AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajasthan Politics: ಪ್ರತಿ ತಪ್ಪಿಗೂ ಶಿಕ್ಷೆಯ ಅಗತ್ಯವಿದೆ: ಸಚಿನ್ ಪೈಲಟ್

ರಾಜಸ್ಥಾನದಲ್ಲಿ ಪೈಲಟ್(Sachin Pilot) ಹಾಗೂ ಅಶೋಕ್ ಗೆಹ್ಲೋಟ್(Ashok Gehlot)​ ನಡುವಿನ ಭಿನ್ನಾಭಿಪ್ರಾಯವು ರಾಜಕೀಯ ತಾಪಮಾನವನ್ನು ಹೆಚ್ಚಿಸುತ್ತಿದೆ.

Rajasthan Politics: ಪ್ರತಿ ತಪ್ಪಿಗೂ ಶಿಕ್ಷೆಯ ಅಗತ್ಯವಿದೆ: ಸಚಿನ್ ಪೈಲಟ್
ಸಚಿನ್ ಪೈಲಟ್Image Credit source: Mint
Follow us
ನಯನಾ ರಾಜೀವ್
|

Updated on: Jun 12, 2023 | 9:37 AM

ರಾಜಸ್ಥಾನದಲ್ಲಿ ಸಚಿನ್ ಪೈಲಟ್(Sachin Pilot) ಹಾಗೂ ಅಶೋಕ್ ಗೆಹ್ಲೋಟ್(Ashok Gehlot)​ ನಡುವಿನ ಭಿನ್ನಾಭಿಪ್ರಾಯವು ರಾಜಕೀಯ ತಾಪಮಾನವನ್ನು ಹೆಚ್ಚಿಸುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ಎರಡು ನಾಯಕರ ನಡುವೆ ಹೊಂದಾಣಿಕೆಯಾಗುತ್ತಿಲ್ಲ, ಪ್ರತಿ ತಪ್ಪಿಗೂ ಶಿಕ್ಷೆಯ ಅಗತ್ಯವಿದೆ ಎಂದು ಸಚಿನ್ ಪೈಲಟ್ ಅಶೋಕ್ ಗೆಹ್ಲೋಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿನ್ ಪೈಲಟ್ ಅವರು ದೌಸಾದಲ್ಲಿ  ಸಿಎಂ ಅಶೋಕ್ ಗೆಹ್ಲೋಟ್ ಅವರ ಹೆಸರನ್ನು ತೆಗೆದುಕೊಳ್ಳದೆ ತೀವ್ರವಾಗಿ ವಾಗ್ದಾಳಿ ನಡೆಸಿದರು. ಗಣಿ ಹಂಚಿಕೆ ಕುರಿತು ಆದ ತಪ್ಪಿನ ಬಗ್ಗೆ ಮಾತನಾಡಿದರು. ಜನರಿಗೆ ನ್ಯಾಯ ಒದಗಿಸುವ ಭರವಸೆ ನಿನ್ನೆಯೂ ಇತ್ತು, ಇಂದೂ ಇದೆ ಮತ್ತು ನಾಳೆಯೂ ಹಾಗೆಯೇ ಇರುತ್ತದೆ. ರಾಜಕೀಯದಲ್ಲಿ ಇದು ಬಹಳ ಮುಖ್ಯ.

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಭಾನುವಾರ ದೌಸಾದಲ್ಲಿ ತಮ್ಮ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಪ್ರತಿಮೆಯನ್ನು ಗುರ್ಜರ್ ಹಾಸ್ಟೆಲ್‌ನಲ್ಲಿ ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಸಚಿನ್ ಪೈಲಟ್ ಭಾವುಕರಾದರು. 23 ವರ್ಷಗಳ ಹಿಂದೆ ಇದೇ ದಿನ ತಮ್ಮ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದರು. ಆ ದೃಶ್ಯ ಈಗಲೂ ನೆನಪಿದೆ ಎಂದು ಹೇಳಿದರು. ತಂದೆಯಿಂದ ರಾಜಕೀಯ ಕಲಿತಿದ್ದೇನೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

ಮತ್ತಷ್ಟು ಓದಿ: Rajasthan Politics: ರಾಜಸ್ಥಾನ ಕಾಂಗ್ರೆಸ್‌ ಆಂತರಿಕ ಕಲಹ: ಪಕ್ಷದಿಂದ ಹಾರಲು ಸಜ್ಜಾಗುತ್ತಿರುವ ಪೈಲಟ್‌

ಅನ್ಯಾಯದ ವಿರುದ್ಧ ಅವರು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಅವರಿಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳೇ ಪ್ರಧಾನವಾಗಿದ್ದವು. ಸಚಿನ್ ಪೈಲಟ್ ಅವರು ತಮ್ಮ ತಂದೆಯನ್ನು ಆದರ್ಶವಾಗಿ ಪರಿಗಣಿಸುತ್ತಾರೆ ಮತ್ತು ಅವರಂತೆ ಆತ್ಮಗೌರವ ಮತ್ತು ಆದರ್ಶಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ನನ್ನ ರಾಜಕೀಯ ಚಿಂತನೆ ಸ್ಪಷ್ಟವಾಗಿದೆ, ಆದರೆ ಭವಿಷ್ಯದಲ್ಲಿ ನಿರಾಶೆ ಇದೆ ಎಂದು ಹೇಳಿದರು. ಅದಕ್ಕೇ ಈಗ ಕೆಲಸ ಮಾಡಲು ಮನಸ್ಸಿಲ್ಲ. ರಾಜ್ಯದ ಜನತೆಗೆ ಖಂಡಿತ ನ್ಯಾಯ ಸಿಗುತ್ತದೆ, ಈ ಮೂಲಕ ಭ್ರಷ್ಟಾಚಾರ ಹಾಗೂ ಯುವಜನತೆಯ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ, ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ