ಜೋಧಪುರದಲ್ಲಿ ರಂಜಾನ್ ಈದ್ ವೇಳೆ ಘರ್ಷಣೆ: ಈವರೆಗೆ 52 ಬಂಧನ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 04, 2022 | 11:26 AM

ರಂಜಾನ್ ಈದ್ ವೇಳೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದ್ದ ಘರ್ಷಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 52 ಬಂಧಿಸಿರುವ ರಾಜಸ್ಥಾನ ಪೊಲೀಸರು, 42 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜೋಧಪುರದಲ್ಲಿ ರಂಜಾನ್ ಈದ್ ವೇಳೆ ಘರ್ಷಣೆ: ಈವರೆಗೆ 52 ಬಂಧನ
ರಂಜಾನ್ ಹಬ್ಬದ ದಿನ ಜೋಧಪುರದಲ್ಲಿ ನಡೆದಿದ್ದ ಹಿಂಸಾಚಾರ
Follow us on

ಜೈಪುರ: ರಂಜಾನ್ ಈದ್ ವೇಳೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದ್ದ ಘರ್ಷಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 52 ಬಂಧಿಸಿರುವ ರಾಜಸ್ಥಾನ ಪೊಲೀಸರು, 42 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ತವರು ನಗರ ಜೋಧಪುರದಲ್ಲಿ ರಂಜಾನ್ ಈದ್ ದಿನದ ಸಂಜೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಘರ್ಷಣೆ ನಡೆದಿತ್ತು.

ಉದಯ್ ಮಂದಿರ ಮತ್ತು ನಾಗೋರಿ ಗೇಟ್ ಸೇರಿದಂತೆ ಜೋಧಪುರದ ಹಲವು ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿದಿದೆ. ಗಾಳಿಸುದ್ದಿ ಹರಡುವುದನ್ನು ತಡೆಯುವ ಉದ್ದೇಶದಿಂದ ಇಂಟರ್ನೆಟ್​ನಿರ್ಬಂಧಿಸಲಾಗಿದೆ.

ಜಾಲೋರಿ ಗೇಟ್ ಸರ್ಕಲ್​ನಲ್ಲಿ ಈದ್ ಬಾವುಟಗಳನ್ನು ಹಾರಿಸಿದ ನಂತರ ಎರಡೂ ಸಮುದಾಯಗಳ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ನಡೆದ ಕಲ್ಲುತೂರಾಟದಲಲ್ಲಿ ಐವರು ಪೊಲೀಸರು ಸೇರಿ ಹಲವರು ಗಾಯಗೊಂಡಿದ್ದರು. ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್​ಗಳನ್ನು ಸಿಡಿಸಿದ್ದರು. ಮೂರು ದಿನಗಳ ಪರಶುರಾಮ ಜಯಂತಿ ಸಂದರ್ಭದಲ್ಲಿಯೇ ಈ ಘರ್ಷಣೆ ನಡೆದಿದೆ.

ಹಿಂಸಾಚಾರದಲ್ಲಿ ಬಿಜೆಪಿ ಕೈವಾಡವಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೂರಿದ್ದರು. ‘ಹಣದುಬ್ಬರ, ನಿರುದ್ಯೋಗ ಹೆಚ್ಚಾಗಿದೆ. ಆರ್ಥಿಕ ಪರಿಸ್ಥಿತಿ ನಿರ್ವಹಿಸುವಲ್ಲಿ ವಿಫಲವಾಗಿರುವ ಬಿಜೆಪಿ ಇಂಥ ಕ್ಷುಲ್ಲಕ ರಾಜಕಾರಣದ ಮೂಲಕ ಜನರ ಗಮನ ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ ಎಂದು ದೂರಿದದರು. ದೆಹಲಿ, ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಸಂಭವಿಸಿದ್ದ ಕೋಮು ಗಲಭೆಗಳ ಸಾಲಿಗೆ ಜೋಧಪುರವು ಹೊಸ ಸೇರ್ಪಡೆಯಾಗಿದೆ.

ಇದನ್ನೂ ಓದಿ: ನನ್ನ ರಾಜೀನಾಮೆ ಪತ್ರ ಯಾವಾಗಲೂ ಸೋನಿಯಾ ಗಾಂಧಿ ಬಳಿಯೇ ಇರುತ್ತದೆ: ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​

ಇದನ್ನೂ ಓದಿ: ರಾಜಸ್ಥಾನದಲ್ಲಿ 300 ವರ್ಷ ಹಳೆಯ ಶಿವನ ದೇವಸ್ಥಾನ ನೆಲಸಮ; ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

Published On - 11:26 am, Wed, 4 May 22