ರಾಮಸೇತು ನಿರ್ಮಾಣವಾದ ರಾಮೇಶ್ವರಂನಲ್ಲಿ ಶ್ರೀರಾಮನ ಪಾದದ ಗುರುತುಗಳಿಗೆ ಮೋದಿ ಪೂಜೆ

ಪ್ರಧಾನಿ ನರೇಂದ್ರ ಮೋದಿ(Narendra Modi) ರಾಮಸೇತು ನಿರ್ಮಾಣವಾದ ರಾಮೇಶ್ವರಂಗೆ ತೆರಳಿ ಶ್ರೀರಾಮನ ಪಾದದ ಗುರುತುಗಳಿಗೆ ಪೂಜೆ ಸಲ್ಲಿಸಿದ್ದಾರೆ. ಲಂಕಾದವರೆಗೆ ರಾಮಸೇತು ನಿರ್ಮಾಣ ಪ್ರಾರಂಭವಾದ ಸ್ಥಳವೇ ಅರಿಚಲ್ ಮುನೈ ಎಂದು ನಂಬಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮಿಳುನಾಡಿಗೆ ಆಗಮಿಸಿದ್ದರು. ಅಲ್ಲಿ ಶನಿವಾರ ತಿರುಚಿರಾಪಳ್ಳಿಯ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ರಾಮಸೇತು ನಿರ್ಮಾಣವಾದ ರಾಮೇಶ್ವರಂನಲ್ಲಿ ಶ್ರೀರಾಮನ ಪಾದದ ಗುರುತುಗಳಿಗೆ ಮೋದಿ ಪೂಜೆ
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on:Jan 21, 2024 | 11:01 AM

ಪ್ರಧಾನಿ ನರೇಂದ್ರ ಮೋದಿ(Narendra Modi) ರಾಮಸೇತು ನಿರ್ಮಾಣವಾದ ರಾಮೇಶ್ವರಂಗೆ ತೆರಳಿ ಶ್ರೀರಾಮನ ಪಾದದ ಗುರುತುಗಳಿಗೆ ಪೂಜೆ ಸಲ್ಲಿಸಿದ್ದಾರೆ. ಲಂಕಾದವರೆಗೆ ರಾಮಸೇತು ನಿರ್ಮಾಣ ಪ್ರಾರಂಭವಾದ ಸ್ಥಳವೇ ಅರಿಚಲ್ ಮುನೈ ಎಂದು ನಂಬಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮಿಳುನಾಡಿಗೆ ಆಗಮಿಸಿದ್ದರು. ಅಲ್ಲಿ ಶನಿವಾರ ತಿರುಚಿರಾಪಳ್ಳಿಯ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ಮಧ್ಯಾಹ್ನ ರಾಮೇಶ್ವರಂನಲ್ಲಿ ರೋಡ್ ಶೋ ನಡೆಸಿದರು. ಇದಾದ ಬಳಿಕ ರಾಮೇಶ್ವರಂನ ಅಗ್ನಿತೀರ್ಥಂ ಬೀಚ್‌ಗೆ ತೆರಳಿದ ಪ್ರಧಾನಿ ಶ್ರೀ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿದರು. ಪ್ರಧಾನಿ ಮೋದಿ ರಾಮಾಯಣ ಪಠಣ ಮತ್ತು ಭಜನೆ ಸಂಜೆಯಲ್ಲಿ ಭಾಗವಹಿಸಿದರು.

ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಾಲಯ ಮತ್ತು ರಾಮೇಶ್ವರದ ರಾಮನಾಥಸ್ವಾಮಿ ದೇವಾಲಯವು ಶ್ರೀರಾಮನ ಜೀವನದೊಂದಿಗೆ ಸಂಬಂಧವನ್ನು ಹೊಂದಿದೆ. ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಶ್ರೀರಾಮನಿಗೆ ಸಂಬಂಧಿಸಿದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಇಂದು ರಾಮೇಶ್ವರದ ದಡದಲ್ಲಿ ನಡೆಯುವ ಪೂಜೆ ಕೂಡ ಅದೇ ಆಚರಣೆಯ ಭಾಗವಾಗಿದೆ.

ಮತ್ತಷ್ಟು ಓದಿ: In Pics: ತಮಿಳುನಾಡಿನ ಶ್ರೀರಂಗಂ, ರಾಮೇಶ್ವರಂ ದೇವಾಲಯಗಳಲ್ಲಿ ಮೋದಿ ಪ್ರಾರ್ಥನೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ, ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆಯು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಉಪವಾಸ ಸೇರಿದಂತೆ ವ್ರತ ಆಚರಿಸುತ್ತಿದ್ದಾರೆ. ತಮಿಳುನಾಡಿನ ಧನುಷ್ಕೋಟಿಯಲ್ಲಿರುವ ಈ ದೇವಾಲಯದಲ್ಲಿ ರಾವಣನ ಸಹೋದರ ವಿಭೀಷಣ ಮೊದಲು ರಾಮನನ್ನು ಭೇಟಿಯಾಗಿ ಆಶ್ರಯ ಕೇಳಿದ್ದ ಎಂದು ಹೇಳಲಾಗುತ್ತದೆ.

ಶ್ರೀರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಎಂದು ಕೂಡ ಹೇಳಲಾಗುತ್ತದೆ. 48 ಕಿ.ಮೀ ಉದ್ದದ ರಾಮಸೇತುವನ್ನು ಸುಣ್ಣದ ಕಲ್ಲುಗಳಿಂದ ನಿರ್ಮಿಸಲಾಗಿದ್ದು, ಇದು ತಮಿಳುನಾಡಿನ ಆಗ್ನೇಯ ಕರಾವಳಿಯಿಂದ ರಾಮೇಶ್ವರಂನ ಮನ್ನಾರ್ ದ್ವೀಪವನ್ನು ಸಂಪರ್ಕಿಸುತ್ತದೆ.

ರಾಮಾಯಣದಲ್ಲಿರುವ ಅನೇಕ ಹಿಂದೂ ಇತಿಹಾಸಕಾರರು ಮತ್ತು ಉಲ್ಲೇಖಗಳ ಪ್ರಕಾರ ರಾಮನ ಅನುಯಾಯಿಗಳು ರಾವಣನ ಸೆರೆಯಿಂದ ತನ್ನ ಪತ್ನಿ ಸೀತಾದೇವಿಯನ್ನು ರಕ್ಷಿಸಲು ಲಂಕೆಗೆ ತೆರಳುತ್ತಿದ್ದಾಗ ಈ ಸೇತುವೆಯನ್ನು ನಿರ್ಮಿಸಲಾಯಿತು ಎಂದು ಹೇಳುತ್ತಾರೆ. ರಾಮಸೇತು ಸೇತುವೆ ಭಾರತ ಹಾಗೂ ಶ್ರೀಲಂಕಾ ನಡುವೆ ಕಳೆದ 100,000ವರ್ಷಗಳಿಂದ ಸಮುದ್ರ ಮಟ್ಟ ಕಡಿಮೆಯಾದ ಸಮಯದಲ್ಲಿ ಭೂ ಸಂಪರ್ಕವನ್ನು ನೀಡಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:59 am, Sun, 21 January 24