದೇ ಅಡೆತಡೆ ಇಲ್ಲದೆ ಸುಲಲಿತವಾಗಿ ಸಾಗಾಟವಾಗುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಹರ್ಷ ವರ್ಧನ್, ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ಮತ್ತಿತರ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮನೆಗಳಲ್ಲಿನ ಚಿಕಿತ್ಸೆ ಮತ್ತು ಆಸ್ಪತ್ರೆಗಳಿಗೆ ತಕ್ಷಣಕ್ಕೆ ಆಕ್ಸಿಜನ್​ ಸರಬರಾಜು, ವ್ಯಾಕ್ಸಿನ್​ ಆಮದು ಹಾಗೂ ವೈದ್ಯಕೀಯ ಉಪಕರಣಗಳ ಅಗತ್ಯ ಬಹಳಷ್ಟಿದೆ. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ

(Central govt restricts use of liquid medical oxygen for only medical use)

Click on your DTH Provider to Add TV9 Kannada