ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಾಯಿಯನ್ನು ಭೇಟಿ ಮಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

ಕಳೆದ 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕುಟುಂಬ ಕಾರ್ಯಕ್ರಮಕ್ಕಾಗಿ ಯೋಗಿ ಆದಿತ್ಯನಾಥ್ ಉತ್ತರಾಖಂಡ್​ಗೆ ಭೇಟಿ ನೀಡಿದ್ದಾರೆ.

ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಾಯಿಯನ್ನು ಭೇಟಿ ಮಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 04, 2022 | 9:50 AM

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ತಾಯಿ ಸಾವಿತ್ರಾ ದೇವಿ ಅವರ ಪಾದ ಸ್ಪರ್ಶಿಸುತ್ತಿರುವ ಚಿತ್ರವೊಂದನ್ನು ಬುಧವಾರ (ಏಪ್ರಿಲ್ 4) ಟ್ವೀಟ್ ಮಾಡಿದ್ದಾರೆ. ‘ಮಾ’ ಎಂದು ಹಿಂದಿ ಭಾಷೆಯಲ್ಲಿ ಒಂದು ಅಕ್ಷರದ ಒಕ್ಕಣೆ ಮಾತ್ರ ಈ ಚಿತ್ರ ಚಿತ್ರಕ್ಕೆ ಇದೆ. ತಮ್ಮ ಸಂಬಂಧಿಯೊಬ್ಬರ ಮಗುವಿನ ಚೌಲಕ್ಕೆಂದು ಉತ್ತರಾಖಂಡದ ಪೌರಿ ಗ್ರಾಮಕ್ಕೆ ಹೋಗಿರುವ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಮ್ಮ ತಾಯಿಯನ್ನು ಭೇಟಿಯಾದರು.

ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕಳೆದ 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕುಟುಂಬ ಕಾರ್ಯಕ್ರಮಕ್ಕಾಗಿ ಯೋಗಿ ಆದಿತ್ಯನಾಥ್ ಉತ್ತರಾಖಂಡ್​ಗೆ ಭೇಟಿ ನೀಡಿದ್ದಾರೆ. ಕಳೆದ ಏಪ್ರಿಲ್ 2020ರಂದು ತಮ್ಮ ತಂದೆ ಕೊರೊನಾ ಸೋಂಕಿನಿಂದ ಮೃತಪಟ್ಟ ನಂತರ ಹರಿದ್ವಾರಕ್ಕೆ ಯೋಗಿ ಆದಿತ್ಯನಾಥ್​ ಹೋಗಿದ್ದರಾದರೂ ಅಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಾಗಿರಲಿಲ್ಲ. ಉತ್ತರ ಪ್ರದೇಶದಲ್ಲಿ ವ್ಯಾಪಿಸಿದ್ದ ಕೊರೊನಾ ಸೋಂಕು ನಿಯಂತ್ರಣದ ಕೆಲಸಗಳ ಒತ್ತಡದಿಂದಾಗಿ ಅವರು ತಕ್ಷಣವೇ ಲಖನೌಗೆ ಹಿಂದಿರುಗಬೇಕಾಯಿತು.

‘ನನ್ನ ತಂದೆಯ ಕೊನೆಯ ಕ್ಷಣಗಳಲ್ಲಿ ಹೆಚ್ಚು ಹೊತ್ತು ಇರಲು ಆಗಲಿಲ್ಲ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಲು ಸಾಧ್ಯವಾಗಿದ್ದು ಕೆಲವೇ ಕ್ಷಣಗಳು ಮಾತ್ರ. ಕೊವಿಡ್-19 ಪಿಡುಗಿನಿಂದ ಉತ್ತರ ಪ್ರದೇಶದ 23 ಕೋಟಿ ಜನರನ್ನು ಕಾಪಾಡಬೇಕಾದ ಹೊಣೆಗಾರಿಕೆ ನನ್ನದಾಗಿತ್ತು. ಹೀಗಾಗಿ ನಾನು ಹೆಚ್ಚು ಹೊತ್ತು ತಂದೆಯ ಸಮೀಪ ಇರಲು ಸಾಧ್ಯವಾಗಿರಲಿಲ್ಲ’ ಎಂದು ಯೋಗಿ ಆದಿತ್ಯನಾಥ ಹೇಳಿದ್ದರು.

ತಮ್ಮ ತವರು ಜಿಲ್ಲೆಯಲ್ಲಿರುವ ಮಹಾಯೋಗಿ ಗುರು ಗೋರಖ್​ನಾತ್ ಸರ್ಕಾರಿ ಕಾಲೇಜಿನಲ್ಲಿ ತಮ್ಮ ಆಧ್ಯಾತ್ಮಿಕ ಗುರು ಮಹಂತ ಆದಿತ್ಯನಾಥ್ ಅವರ ಪುತ್ಥಳಿ ಅನಾವರಣ ಸಂದರ್ಭದಲ್ಲಿಯೂ ಯೋಗಿ ಆದಿತ್ಯನಾಥ್ ಭಾವುಕರಾಗಿದ್ದರು. ತಮ್ಮ ಗುರುಗಳು ಈ ಪ್ರದೇಶದಲ್ಲಿ ಜನಿಸಿದ್ದರೂ 1940ರ ನಂತರ ಇಲ್ಲಿಗೆ ಭೇಟಿ ನೀಡಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದರು.

ಇದನ್ನೂ ಓದಿ: Kangana Ranaut: ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ನಟಿ ಕಂಗನಾ ರಣಾವತ್​; ಈ ಮೀಟಿಂಗ್​ ಉದ್ದೇಶ ಏನು?

ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್ ಆದೇಶ; ದೇಗುಲ, ಮಸೀದಿಗಳಲ್ಲಿ ಹಾಕಲಾಗಿದ್ದ ಧ್ವನಿವರ್ಧಕಗಳನ್ನೆಲ್ಲ ತೆಗೆಯುತ್ತಿರುವ ಪೊಲೀಸರು

Published On - 8:42 am, Wed, 4 May 22