ಮಗ ತೀರಿದ ನಂತರ ಸೊಸೆಗೆ ಹೆಚ್ಚಿನ ಶಿಕ್ಷಣ ಕೊಡಿಸಿ ಉದ್ಯೋಗ ಸಿಕ್ಕಿದ ಮೇಲೆ ಪುನರ್ ವಿವಾಹ ಮಾಡಿಸಿದ ಅತ್ತೆ
ಆಕೆಯ ಕಾಳಜಿ , ಪ್ರೋತ್ಸಾಹದ ಪರಿಣಾಮ ಸೊಸೆ ಇತಿಹಾಸದಲ್ಲಿ ಗ್ರೇಡ್ 1 ಉಪನ್ಯಾಸಕರ ಪದವಿಗೆ ಅರ್ಹತೆ ಪಡೆದರು. ದೇವಿ ಸ್ವತಃ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿ.
ರಾಜಸ್ಥಾನ (Rajasthan) ರಾಜ್ಯದಾದ್ಯಂತ ವರದಕ್ಷಿಣೆ ಸಾವುಗಳು ಮತ್ತು ಬಾಲ್ಯವಿವಾಹಗಳ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವಾಗ, ರಾಜಸ್ಥಾನದ ಮಹಿಳೆಯೊಬ್ಬರು ತನ್ನ ಮಗನ ಸಾವಿನ ನಂತರ ತನ್ನ ಸೊಸೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಮಾದರಿಯಾಗಿದ್ದಾರೆ. ವರದಿಗಳ ಪ್ರಕಾರ ರಾಜಸ್ಥಾನದ ಫತೇಪುರ್ ಶೇಖಾವತಿಯಲ್ಲಿರುವ ಕಮಲಾ ದೇವಿ (KamalaDevi) ಎಂಬ ಮಹಿಳೆ ಸೊಸೆಯನ್ನು ಮಗಳಂತೆ ನೋಡಿಕೊಂಡು ಕಾಳಜಿ ವಹಿಸಿದ್ದಾರೆ. ಆಕೆಯ ಕಿರಿಯ ಮಗ ಶುಭಂ 2016 ರಲ್ಲಿ ವಿವಾಹವಾದ ಕೆಲವು ತಿಂಗಳ ನಂತರ ಬ್ರೈನ್ ಸ್ಟ್ರೋಕ್‌ನಿಂದ ಸಾವಿಗೀಡಾಗಿದ್ದ. ಆತ ಮಧ್ಯ ಏಷ್ಯಾದ ಕಿರ್ಗಿಸ್ತಾನ್‌ನಲ್ಲಿ ಎಂಬಿಬಿಎಸ್ ಪದವಿ ಪಡೆಯಲು ಹೋಗಿದ್ದು, ಅಲ್ಲಿ ಮೃತಪಟ್ಟಿದ್ದ. ಕಮಲಾ ದೇವಿಯು ಅದರ ನಂತರ ಸೊಸೆಯಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಂತೆ ಹೇಳಿದಳು. ಆಕೆಯ ಕಾಳಜಿ , ಪ್ರೋತ್ಸಾಹದ ಪರಿಣಾಮ ಸೊಸೆ ಇತಿಹಾಸದಲ್ಲಿ ಗ್ರೇಡ್ 1 ಉಪನ್ಯಾಸಕರ ಪದವಿಗೆ ಅರ್ಹತೆ ಪಡೆದರು. ದೇವಿ ಸ್ವತಃ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿ. ಸೊಸೆ ಸುನೀತಾ ಪ್ರಸ್ತುತ ಚುರು ಜಿಲ್ಲೆಯ ಸರ್ದಾರ್ ನಗರದ ನೈನಾಸರ್ ಸುಮೇರಿಯಾದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐದು ವರ್ಷಗಳ ನಂತರ ದೇವಿ ತನ್ನ ಸೊಸೆಯನ್ನು ಮುಖೇಶ್ ಎಂಬ ವ್ಯಕ್ತಿಗೆ ಮದುವೆ ಮಾಡಿಸಿಕೊಟ್ಟಿದ್ದು ಹಳ್ಳಿಯಲ್ಲಿ ಬಹಳ ಆಡಂಬರದಿಂದ ಈ ಮದುವೆ ನಡೆದಿತ್ತು ಎಂದು ಶಿ ದಿ ಪೀಪಲ್ ವರದಿ ಮಾಡಿದೆ.
ಸಂದರ್ಶನವೊಂದರಲ್ಲಿ ಕಮಲಾ ದೇವಿ ಅವರು ತಮ್ಮ ಮಗ ಶುಭಂ ಅವರು ಸುನೀತಾ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. ಅವರು ಹುಡುಗಿಯ ಬಗ್ಗೆ ಅವರಿಗೆ ತಿಳಿಸಿದಾಗ, ವಿಷಯವನ್ನು ಮುಂದುವರಿಸಲು ಕುಟುಂಬವು ಹುಡುಗಿಯ ಮನೆಗೆ ಹೋದರು. ಅವರ ಹಳ್ಳಿಯಲ್ಲಿ ಸಂಪ್ರದಾಯದಂತೆ ಹುಡುಗಿಯ ಕುಟುಂಬವು ಉತ್ತಮ ಆರ್ಥಿಕ ಸ್ಥಿತಿಯಲ್ಲಿರಲಿಲ್ಲ. ಆದರೂ ಅವರು ವರದಕ್ಷಿಣೆ ನೀಡಲು ಮುಂದಾದರು ಆದರೆ ದೇವಿ ನಿರಾಕರಿಸಿದರು ಎಂದು ವರದಿಯಾಗಿದೆ. ವಿಧಿಯು ದಂಪತಿಗಾಗಿ ಬೇರೆನೋ ಬರೆದಿತ್ತು ಎಂದು ಕಮಲಾದೇವಿ ಹೇಳಿದ್ದಾರೆ.
ಕಮಲಾ ದೇವಿಯು ಸುನೀತಾಳನ್ನು ತನ್ನ ಮಗನೆಂದು ಪರಿಗಣಿಸುತ್ತಾಳೆ ಮತ್ತು ದೇವಿಯ ಕುಟುಂಬಕ್ಕೆ ಮತ್ತು ಅವಳ ಹೆತ್ತವರಿಗೆ ಸಂತೋಷವನ್ನು ತಂದ ಹುಡುಗಿ ಮುಖೇಶನ ಮನೆಯಲ್ಲಿಯೂ ಸಂತೋಷವನ್ನು ಹರಡುತ್ತಾಳೆ ಎಂದಿದ್ದಾರೆ . ಶುಭಂ ಸಾವಿನ ನಂತರ ದೇವಿ ಸುನೀತಾಳನ್ನು ತನ್ನ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದುತ್ತು ಸುನೀತಾ ಕೂಡ ಅವಳಿಗೆ ವಿಧೇಯಳಾಗಿದ್ದಳು ಮತ್ತು ಅವಳು ಹೇಳಿದ್ದನ್ನೆಲ್ಲಾ ಅನುಸರಿಸುತ್ತಿದ್ದಳು ಎಂದು ಆಕೆಯ ಹಿರಿಯ ಮಗ ರಜತ್ ಬಂಗ್ವಾರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಹಿಂದೂ ರಾಷ್ಟ್ರವಾದ ಕುರಿತ ಒಲವು ಹೆಚ್ಚುತ್ತಿರುವುದು ಕಳವಳಕಾರಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ