AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಸಭೆಯಲ್ಲಿ ಪಾಸಾಯ್ತು ಪೌರತ್ವ ಮಸೂದೆ

ದೆಹಲಿ: ವಿವಾದದ ಕಿಡಿ ಹೊತ್ತಿಸಿದ್ದ ಪೌರತ್ವ ತಿದ್ದುಪಡಿ ಸಂಸತ್​ನ ಉಭಯ ಸದನಗಳಲ್ಲಿ ಅಂಗೀಕಾರವಾಗ್ತಿದ್ದಂತೇ ಪರ, ವಿರೋಧದ ಚರ್ಚೆಗಳು ಕೂಡ ಜೋರಾಗಿವೆ. ನಿರಾಶ್ರಿತರು ಪೌರತ್ವ ಸಿಗುವ ಖುಷಿಯಲ್ಲಿದ್ರೆ, ಪ್ರತಿಭಟನೆಯ ಕಾವಿಗೆ ಈಶಾನ್ಯ ಭಾರತ ಬೆಂಕಿಯುಂಡೆಯಾಗಿದೆ. ಅಗ್ನಿಪರೀಕ್ಷೆಯಲ್ಲಿ ಪಾಸಾಯ್ತು ಪೌರತ್ವ ಮಸೂದೆ: ಪ್ರತಿಪಕ್ಷಗಳ ಪ್ರತಿರೋಧ, ಸದನದಲ್ಲಿ ತೀವ್ರ ಕೋಲಾಹಲ, ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶದ ಕಿಚ್ಚು ಹಚ್ಚಿದ್ದ ಪೌರತ್ವ ತಿದ್ದುಪಡಿ ಮಸೂದೆ ಸಂಸತ್​ನ ಮೇಲ್ಮನೆಯಾದ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ. ಮಸೂದೆ ಮೇಲೆ ಸುಮಾರು 7 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದು ವಿಧೇಯಕವನ್ನ […]

ರಾಜ್ಯಸಭೆಯಲ್ಲಿ ಪಾಸಾಯ್ತು ಪೌರತ್ವ ಮಸೂದೆ
Follow us
ಸಾಧು ಶ್ರೀನಾಥ್​
|

Updated on:Dec 12, 2019 | 6:40 AM

ದೆಹಲಿ: ವಿವಾದದ ಕಿಡಿ ಹೊತ್ತಿಸಿದ್ದ ಪೌರತ್ವ ತಿದ್ದುಪಡಿ ಸಂಸತ್​ನ ಉಭಯ ಸದನಗಳಲ್ಲಿ ಅಂಗೀಕಾರವಾಗ್ತಿದ್ದಂತೇ ಪರ, ವಿರೋಧದ ಚರ್ಚೆಗಳು ಕೂಡ ಜೋರಾಗಿವೆ. ನಿರಾಶ್ರಿತರು ಪೌರತ್ವ ಸಿಗುವ ಖುಷಿಯಲ್ಲಿದ್ರೆ, ಪ್ರತಿಭಟನೆಯ ಕಾವಿಗೆ ಈಶಾನ್ಯ ಭಾರತ ಬೆಂಕಿಯುಂಡೆಯಾಗಿದೆ.

ಅಗ್ನಿಪರೀಕ್ಷೆಯಲ್ಲಿ ಪಾಸಾಯ್ತು ಪೌರತ್ವ ಮಸೂದೆ: ಪ್ರತಿಪಕ್ಷಗಳ ಪ್ರತಿರೋಧ, ಸದನದಲ್ಲಿ ತೀವ್ರ ಕೋಲಾಹಲ, ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶದ ಕಿಚ್ಚು ಹಚ್ಚಿದ್ದ ಪೌರತ್ವ ತಿದ್ದುಪಡಿ ಮಸೂದೆ ಸಂಸತ್​ನ ಮೇಲ್ಮನೆಯಾದ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ. ಮಸೂದೆ ಮೇಲೆ ಸುಮಾರು 7 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದು ವಿಧೇಯಕವನ್ನ ಮತಕ್ಕೆ ಹಾಕಲಾಯ್ತು. ಈ ವೇಳೆ ಮಸೂದೆ ಪರವಾಗಿ 125 ಮತಗಳು ಬಿದ್ದು ವಿಧೇಯಕ ಪಾಸಾಯ್ತು.

ದೇಶದೆಲ್ಲೆಡೆ ಮುಸ್ಲಿಮೇತರ ನಿರಾಶ್ರಿತರ ಸಂಭ್ರಮ: ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗ್ತಿದ್ದಂತೆ ದೇಶದ ನಾನಾ ಭಾಗಗಳಲ್ಲಿ ನೆಲೆಸಿದ್ದ ನಿರಾಶ್ರಿತರ ಸಂಭ್ರಮ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿದ ಮುಸ್ಲಿಮೇತರ ನಿರಾಶ್ರಿತರು ಮೋದಿ ಪರ ಘೋಷಣೆಗಳನ್ನ ಕೂಗಿ ಸಂಭ್ರಮಿಸಿದ್ರು.

ಮಗುವಿಗೆ ‘ನಾಗರಿಕತ್ವ’ ಅಂತ ಹೆಸರಿಟ್ಟ ತಾಯಿ: ರಾಜ್ಯಸಭೆಯಲ್ಲಿ ಪಾಸಾದ ಮಸೂದೆಗೆ ಶೀಘ್ರದಲ್ಲೇ ರಾಷ್ಟ್ರಪತಿ ಅಂಕಿತ ಬಿದ್ದು ಕಾಯ್ದೆ ರೂಪ ಪಡೆಯಲಿದೆ. ಅದರಂತೆ 2014ರ ಡಿಸೆಂಬರ್​ 31ಕ್ಕೂ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ವಲಸೆ ಬಂದು ಭಾರತದಲ್ಲಿ ನೆಲೆಸಿದ ಮುಸ್ಲಿಮೇತರ ನಿರಾಶ್ರಿತರಿಗೆ ದೇಶದ ನಾಗರಿಕತ್ವ ಸಿಗಲಿದೆ. ಇದೇ ಖುಷಿಗೆ ಪಾಕಿಸ್ತಾನದಿಂದ ಬಂದು ದೆಹಲಿಯಲ್ಲಿ ನೆಲೆಸಿದ್ದ ಹಿಂದೂ ನಿರಾಶ್ರಿತೆಯೊಬ್ಬಳು ತನ್ನ 2 ದಿನದ ಮಗುವಿಗೆ ನಾಗರಿಕತ್ವ ಅಂತಾನೆ ಹೆಸರಿಟ್ಟಿದ್ದಾಳೆ.

ಮೈಲಿಗಲ್ಲು ಎಂದ ಮೋದಿ, ಕರಾಳ ದಿನವೆಂದ ಸೋನಿಯಾ: ಸಂಸತ್​ನಲ್ಲಿ ಮಸೂದೆ ಅಂಗೀಕಾರವಾದ ಬೆನ್ನಲ್ಲೇ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ಇದು ಭಾರತದ ಇತಿಹಾಸದಲ್ಲೇ ಮೈಲಿಗಲ್ಲು. ಇದರಿಂದ ಹಲವು ವರ್ಷಗಳಿಂದ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗಲಿದೆ ಎಂದಿದ್ದಾರೆ. ಅತ್ತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಇದು ಭಾರತದ ಇತಿಹಾಸದಲ್ಲಿ ಕರಾಳ ದಿನ ಅಂತ ಬಿಜೆಪಿ ವಿರುದ್ಧ ಬೆಂಕಿ ಉಗುಳಿದ್ದಾರೆ.

ಕೊತ ಕೊತ ಕುದಿಯುತ್ತಿದೆ ಈಶಾನ್ಯ ಭಾರತ: ಪೌರತ್ವ ತಿದ್ದುಪಡಿ ವಿಧೇಯಕ ವಿರುದ್ಧ ಇಡೀ ಈಶಾನ್ಯ ಭಾರತ ಹೊತ್ತಿ ಉರೀತಿದೆ. ಪ್ರತಿಭಟನೆಯ ಕಾವು ಜೋರಾಗಿದ್ದು, ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಹಲವೆಡೆ ಲಾಠಿ ಚಾರ್ಚ್​ ಕೂಡ ನಡೆದಿದೆ. ಅದ್ರಲ್ಲೂ ಅಸ್ಸಾಂನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಅನಿರ್ಧಿಷ್ಟಾವಧಿವರೆಗೆ ಕರ್ಫ್ಯೂ ಹೇರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸೇನೆಯನ್ನ ನಿಯೋಜಿಸಲಾಗಿದೆ. ಇನ್ನು ವಿಧೇಯಕದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಕೆಲ ಸಂಘಟನೆಗಳು ಮುಂದಾಗಿವೆ.

Published On - 6:39 am, Thu, 12 December 19

ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ