Rajiv Gandhi Birth Anniversary 2022: ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ನಿಮಗೆಷ್ಟು ಗೊತ್ತು?
ಅಕ್ಟೋಬರ್ 31, 1984 ರಂದು ಅವರ ತಾಯಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ನಂತರ ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಿಯಾದಾಗ ಅವರ ವಯಸ್ಸು 40 ವರ್ಷ.
ರಾಜೀವ್ ಗಾಂಧಿ (Rajiv Gandhi)ಭಾರತದ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪ್ರಧಾನಿ ಸ್ಥಾನ ವಹಿಸಿಕೊಂಡವರು. ವಿವಿಧ ಸಮುದಾಯಗಳ ನಡುವೆ ರಾಷ್ಟ್ರೀಯ ಏಕೀಕರಣ ಮತ್ತು ಶಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ಸದ್ಭಾವನಾ ದಿವಸ್ (Sadbhavana Diwas) ಎಂದು ಗುರುತಿಸಲಾಗಿದೆ. ಅಕ್ಟೋಬರ್ 31, 1984 ರಂದು ಅವರ ತಾಯಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ನಂತರ ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಿಯಾದಾಗ ಅವರ ವಯಸ್ಸು 40 ವರ್ಷ. ಮುಂಬೈನಲ್ಲಿ(ಆಗ ಬಾಂಬೆ) ಜನಿಸಿದ ರಾಜೀವ್ ಗಾಂಧಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಮತ್ತು ಅವರ ಅಜ್ಜ ಜವಾಹರಲಾಲ್ ನೆಹರು ದೇಶದ ಮೊದಲ ಪ್ರಧಾನಿಯಾದಾಗ ಮೂರು ವರ್ಷ ವಯಸ್ಸಿನವರಾಗಿದ್ದರು. 1984 ರಲ್ಲಿ ತಮ್ಮ ತಾಯಿ ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಮತ್ತು ದೇಶದ ಆಡಳಿತ ನಡೆಸುವಂತೆ ಒತ್ತಾಯಿಸಲಾಯಿತು. ಅವರು ಸಾಂಪ್ರದಾಯಿಕ ಡೂನ್ ಶಾಲೆಗೆ ತೆರಳುವ ಮೊದಲು ಅವರು ಡೆಹ್ರಡೂನ್‌ನಲ್ಲಿರುವ ವೆಲ್‌ಹ್ಯಾಮ್ ಪ್ರೆಪ್‌ನಲ್ಲಿ ಅಧ್ಯಯನ ಮಾಡಿದರು. ಅವರು ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿಗೆ ಹೋಗಿ ಅಲ್ಲಿಂದ ಇಂಪೀರಿಯಲ್ ಕಾಲೇಜಿಗೆ (ಲಂಡನ್) ಸೇರಿದರು. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್‌ಗೆ ಸೇರಿಕೊಂಡರು. ಆದರೆ ಅವರು ಅದನ್ನು ಪೂರ್ಣಗೊಳಿಸಲಿಲ್ಲ.
ರಾಜೀವ್ ಗಾಂಧಿ ಬದುಕು
- ರಾಜೀವ್ ಗಾಂಧಿ ಅವರು ಸೋನಿಯಾ ಗಾಂಧಿ ಅವರನ್ನು ಕೇಂಬ್ರಿಡ್ಜ್‌ನಲ್ಲಿ ಭೇಟಿಯಾದರು. 1968 ರಲ್ಲಿ ಅವರು ವಿವಾಹವಾದರು .
- ರಾಜೀವ್ ಗಾಂಧಿಯವರು ಸಂಗೀತ – ಪಾಶ್ಚಾತ್ಯ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದರು.
- ಆರಂಭದಲ್ಲಿ ರಾಜೀವ್ ಗಾಂಧಿಗೆ ರಾಜಕೀಯ ಆಸಕ್ತಿ ಇರಲಿಲ್ಲ. ಅವರು ಪೈಲಟ್ ಆಗಿದ್ದರು. 1970 ರಲ್ಲಿ ಇಂಡಿಯನ್ ಏರ್ಲೈನ್ಸ್ ಸೇರಿದರು.
- ರಾಜೀವ್ ಗಾಂಧಿಯವರು 1980 ರಲ್ಲಿ ವಿಮಾನ ಅಪಘಾತದಲ್ಲಿ ತಮ್ಮ ಸಹೋದರ ಸಂಜಯ್ ಗಾಂಧಿಯವರನ್ನು ಕಳೆದುಕೊಂಡರು . ಮರಣದ ನಂತರ ರಾಜೀವ್, ರಾಜಕೀಯದಲ್ಲಿ ದೊಡ್ಡ ಪಾತ್ರವನ್ನು ವಹಿಸಬೇಕಾಯಿತು. ರಾಜೀವ್ ಗಾಂಧಿಯವರು ತಮ್ಮ ಸಹೋದರನ ಸ್ಥಾನವಾದ ಅಮೇಥಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು 1981 ರಲ್ಲಿ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದರು.
- ದೇಶದಿಂದ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯುವ ಭರವಸೆಯಿಂದಾಗಿ ರಾಜೀವ್ ಗಾಂಧಿ “ಮಿಸ್ಟರ್ ಕ್ಲೀನ್” ಎಂಬ ಬಿರುದನ್ನು ಪಡೆದರು.
- ರಾಜೀವ್ ಗಾಂಧಿ ಕೂಡ ವಾಹನ ಚಲಾಯಿಸಲು ಇಷ್ಟಪಡುತ್ತಿದ್ದರು. ತಮ್ಮ ಚುನಾವಣಾ ಪ್ರಚಾರ ಅಥವಾ ಇತರ ಪ್ರವಾಸಗಳಲ್ಲಿ ಆಗಾಗ್ಗೆ ವಾಹನ ಚಲಾಯಿಸುತ್ತಿದ್ದರು.
- ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಜೀವ್ ಗಾಂಧಿಯವರು 1985 ರಲ್ಲಿ ಪಕ್ಷಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದರು, ಅದರ ಪ್ರಕಾರ ಚುನಾಯಿತ ಸಂಸದರು ಮುಂದಿನ ಚುನಾವಣೆಯವರೆಗೆ ವಿರೋಧ ಪಕ್ಷವನ್ನು ಸೇರುವಂತಿಲ್ಲ.
- ರಾಜೀವ್ ಗಾಂಧಿ ಅವರು ಭಾರತದ ಐಟಿ ಕ್ರಾಂತಿಯನ್ನು ಸುಗಮಗೊಳಿಸಲು ದೊಡ್ಡ ಕ್ರಮಗಳನ್ನು ತೆಗೆದುಕೊಂಡ ವರ್ಚಸ್ವಿ ರಾಜಕಾರಣಿ ಎಂದು ನೆನಪಿಸಿಕೊಳ್ಳುತ್ತಾರೆ. 1991ರಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಆತ್ಮಾಹುತಿ ಬಾಂಬ್ ದಾಳಿಗೆ ರಾಜೀವ್ ಬಲಿಯಾದರು.