ದಕ್ವಿಣ ಭಾರತದ ಖ್ಯಾತ ನಟ ರಜನಿಕಾಂತ್ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಪ್ರಶಸ್ತಿ ಪಡೆದ 51ನೇ ಚಲನಚಿತ್ರ ಕಲಾವಿದ ಎಂಬ ಹೆಗ್ಗಳಿಕೆಗೆ ರಜನಿಕಾಂತ್ ಪಾತ್ರರಾಗಿದ್ದಾರೆ. 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದಕ್ಷಿಣ ಭಾರತದ ಖ್ಯಾತ ನಟ, ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನೀಡಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ರಜನಿಕಾಂತ್ ಈ ಪ್ರಶಸ್ತಿ ಪಡೆದ 12 ನೇ ದಕ್ಷಿಣ ಭಾರತೀಯ ನಟರಾಗಿದ್ದಾರೆ. ಡಾ.ರಾಜ್‌ಕುಮಾರ್, ಅಕ್ಕಿನೇನಿ ನಾಗೇಶ್ವರ ರಾವ್, ಕೆ ಬಾಲಚಂದರ್ ಅವರಂತಹ ಲೆಜೆಂಡರಿ ನಟರಿಗೆ ಈ ಮೊದಲು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ದಕ್ಷಿಣ ಸೂಪರ್‌ಸ್ಟಾರ್‌ರನ್ನು ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ. “2021 ರ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ತಲೈವಾ ರಜನಿಕಾಂತ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ತಮಿಳು ಸೂಪರ್‌ಸ್ಟಾರ್ 1975 ರಲ್ಲಿ ಕೆ ಬಾಲಚಂದರ್ ಅವರ ಅಪೂರ್ವ ರಾಗಂಗಲ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದು, ಕಾಲಿವುಡ್‌ನಲ್ಲಿ 45 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಪೂರೈಸಿದ್ದಾರೆ. ರಜನಿಕಾಂತ್ ಕೊನೆಯ ಬಾರಿಗೆ ಎ.ಆರ್.ಮುರುಗದಾಸ್ ಅವರ ದರ್ಬಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ತಮ್ಮ ಮುಂಬರುವ ಚಿತ್ರ ಅನ್ನಾಥೆ ಚಿತ್ರದ ಚಿತ್ರೀಕರಣದಲ್ಲಿದ್ದಾರೆ.
51st Dadasaheb Phalke Award will be conferred upon actor Rajinikanth, says Union Minister Prakash Javadekar. pic.twitter.com/682c6qaUXV
— ANI (@ANI) April 1, 2021
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿನೆಮಾ ರಂಗದವರಿಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸ್ಥಾಪಿಸಿದ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ಇದನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಾರ್ಷಿಕವಾಗಿ ಪ್ರಸ್ತುತಪಡಿಸುತ್ತದೆ. ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಗೌರವಿಸಲಾಗುತ್ತದೆ. ಸ್ವೀಕರಿಸುವವರನ್ನು ಭಾರತೀಯ ಚಲನಚಿತ್ರ ಭ್ರಾತೃತ್ವದ ವಿಶಿಷ್ಟ ವ್ಯಕ್ತಿಗಳ ಸಮಿತಿಯು ಆಯ್ಕೆ ಮಾಡುತ್ತದೆ. ಜಾವಡೇಕರ್ ಅವರ ಟ್ವೀಟ್ ಪ್ರಕಾರ, ಈ ವರ್ಷದ ತೀರ್ಪುಗಾರರಾಗಿದವರೆಂದರೆ – ಗಾಯಕಿ ಆಶಾ ಭೋಸ್ಲೆ, ಚಲನಚಿತ್ರ ನಿರ್ಮಾಪಕ ಸುಭಾಷ್ ಘೈ, ನಟ ಮೋಹನ್ ಲಾಲ್, ಗಾಯಕ-ಸಂಯೋಜಕ ಶಂಕರ್ ಮಹಾದೇವನ್ ಮತ್ತು ಹಿರಿಯ ನಟ ಬಿಸ್ವಾಜೀತ್ ಚಟರ್ಜಿ.
Published On - 10:28 am, Thu, 1 April 21