ರಾಜಸ್ಥಾನದಲ್ಲಿ ಅತ್ಯಧಿಕ ಅತ್ಯಾಚಾರ ಪ್ರಕರಣ ದಾಖಲು, ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ: ಎನ್‌ಸಿಆರ್‌ಬಿ

ಮಧ್ಯಪ್ರದೇಶದಲ್ಲಿ ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ 3,259 ಆಗಿದ್ದು ಮಹಾರಾಷ್ಟ್ರದಲ್ಲಿ 2,785 ಮತ್ತು ಉತ್ತರ ಪ್ರದೇಶದಲ್ಲಿ 2,630 ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಹೇಳಿದೆ.

ರಾಜಸ್ಥಾನದಲ್ಲಿ ಅತ್ಯಧಿಕ ಅತ್ಯಾಚಾರ ಪ್ರಕರಣ ದಾಖಲು, ಎರಡನೇ  ಸ್ಥಾನದಲ್ಲಿ ಉತ್ತರ ಪ್ರದೇಶ: ಎನ್‌ಸಿಆರ್‌ಬಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 15, 2021 | 8:11 PM

ದೆಹಲಿ: ರಾಜಸ್ಥಾನವು ದೇಶದಲ್ಲಿ ಅತ್ಯಧಿಕ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದು, ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2020 ರ ಡೇಟಾ ಬಹಿರಂಗಪಡಿಸಿದೆ. ರಾಜಸ್ಥಾನದಲ್ಲಿ 5,310 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಉತ್ತರ ಪ್ರದೇಶ 2,769 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದಲ್ಲಿ 2,339 ಮತ್ತು ಮಹಾರಾಷ್ಟ್ರದಲ್ಲಿ 2,061 ಪ್ರಕರಣಗಳಿವೆ. ಆದಾಗ್ಯೂ, ರಾಜಸ್ಥಾನದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಸುಮಾರು ಶೇ 16ರಷ್ಟು ಕುಸಿತವನ್ನು ಕಂಡಿದೆ ಮತ್ತು 34,535 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮಹಿಳೆಯರ ವಿರುದ್ಧದ ಅಪರಾಧಗಳು ಉತ್ತರ ಪ್ರದೇಶದಲ್ಲಿ 49,385 ಮತ್ತು ಪಶ್ಚಿಮ ಬಂಗಾಳದಲ್ಲಿ 36,439 ಆಗಿದೆ ಎಂದು ಎನ್ ಸಿಆರ್ ಬಿ ಡೇಟಾ ಹೇಳಿದೆ. ಒಟ್ಟು ಅತ್ಯಾಚಾರ ಸಂತ್ರಸ್ತರಲ್ಲಿ 1,279 ಮಂದಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 4,031 ಮಂದಿ ವಯಸ್ಕರು ಆಗಿದ್ದಾರೆ.

ರಾಜ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿ ಕುಟುಂಬ ಸ್ನೇಹಿತರು, ನೆರೆಹೊರೆಯವರು, ಉದ್ಯೋಗಿ ಅಥವಾ ಇತರ ಪರಿಚಿತ ವ್ಯಕ್ತಿಗಳು ಎಂದು ಆರೋಪಿಸಲಾಗಿದೆ. ಪರಿಶಿಷ್ಟ ಜಾತಿಯ ಸದಸ್ಯರ ವಿರುದ್ಧದ ಅಪರಾಧಗಳೂ ರಾಜಸ್ಥಾನದಲ್ಲಿ ಹೆಚ್ಚಿದೆ. 2018 ರಲ್ಲಿ ರಾಜ್ಯವು 4,607 ಪ್ರಕರಣಗಳನ್ನು ದಾಖಲಿಸಿದೆ. ಇದು 2019 ರಲ್ಲಿ 6,794 ಮತ್ತು 2020 ರಲ್ಲಿ 7,017 ಕ್ಕೆ ಏರಿತು. ಅಪರಾಧ ದರವು ಶೇ 57.4 ಆಗಿದೆ.

ರವಿ ಪ್ರಕಾಶ್ ಮೆಹರ್ದಾ ಎಡಿಜಿ (ಅಪರಾಧ) ಅವರು ಉಚಿತ ನೋಂದಣಿಯು ಹೆಚ್ಚಿನ ಸಂಖ್ಯೆಯ ಪ್ರಕರಣಗಳಿಗೆ ಕಾರಣ ಎಂದು ಹೇಳಲಾಗಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಆದರೆ ತನಿಖೆಯ ನಂತರ ಸುಮಾರು ಶೇ 42ಸುಳ್ಳು ಆರೋಪಗಳು ಎಂದು ಸಾಬೀತಾಗುತ್ತದೆಅಥವಾ ಸಂತ್ರಸ್ತೆ ಮತ್ತು ಆರೋಪಿ ಒಪ್ಪಂದಕ್ಕೆ ಬರುತ್ತಾರೆ ಎಂದು ಅವರು ಹೇಳಿದರು.

ಎನ್‌ಸಿಆರ್‌ಬಿ ವರದಿಯು ಸಹ ಅಪರಾಧಗಳ ಹೆಚ್ಚಳ ಮತ್ತು ಅಪರಾಧಗಳ ದಾಖಲಾತಿಯ ಹೆಚ್ಚಳವು ಎರಡು ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿರುವುದಾಗಿ ಎಡಿಜಿ ಹೇಳಿದ್ದಾರೆ.

ಏತನ್ಮಧ್ಯೆ, ಬಿಜೆಪಿ ವಕ್ತಾರ ಮುಖೇಶ್ ಪರೀಕ್ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿಯವರು ಗೃಹ ಇಲಾಖೆಯ ಮುಖ್ಯಸ್ಥರಾಗಿದ್ದರೂ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದರು.

ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಅಪರಾಧಗಳು ಮಧ್ಯಪ್ರದೇಶದಲ್ಲಿ ಜಾಸ್ತಿ ಮಧ್ಯಪ್ರದೇಶದಲ್ಲಿ ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ 3,259 ಆಗಿದ್ದು ಮಹಾರಾಷ್ಟ್ರದಲ್ಲಿ 2,785 ಮತ್ತು ಉತ್ತರ ಪ್ರದೇಶದಲ್ಲಿ 2,630 ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಹೇಳಿದೆ.

ಎನ್‌ಸಿಆರ್‌ಬಿ ವರದಿಯ ಪ್ರಕಾರ, ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ ಪ್ರಕರಣಗಳು ಮಾತ್ರವಲ್ಲ, ಮಧ್ಯಪ್ರದೇಶದಲ್ಲಿ ಮಕ್ಕಳ ವಿರುದ್ಧದ 17,008 ಅಪರಾಧ ಪ್ರಕರಣಗಳನ್ನು ದಾಖಲಾಗಿದೆ. ಇದು ದೇಶದಲ್ಲಿಯೇ ಅತಿ ಹೆಚ್ಚು. ಅತಿಹೆಚ್ಚು ಭ್ರೂಣ ಹತ್ಯೆಯು 17 ಪ್ರಕರಣಗಳು ಮಧ್ಯಪ್ರದೇಶದಿಂದ ವರದಿಯಾಗಿದೆ ಮತ್ತು ರಾಜ್ಯವು ಅತಿಹೆಚ್ಚು ಬುಡಕಟ್ಟು ಮಹಿಳೆಯರ ಅತ್ಯಾಚಾರಗಳನ್ನು 339 ಪ್ರಕರಣಗಳೊಂದಿಗೆ ದಾಖಲಿಸಿದ್ದು, ಛತ್ತೀಸ್‌ಗಡ (195) ಮತ್ತು ಮಹಾರಾಷ್ಟ್ರ (129) ಪ್ರಕರಣಗಳು ದಾಖಲಾಗಿವೆ. 2020 ರ ಅಂಕಿಅಂಶಗಳು 2019 ಕ್ಕಿಂತ ಕೇವಲ ಶೇ1 ಕಡಿಮೆಯಾಗಿರುವುದು ಯಾವುದೇ ಸಮಾಧಾನವಲ್ಲ.

ಆದರೆ ರಾಜ್ಯದಲ್ಲಿ ವಯಸ್ಕರ ಮೇಲಿನ ಅತ್ಯಾಚಾರಗಳ ಸಂಖ್ಯೆ ಕಡಿಮೆಯಾಗಿದೆ. ಅಂತಹ 2,339 ಪ್ರಕರಣಗಳೊಂದಿಗೆ ಮಧ್ಯಪ್ರದೇಶ ರಾಜಸ್ಥಾನ -5310 ಮತ್ತು ಉತ್ತರ ಪ್ರದೇಶ -2769 ಗಿಂತ ಹಿಂದೆ ಇದ್ದರು.

ಪೊಲೀಸರ ಪ್ರಕಾರ, ಮಕ್ಕಳ ಮೇಲಿನ ಅತ್ಯಾಚಾರಗಳು ಮತ್ತು ಇತರ ಅಪರಾಧಗಳು ಸಂಬಂಧಿಕರು ಮತ್ತು ಪರಿಚಿತ ಜನರಿಂದ ನಡೆದಿವೆ. “ಮಕ್ಕಳು ತಮ್ಮ ಮನೆಗಳಲ್ಲಿ ಅಸುರಕ್ಷಿತರಾಗಿದ್ದಾರೆ. ಎನ್‌ಸಿಆರ್‌ಬಿ ಮಾಹಿತಿಯ ಪ್ರಕಾರ  3,189 ಅಪ್ರಾಪ್ತ ಮಕ್ಕಳನ್ನು ಪರಿಚಿತ ವ್ಯಕ್ತಿಗಳು ಅತ್ಯಾಚಾರ ಮಾಡಿದ್ದಾರೆ. ಇದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲ ಬದಲಾಗಿ ಸಾಮಾಜಿಕ ಸಮಸ್ಯೆಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮಹಿಳೆಯರ ವಿರುದ್ಧದ ಅಪರಾಧದ ಕುರಿತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಪ್ರಜ್ಞಾ ರಿಚಾ ಶ್ರೀವಾಸ್ತವ ಅವರು “ನಾವು ಕಾಣೆಯಾದ ಹುಡುಗಿಯರನ್ನು ಮರಳಿ ಪಡೆಯಲು ವಿವಿಧ ಅಭಿಯಾನಗಳನ್ನು ನಡೆಸುತ್ತಿದ್ದೇವೆ. ಕಾಣೆಯಾದ ಬಹುತೇಕ ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಮದುವೆಯ ನೆಪದಲ್ಲಿ ಪುರುಷರು ಬೇರೆಡೆಗೆ ಕರೆದೊಯ್ದರು, ಮತ್ತು ಅವರನ್ನು ರಕ್ಷಿಸಿದ ನಂತರ ನಾವು ಪುರುಷರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಪ್ರಕರಣಗಳ ಶೇ 100 ವರದಿಯಿಂದಾಗಿ ಈ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿಅಮೆರಿಕ ಸೇನಾ ಪಡೆಯನ್ನು ಅಫ್ಘಾನಿಸ್ತಾನದಿಂದ ಹೊರದಬ್ಬಿದ ಶ್ರೇಯಸ್ಸಿಗಾಗಿ ತಾಲಿಬಾನ್ ನಾಯಕರ ನಡುವೆ ಕಿತ್ತಾಟ

(Rajasthan recorded 5,310 rape cases Madhya Pradesh continued to report most cases of rape of minors NCRB data)