ಉಚಿತ ಯೋಜನೆಗಳ ಖುಷಿಯಲ್ಲಿ ಕಳೆದು ಹೋಗಬೇಡಿ, ಪಂಜಾಬ್ನ ಸ್ಥಿತಿ ಒಮ್ಮೆ ನೋಡಿ
ಮಹತ್ವದ ನಿರ್ಧಾರ ಕೈಗೊಂಡಿರುವ ಪಂಜಾಬ್ನ ಆಮ್ ಆದ್ಮಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಹೆಚ್ಚಿಸಿದೆ.
ಮಹತ್ವದ ನಿರ್ಧಾರ ಕೈಗೊಂಡಿರುವ ಪಂಜಾಬ್ನ ಆಮ್ ಆದ್ಮಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಹೆಚ್ಚಿಸಿದೆ. ದೆಹಲಿಯಂತೆಯೇ ಉಚಿತ ಯೋಜನೆಗಳನ್ನು ಘೋಷಿಸಿದಾಗ ಪಂಜಾಬ್ ಜನರು ಕೂಡ ಖುಷಿಪಟ್ಟಿದ್ದರು. ಆದರೆ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಈಗ ಪಂಜಾಬ್ ಜನತೆ ಒಂದು ಲೀಟರ್ ಪೆಟ್ರೋಲ್‌ಗೆ ಹೆಚ್ಚು ಪಾವತಿಸಬೇಕಾಗುತ್ತದೆ. ಇದೇ ವೇಳೆ ಡೀಸೆಲ್ ಬೆಲೆಯೂ ಏರಿಕೆಯಾಗಿದೆ. ಈಗ ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 98.65 ರೂ. ಅದೇ ಸಮಯದಲ್ಲಿ, ಡೀಸೆಲ್ ಬೆಲೆ ಲೀಟರ್‌ಗೆ 88.95 ರೂ.ಗೆ ಏರಿದೆ. ಕೊರೊನಾ ಬಳಿಕ ಸಾಕಷ್ಟು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ, ಭಾರತದಲ್ಲೂ ಸಾಕಷ್ಟು ಕಂಪನಿಗಳು ಜಾಬ್ ಕಟಿಂಗ್ ಕೂಡ ಮಾಡುತ್ತಿವೆ. ಅದರ ಜತೆಗೆ ಉಚಿತ ಯೋಜನೆಗಳು ಹೊರೆಯಾಗುತ್ತಿವೆ.
ಇನ್ನೂ ಸಾಕಷ್ಟು ರಾಜ್ಯಗಳಲ್ಲಿ ತಾವು ಅಧಿಕಾರಕ್ಕೆ ಬರಬೇಕು ಎನ್ನುವ ಹಪಾಹಪಿಯಲ್ಲಿ ಮನಸ್ಸಿಗೆ ಬಂದಿರುವ ಉಚಿತ ಯೋಜನೆಗಳ ಘೋಷಣೆ ಮಾಡುತ್ತಿದ್ದು, ಮತ್ತೊಂದು ಕಡೆಯಿಂದ ಜನರು ಸಂಕಷ್ಟಕ್ಕೆ ಸಿಲುಕುವಂತಾಗುತ್ತಿದೆ.
ಪಂಜಾಬ್ನಲ್ಲಿ ಉಚಿತ ವಿದ್ಯುತ್ ಸೇರಿದಂತೆ ಚುನಾವಣಾ ಆಶ್ವಾಸನೆಗಳ ಈಡೇರಿಕೆಗೆ ಸರ್ಕಾರ ಹೆಣಗಾಡುತ್ತಿದ್ದು, ವರ್ಷದಲ್ಲಿ ಎರನೇ ಬಾರಿಗೆ ಪೆಟ್ರೋಲ್, ಡೀಸೆಲ್ ಮೇಲಿನ ಮೌಲ್ಯವರ್ದಿತ ತೆರಿಗೆ ಹೆಚ್ಚಳ ಮಾಡಿದೆ. ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 92 ಪೈಸೆ ಹಾಗೂ ಡೀಸೆಲ್ ದರದಲ್ಲಿ 88 ಪೈಸೆ ಏರಿಕೆಯಾಗಲಿದೆ.
ತಕ್ಷಣದಿಂದ ನೂತನ ದರ ಜಾರಿಗೆ ಬಂದಿದೆ. ಕಳೆದ ಫೆಬ್ರವರಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದ ತೆರಿಗೆಯನ್ನು ತಲಾ 90 ಪೈಸೆಯಷ್ಟು ಹೆಚ್ಚಳ ಮಾಡಲಾಗಿತ್ತು, ಸಿಎಂ ಭಗವಂತ್ ಮಾನ್ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಸರ್ಕಾರ ಜನವಿರೋದಿ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ. ಅಗತ್ಯ ಹಣಕಾಸು ಹಣಕಾಸು ಸಿದ್ಧತೆ ಇಲ್ಲದೆ ಉಚಿತ ಯೋಜನೆ ಮೂಲಕ ಸರ್ಕಾರವನ್ನು ದಿವಾಳಿಯೆಡೆಗೆ ತಳ್ಳುತ್ತಿದೆ ಎಂದು ಹೇಳಿದೆ.
ಕಳೆದ ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿರುವ ಸಂದರ್ಭದಲ್ಲಿ ಪಂಜಾಬ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 2022 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ನವದೆಹಲಿ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ ಇದರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪಂಜಾಬ್ ಸರ್ಕಾರ ಎಷ್ಟು ವ್ಯಾಟ್ ಹೆಚ್ಚಿಸಿದೆ? ಪೆಟ್ರೋಲ್ ವ್ಯಾಟ್ ದರವನ್ನು ಸುಮಾರು 1.8 ಶೇಕಡಾ ಹೆಚ್ಚಿಸಲಾಗಿದೆ. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 92 ಪೈಸೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಡೀಸೆಲ್ ವ್ಯಾಟ್ ದರವು ಶೇಕಡಾ 1.13 ರಷ್ಟು ಹೆಚ್ಚಾಗಿದೆ. ಇದರಲ್ಲಿ ಲೀಟರ್‌ಗೆ 90 ಪೈಸೆ ಹೆಚ್ಚಳವಾಗಿದೆ. ಏರಿಕೆಯಾದ ಬೆಲೆಗಳು ಮಧ್ಯರಾತ್ರಿ 12 ಗಂಟೆಯಿಂದಲೇ ಜಾರಿಗೆ ಬಂದಿದೆ. ಪೆಟ್ರೋಲ್ ವ್ಯಾಟ್ ದರವನ್ನು ಸುಮಾರು 1.8 ಶೇಕಡಾ ಹೆಚ್ಚಿಸಲಾಗಿದೆ.
ಮತ್ತಷ್ಟು ಓದಿ: ಸರ್ಕಾರ ರಚಿಸಿ 1 ತಿಂಗಳು ಪೂರ್ಣ; ಪಂಜಾಬ್ ಜನರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಮುಖ್ಯಮಂತ್ರಿ ಭಗವಂತ್ ಮಾನ್
ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 92 ಪೈಸೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಡೀಸೆಲ್ ವ್ಯಾಟ್ ದರವು ಶೇಕಡಾ 1.13 ರಷ್ಟು ಹೆಚ್ಚಾಗಿದೆ. ಇದರಲ್ಲಿ ಲೀಟರ್‌ಗೆ 90 ಪೈಸೆ ಹೆಚ್ಚಳವಾಗಿದೆ. ಏರಿಕೆಯಾದ ಬೆಲೆಗಳು ಮಧ್ಯರಾತ್ರಿ 12 ಗಂಟೆಯಿಂದಲೇ ಜಾರಿಗೆ ಬಂದಿದೆ.
ಈ ಹೆಚ್ಚಳದ ನಂತರ, ಮೊಹಾಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ 98.3 ರೂ ಬದಲಿಗೆ 98.95 ರೂ.ಗೆ ಲಭ್ಯವಾಗಲಿದೆ. ಆದರೆ ಡೀಸೆಲ್ 88.35 ರೂ.ಗೆ ಬದಲಾಗಿ 89.25 ರೂ.ಗೆ ಲಭ್ಯವಾಗಲಿದೆ.
ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಕೆಲವು ಮಾಧ್ಯಮ ವರದಿಗಳ ಪ್ರಕಾರ, ಮಾನ್ಸಾದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವ್ಯಾಟ್ ವಿಧಿಸಲು ಅನುಮೋದನೆ ನೀಡಲಾಗಿದೆ. ಆದರೆ, ಇದುವರೆಗೂ ಆಮ್ ಆದ್ಮಿ ಸರ್ಕಾರ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಎಎನ್‌ಐ ತನ್ನ ಟ್ವೀಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಮಾಹಿತಿ ನೀಡಿದೆ.
ಕರ್ನಾಟಕದಲ್ಲೂ ಕೂಡ 200 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಭತ್ಯೆ, ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ಹಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ಆದರೆ ಈ ಯೋಜನೆಗಳಿಂದ ಮುಂದೊಂದು ದಿನ ಪಂಜಾಬ್ನಂತೆಯೇ ಕರ್ನಾಟಕದ ಜನತೆ ಮೇಲೆ ಹೊರೆಯಾಗದಿರಲಿ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Mon, 12 June 23