ಅಯೋಧ್ಯಾ ರಾಮ ಜನ್ಮಭೂಮಿಯನ್ನೂ ಮೆಕ್ಕಾ ಮಾದರಿಯಲ್ಲೇ ಅಭಿವೃದ್ಧಿಗೊಳಿಸಲಾಗುವುದು ಎಂದು ವಿಎಚ್ಪಿ ಮುಖ್ಯಸ್ಥ
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ಪಡೆಯಲು ಕಾರಣವಾಗಿದ್ದು ಈ ರಾಮಮಂದಿರ ಚಳವಳಿ ಎಂದು ವಿಎಚ್ಪಿ ನಾಯಕ ಸುರೇಂರ
ನಾಗ್ಪುರ: ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರವನ್ನೂ ಕೂಡ ವ್ಯಾಟಿಕನ್ ನಗರ ಮತ್ತು ಮೆಕ್ಕಾ ಮಾದರಿಯಲ್ಲೇ ಅಭಿವೃದ್ಧಿಗೊಳಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ (VHP) ಅಧ್ಯಕ್ಷ ರಬೀಂದ್ರ ನಾರಾಯಣ್ ಸಿಂಗ್ ಹೇಳಿದ್ದಾರೆ. ನಾಗ್ಪುರದಲ್ಲಿ ವಿಎಚ್ಪಿ ಕಾರ್ಯಕರ್ತರು ಮತ್ತು ಸಂತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಮ ಜನ್ಮಭೂಮಿ ಮತ್ತು ರಾಮಮಂದಿರಗಳು ಹಿಂದುತ್ವದ ಸಂಕೇತವಾಗಿದೆ ಎಂದು ಹೇಳಿದರು. ಇವರು ಉಲ್ಲೇಖಿಸಿದ ಮೆಕ್ಕಾ, ಇಸ್ಲಾಂ ಧರ್ಮೀಯರ ಪವಿತ್ರ ಸ್ಥಳವಾಗಿದ್ದು, ವ್ಯಾಟಿಕನ್ ನಗರವೆಂಬುದು ರೋಮನ್ ಕ್ಯಾಥೋಲಿಕ್ ಚರ್ಚ್ಗಳ ಪ್ರಧಾನ ಕಚೇರಿಯಾಗಿದೆ.
ಹಾಗೇ, ಇನ್ನೊಂದು ಸಮಾರಂಭದಲ್ಲಿ ಮಾತನಾಡಿದ್ದ ವಿಎಚ್ಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್, ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ಪಡೆಯಲು ಕಾರಣವಾಗಿದ್ದು ಈ ರಾಮಮಂದಿರ ಚಳವಳಿ. ದೇಶವನ್ನು ವಿಭಜಿಸಿದ್ದು ಜಾತ್ಯತೀತ ರಾಜಕಾರಣ ಎಂದು ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿಯವರ ವಿರುದ್ಧ ಹರಿಹಾಯ್ದ ಸುರೇಂದ್ರ ಜೈನ್, ಭಾರತದ ರಾಜಕಾರಣದಲ್ಲಿಯೇ ರಾಹುಲ್ ಗಾಂಧಿ ಅತ್ಯಂತ ಗೊಂದಲಮಯ ನಾಯಕ ಎಂದಿದ್ದಾರೆ. ಅವರು ಏನು ಮಾತನಾಡುತ್ತಾರೆ? ಯಾವ ಅರ್ಥದಲ್ಲಿ ಮಾತಾಡುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯವರು ಇತ್ತೀಚೆಗಷ್ಟೇ ಜೈಪುರಕ್ಕೆ ಭೇಟಿ ನೀಡಿದ್ದಾಗ, ಈ ದೇಶ ಹಿಂದುಗಳದ್ದು ಹೊರತಾಗಿ ಹಿಂದುತ್ವವಾದಿಗಳದ್ದಲ್ಲ ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸುರೇಂದ್ರ ಜೈನ್ ಹೀಗೆ ತಿರುಗೇಟು ನೀಡಿದ್ದಾರೆ.
ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಒಂದೆಡೆ ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದರೆ, ಇನ್ನೊಂದೆಡೆ ಇಂದು ವಾರಾಣಸಿಯಲ್ಲಿ ಪ್ರಧಾನಿ ಮೋದಿಯವರು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಲಿದ್ದಾರೆ. ವಾಸ್ತುಶಿಲ್ಪಿ ಭೀಮಲ್ ಪಟೇಲ್ ಅವರಿಂದ ಕಾರಿಡಾರ್ ವಿನ್ಯಾಸ ಮಾಡಲಾಗಿದೆ. ಈ ಕಾರಿಡಾರ್ನಿಂದ ಯಾವುದೇ ಅಡೆತಡೆ ಇಲ್ಲದೆ ವಿಶ್ವನಾಥನ ದರ್ಶನ ಪಡೆಯೋದಕ್ಕೆ ಸಾಧ್ಯವಾಗಲಿದೆ. ಕಾಶಿ ದೇಗುಲ ಹಾಗೂ ಗಂಗಾ ನದಿಯ ನಡುವಿನ ಸಂಚಾರದ ಅವಧಿ ಈ ಕಾರಿಡಾರ್ನಿಂದ ಕಡಿತವಾಲಿದೆ. ಕಾರಿಡಾರ್ ಭಾಗದಲ್ಲಿ 10 ಸಾವಿರ ಜನ ಧ್ಯಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನು 7,000 ಚದರ ಮೀಟರ್ ವೇದಿಕೆ, 7 ಭವ್ಯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಫುಡ್ ಕೋರ್ಟ್, ವೈದಿಕ ಸೇರಿದಂತೆ ಆಧ್ಯಾತ್ಮಿಕ ಗ್ರಂಥಾಲಯವನ್ನ ಸ್ಥಾಪಿಸಲಾಗಿದೆ.
ಇದನ್ನೂ ಓದಿ: Miss Universe 2021: ಭುವನ ಸುಂದರಿಯಾಗಿ ಹೊರಹೊಮ್ಮಿದ ಭಾರತದ ಹರ್ನಾಜ್ ಸಂಧು
Published On - 9:50 am, Mon, 13 December 21