ರಾಜಸ್ಥಾನ: ಮಿಗ್-21 ಲಘು ವಿಮಾನ (Mig 21 crash) ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸಾವಿಗೀಡಾಗಿದ್ದಾರೆ. ರಾಜಸ್ಥಾನದ ಬಾರ್ಮರ್ (Rajasthan Barmer) ಬಳಿ ಈ ಮಿಗ್-21 ಜೆಟ್ ವಿಮಾನ ಪತಗೊಂಡಿದೆ.
ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಳಿ ಪತನಗೊಂಡಿದೆ ಎಂದು ANI ವರದಿ ಮಾಡಿದೆ. ಪೈಲಟ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. “ಇದು ಐಎಎಫ್ ವಿಮಾನವು ಬೇಟೂನ ಭೀಮಡಾ ಗ್ರಾಮದ ಬಳಿ ಪತನಗೊಂಡಿದೆ” ಎಂದು ಬಾರ್ಮರ್ ಜಿಲ್ಲಾಧಿಕಾರಿ ಲೋಕ್ ಬಂಡು ಪಿಟಿಐಗೆ ತಿಳಿಸಿದ್ದಾರೆ.
#WATCH | Rajasthan: A MiG-21 fighter aircraft of the Indian Air Force crashed near Barmer district. Further details regarding the pilots awaited pic.twitter.com/5KfO24hZB6
— ANI (@ANI) July 28, 2022
2021 ರಲ್ಲಿ, ಐದು ಮಿಗ್ -21 ಗಳು ಭಾರತದಲ್ಲಿ ಪತನಗೊಂಡಿದ್ದವು. ಇದರ ಪರಿಣಾಮವಾಗಿ ಮೂವರು ಪೈಲಟ್‌ಗಳು ಸಾವನ್ನಪ್ಪಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಎಎಫ್ ಪೈಲಟ್, ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಅವರು ಮಿಗ್ -21 ಯುದ್ಧ ವಿಮಾನವು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ತರಬೇತಿಯ ಸಮಯದಲ್ಲಿ ಪತನಗೊಂಡ ದುರ್ಘಟನೆಯಲ್ಲಿ ಸಾವನ್ನಪ್ಪಿದರು.
Published On - 10:21 pm, Thu, 28 July 22