ಮಧ್ಯಪ್ರದೇಶ: ಸ್ವಾತಂತ್ರ್ಯ ಹೋರಾಟಗಾರ 104ರ ಹರೆಯದ ವ್ಯಕ್ತಿ ಕೊವಿಡ್​ನಿಂದ ಚೇತರಿಕೆ

104 year Old Man Beats Covid 19: ಅಂದಹಾಗೆ ಕೊವಿಡ್ ವಿರುದ್ಧ ಹೋರಾಡಿ ಗೆದ್ದಿದ್ದು ಹೇಗೆ ಎಂದು ಗೋಥಿ ಅವರಲ್ಲಿ ಕೇಳಿದಾಗ, ಪಾಸಿಟಿವ್ ಆಗಿರಿ,ನಗುತ್ತಾ ಇರಿ, ವ್ಯಾಯಾಮ ಮಾಡಿ, ಸಮತೂಕದ ಆಹಾರ ಸೇವಿಸಿ ಅಂತಾರೆ ಈ ಗಾಂಧೀವಾದಿ.

ಮಧ್ಯಪ್ರದೇಶ: ಸ್ವಾತಂತ್ರ್ಯ ಹೋರಾಟಗಾರ 104ರ ಹರೆಯದ ವ್ಯಕ್ತಿ ಕೊವಿಡ್​ನಿಂದ ಚೇತರಿಕೆ
ಬಿರ್ದಿಚಂದ್ ಜೀ ಗೋಥಿ (ಕೃಪೆ: ಟ್ವಿಟರ್)
Rashmi Kallakatta

|

Apr 25, 2021 | 7:57 PM

ದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಬ್ರಿಟಿಷರ ವಿರುದ್ಧ ಹೋರಾಡಿದ್ದ ಸ್ವಾತಂತ್ರ್ಯಹೋರಾಟಗಾರ, ಮಧ್ಯ ಪ್ರದೇಶದ ಬೇತುಲ್ ನಿವಾಸಿ 104ರ ಹರೆಯದ ಗಾಂಧಿವಾದಿ ಕೊವಿಡ್ ರೋಗದಿಂದ ಚೇತರಿಸಿಕೊಂಡಿದ್ದಾರೆ. ಇಲ್ಲಿನ ಬಿರ್ದಿಚಂದ್ ಜೀ ಗೋಥಿ ಅವರಿಗೆ ಏಪ್ರಿಲ್ 5ರಂದು ಕೊವಿಡ್ ದೃಢಪಟ್ಟಿತ್ತು ಎಂದು ಅವರ ಮೊಮ್ಮಗ ಶ್ರೇಯಾಂಶ್ ಗೋಥಿ ಹೇಳಿದ್ದಾರೆ.

ಕುಟುಂಬದ ಸದಸ್ಯರೇ ಆಗಿರುವ ವೈದ್ಯರು ಮನೆಯಲ್ಲಿಯೇ ಗೋಥಿ ಅವರ ಆರೈಕೆ ಮಾಡಿದ್ದರು. ದಿನಕ್ಕೆ2-3ಗಂಟೆವರೆಗೆ ಈಗಲೂ ಆಕ್ಸಿಜನ್ ನೀಡುತ್ತಿದ್ದೇವೆ ಅಂತಾರೆ ಶ್ರೇಯಾಂಶ್.

ಅಂದಹಾಗೆ ಕೊವಿಡ್ ವಿರುದ್ಧ ಹೋರಾಡಿ ಗೆದ್ದಿದ್ದು ಹೇಗೆ ಎಂದು ಗೋಥಿ ಅವರಲ್ಲಿ ಕೇಳಿದಾಗ, ಪಾಸಿಟಿವ್ ಆಗಿರಿ,ನಗುತ್ತಾ ಇರಿ, ವ್ಯಾಯಾಮ ಮಾಡಿ, ಸಮತೂಕದ ಆಹಾರ ಸೇವಿಸಿ ಅಂತಾರೆ ಈ ಗಾಂಧೀವಾದಿ. ಸ್ಥಳೀಯರ ಪ್ರಕಾರ ಗಾಂಧಿ ತತ್ವಗಳನ್ನು ಪಾಲಿಸುವ ಗೋಥಿ ಅವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಲವಾರು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದರು.

ಮಧ್ಯ ಪ್ರದೇಶದಲ್ಲಿ ಶನಿವಾರ 12,918 ಹೊಸ ಪ್ರಕರಣಗಳು ದಾಖಲಾಗಿದ್ದು ಒಂದೇ ದಿನ 104 ಸಾವು ವರದಿ ಆಗಿದೆ. ರಾಜ್ಯದಲ್ಲಿ ಒಟ್ಟು 4,85,703 ಸೋಂಕಿತರಿದ್ದು ಸಾವಿನ ಸಂಖ್ಯೆ 5,041ಕ್ಕೇರಿದೆ. ಅದೇ ವೇಳೆ ಕಳೆದ 24 ಗಂಟೆಗಳಲ್ಲಿ 11,091 ಮಂದಿ ಚೇತರಿಸಿಕೊಂಡಿದದ್ದು, ಚೇತರಿಸಿಕೊಂಡವರ ಒಟ್ಟು ಸಂಖ್ಯೆ 3,91,299 ಆಗಿದೆ. 89,363 ಸಕ್ರಿಯ ಪ್ರಕರಣಗಳು ಇಲ್ಲಿವೆ, 55,879 ಮಾದರಿಗಳನ್ನು ಪರೀಕ್ಷೆಗೊಳಪಡಿಸಿದ್ದು ಮಧ್ಯಪ್ರದೇಶದಲ್ಲಿ ಪರೀಕ್ಷೆಗೊಳಪಡಿಸಿದ ಮಾದರಿಗಳ ಸಂಖ್ಯೆ 73.97 ಲಕ್ಷ ದಾಟಿದೆ.

ದೇಶದಲ್ಲಿಸತತ ನಾಲ್ಕನೇ ದಿನವೂ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದ್ದು ಕಳೆದ 24 ಗಂಟೆಗಳಲ್ಲಿ 3,49,691 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಶನಿವಾರ ದೇಶದಲ್ಲಿ 2,767 ಸಾವು ಸಂಭವಿಸಿದ್ದು 2,17,113 ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 26,82,751 ಸಕ್ರಿಯ ಪ್ರಕರಣಗಳಿದ್ದು, ಕೊವಿಡ್ ರೋಗಿಗಳ ಸಂಖ್ಯೆ 1,69,60,172ಕ್ಕೇರಿದೆ. ಇಲ್ಲಿಯವರೆಗೆ 1,92,311 ಮಂದಿ ಸಾವಿಗೀಡಾಗಿದ್ದು, 1,40,85,110 ಮಂದಿ ಚೇತರಿಸಿಕೊಂಡಿದ್ದಾರೆ. 14,09,16,417 ಮಂದಿ ಕೊವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ಏಪ್ರಿಲ್ 22 ರಂದು ಮೊದಲ ಬಾರಿ ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ 3 ಲಕ್ಷದಾಟಿತ್ತು. ಆ ದಿನ ಸೋಂಕಿತರ ಸಂಖ್ಯೆ 3,14,835 ವರದಿ ಆಗಿದ್ದು ಜಗತ್ತಿನಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ದಾಖಲೆಯಾಗಿತ್ತು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 11,60,472 ಸೋಂಕಿತರಿದ್ದು ಸಾವಿನ ಸಂಖ್ಯೆ 5028 ಆಗಿದೆ .ಅದೇ ವೇಳೆ ಆಂಧ್ರ ಪ್ರದೇಶದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 922977 ಕ್ಕೇರಿದ್ದು 7541 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 934966 ಆಗಿದ್ದು, 13317 ಮಂದಿ ಸಾವಿಗೀಡಾಗಿದ್ದಾರೆ.

ಅತೀ ಹೆಚ್ಚು ಸೋಂಕಿತರಿರುವ ಮಹಾರಾಷ್ಟ್ರದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 3330747 ಆಗಿದ್ದು 62479 ಮಂದಿ ಅಸುನೀಗಿದ್ದಾರೆ. ಮಧ್ಯ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 369375, ಸಾವಿನ ಸಂಖ್ಯೆ 4863. ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 706414 ಆಗಿದ್ದು 10541 ಮಂದಿ ಸಾವಿಗೀಡಾಗಿದ್ದಾರೆ. ಪಶ್ಚಿಮ ಬಂಗಾಳಳದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ 621340ಕೇರಿದ್ದು, 10766 ಮಂದಿ ಸಾವಿಗೀಡಾಗಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾಹಿತಿ ಪ್ರಕಾರ ಏಪ್ರಿಲ್ 24ರಂದು 27,79,18,810 ಮಾದರಿಗಳನ್ನುಕೊವಿಡ್ ಪರೀಕ್ಷೆಗೊಳ ಪಡಿಸಲಾಗಿದೆ.

ಇದನ್ನೂ ಓದಿ:  ಮಧ್ಯಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ; 6 ಕೊವಿಡ್ ರೋಗಿಗಳು ಸಾವು

ಮಧ್ಯಪ್ರದೇಶದಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗೆ ನಡುರಸ್ತೆಯಲ್ಲಿಯೇ ಹಿಗ್ಗಾಮುಗ್ಗ ಥಳಿಸಿದ ಪೊಲೀಸ್, ವಿಡಿಯೊ ವೈರಲ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada