ರಾಜಸ್ಥಾನ: ಕಾಂಗ್ರೆಸ್ ಸಭೆಗೆ ಮುನ್ನ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಬೆಂಬಲಿಗರ ನಡುವೆ ಹೊಡೆದಾಟ
ಈ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಪೈಲಟ್- ಗೆಹ್ಲೋಟ್ ನಡುವಿನ ಮುನಿಸು ಶಮನ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ರಾಜಸ್ಥಾನ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್(Sachin Pilot) ನಡುವಿನ ವೈಷಮ್ಯ ಗುರುವಾರ ಬಹಿರಂಗವಾಗಿ ಆಡಿದ್ದು, ಅವರ ಬೆಂಬಲಿಗರು ಅಜ್ಮೀರ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.ರಾಜಸ್ಥಾನದ ಕಾಂಗ್ರೆಸ್ ಸಹ-ಪ್ರಭಾರಿ ಅಮೃತಾ ಧವನ್ ಅವರು ಭಾಗವಹಿಸಲಿರುವ ಫೀಡ್ ಬ್ಯಾಕ್ ಸಭೆಗೆ ಮುಂಚಿತವಾಗಿ ಈ ಗಲಾಟೆ ನಡೆದಿದೆ. ಉಭಯ ನಾಯಕರ ಬೆಂಬಲಿಗರ ನಡುವಿನ ಘರ್ಷಣೆಯಿಂದಾಗಿ ಸಭೆಯನ್ನು ಮುಂದೂಡಲಾಯಿತು. ಸಭೆಯಲ್ಲಿ ಆಸನ ವ್ಯವಸ್ಥೆಗೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ವಾಗ್ವಾದ ನಡೆದು ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಠಾಣಾಧಿಕಾರಿ ಕರಣ್ ಸಿಂಗ್ ಹೇಳಿದರು. ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿದ್ದು ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಎರಡು ಗುಂಪುಗಳು ಘೋಷಣೆಗಳನ್ನು ಕೂಗಿ ಪರಸ್ಪರ ನಿಂದಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ವರ್ಷಾಂತ್ಯದಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಪೈಲಟ್- ಗೆಹ್ಲೋಟ್ ನಡುವಿನ ಮುನಿಸು ಶಮನ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
अजमेर में गहलोत और पायलट समर्थकों में झड़प। CM अशोक गहलोत और सचिन पायलट के समर्थकों में आपस में झड़प हो गई. दोनों के समर्थक एक-दूसरे पर लाठी-डंडे लेकर टूट पड़े, दोनों ओर से जमकर मारपीट हुई।#Rajasthan #Ajmer @SachinPilot @ashokgehlot51 pic.twitter.com/ecE4Kp0t4x
— TV9 Rajasthan (@TV9Rajasthan) May 18, 2023
ಇವರಿಬ್ಬರ ಜಗಳ ಶುರು ಆಗಿದ್ದು ಜುಲೈ 2020ರಲ್ಲಿ. ಪೈಲಟ್ ನೇತೃತ್ವದ 19 ಶಾಸಕರ ಗುಂಪು ಗೆಹ್ಲೋಟ್ ಅವರನ್ನು ಬದಲಿಸಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಎತ್ತಿತ್ತು. ಪರಿಸ್ಥಿತಿಯನ್ನು ರಕ್ಷಿಸುವ ಸಲುವಾಗಿ, ಪೈಲಟ್‌ನ ಕಳವಳಗಳನ್ನು ಪರಿಹರಿಸಲು ಕಾಂಗ್ರೆಸ್ ಮೂರು ಸದಸ್ಯರ ಸಮಿತಿಯನ್ನು ರಚಿಸಿತು. ನಂತರ ಪೈಲಟ್ ಅವರನ್ನು ಉಪಮುಖ್ಯಮಂತ್ರಿ ಮಾಡಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಯಿತು.
ಈ ಹಿಂದೆ ಗೆಹ್ಲೋಟ್ ಪೈಲಟ್‌ರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಇತ್ತ ಪೈಲಟ್ ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದ ಆರೋಪದ ಭ್ರಷ್ಟಾಚಾರದ ವಿರುದ್ಧ ತಮ್ಮದೇ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಒಂದು ದಿನದ ಉಪವಾಸ ಮತ್ತು ಪಾದಯಾತ್ರೆ ನಡೆಸಿದರು. ರಾಜಸ್ಥಾನ ಲೋಕಸೇವಾ ಆಯೋಗವನ್ನು ವಿಸರ್ಜಿಸುವ ಮತ್ತು ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆಯಿಂದ ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕೆಂಬ ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಆಂದೋಲನ ನಡೆಸುವುದಾಗಿ ಪೈಲಟ್ ಬೆದರಿಕೆ ಹಾಕಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ