Ram Navami 2024: ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ರಾಮನವಮಿ ವಿಶೇಷ ಪೂಜೆಗಳ ಬಗ್ಗೆ ಮಾಹಿತಿ ಹಂಚಿಕೊಂಡ ಗೋಪಾಲ್​ ಜಿ

ಅಯೋಧ್ಯೆಯಲ್ಲಿ ಇತ್ತೀಚೆಗಷ್ಟೇ ನೂತನ ರಾಮ ಮಂದಿರ ನಿರ್ಮಾಣಗೊಂಡು ಉದ್ಘಾಟನೆಯೂ ನೆರವೇರಿದೆ. ಈ ನೂತನ ರಾಮ ಮಂದಿರದಲ್ಲಿ ಮೊದಲ ಬಾರಿಗೆ ರಾಮನವಮಿ ಕಾರ್ಯಕ್ರಮಗಳು ಜರುಗಲಿವೆ. ಏಪ್ರಿಲ್​ 17ರಂದು ನಡೆಯಲಿರುವ ವಿಶೇಷ ಪೂಜೆ, ಕಾರ್ಯಕ್ರಮಗಳ ಕುರಿತು ವಿಶ್ವಹಿಂದೂ ಪರಿಷತ್​ನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್​ ಜಿ ನೀಡಿರುವ ಮಾಹಿತಿ ಇಲ್ಲಿದೆ.

Ram Navami 2024: ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿರುವ ರಾಮನವಮಿ ವಿಶೇಷ ಪೂಜೆಗಳ ಬಗ್ಗೆ ಮಾಹಿತಿ ಹಂಚಿಕೊಂಡ ಗೋಪಾಲ್​ ಜಿ
ಗೋಪಾಲ್​ ಜಿ
Follow us
ನಯನಾ ರಾಜೀವ್
|

Updated on: Apr 16, 2024 | 10:14 AM

ಅಯೋಧ್ಯೆ(Ayodhya)ಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರ(Ram Mandir)ದಲ್ಲಿ ಈ ವರ್ಷ ಮೊದಲ ರಾಮನವಮಿ ಕಾರ್ಯಕ್ರಮಗಳು ಜರುಗಲಿವೆ. ಈ ಕುರಿತು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಹಾಗೂ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ಉಸ್ತುವಾರಿವಹಿಸಿಕೊಂಡಿರುವ ಗೋಪಾಲ್​ ಜಿ ಮಾಹಿತಿ ನೀಡಿದ್ದಾರೆ.

ಶ್ರೀರಾಮನ ಹೊಸ ಮಂದಿರದಲ್ಲಿ ಮೊದಲ ರಾಮ ನವಮಿ ಉತ್ಸವ ನಡೆಯುತ್ತಿದೆ, ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ವತಿಯಿಂದ ಅನೇಕ ವ್ಯವಸ್ಥೆ ಮಾಡಲಾಗಿದೆ. ಬರುವಂತಹ ಭಕ್ತಾದಿಗಳಿಗೆ ಸರಿಯಾದ ವ್ಯಸವ್ಥೆ, ಬಿಸಿಲ ಝಳ ತಾಕಬಾರದೆಂದು ಜರ್ಮನ್ ಹ್ಯಾಂಗರ್ ವ್ತವಸ್ಥೆ, ನೆರಳಿನ ವ್ಯವಸ್ಥೆ, ನೀರು, ಶೌಚಾಲಯ, ಚಪ್ಪಲಿ ಹಾಗೂ ಇತರೆ ಸಾಮಾನುಗಳನ್ನು ಇರಿಸಲು ಸರಿಯಾದ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಮನವಮಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಏಪ್ರಿಲ್​ 17ರಂದು ರಾಮನವಮಿ ಕಾರ್ಯಕ್ರಮವು ಬೆಳಗಿನ ಜಾವ ರಾಮನನ್ನು ಎಬ್ಬಿಸುವ ಮಂಗಲ ಆರತಿಯಿಂದ ಶುರುವಾಗುತ್ತದೆ. ಬಳಿಕ ಬಾಲ ರಾಮನಿಗೆ ಪಂಚಾಮೃತ ಅಭಿಷೇಕ ಹಾಗೂ ಶೃಂಗಾರ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆಯಲಿದೆ. 6 ಗಂಟೆಗೆ ಮೊದಲ ಶೃಂಗಾರ ಆರತಿ ನಡೆಯಲಿದ್ದು ದೂರದರ್ಶನದಲ್ಲಿ ನೇರಪ್ರಸಾರವನ್ನು ನೀವು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದಾಗಿದೆ.

ಮತ್ತಷ್ಟು ಓದಿ: Ram Navami 2024: ರಾಮ ಮನುಷ್ಯ ರೂಪದಲ್ಲಿ ಭೂಮಿಗೆ ಬಂದ ದಿನ ರಾಮನವಮಿ, ಇದರ ಇತಿಹಾಸ, ಮಹತ್ವ ಇಲ್ಲಿದೆ

ನಿತ್ಯವೂ ರಾಮ ಮಂದಿರದಲ್ಲಿ ರಾಮಾಯಣ, ವಾಲ್ಮೀಕಿ ರಾಮಾಯಣದ ಪಾಠ, ರಾಮಚರಿತ ಪಾಠ ನಡೆಯುತ್ತಿದೆ. ಪ್ರತಿನಿತ್ಯ ಸಂಜೆ ರಾಮನ ಗಾಯನ ಮಾಡುತ್ತಿದ್ದೇವೆ, 17ರಂದು ಮಧ್ಯಾಹ್ನ 12 ಗಂಟೆಗೆ ರಾಮನ ಪ್ರಕಟೋತ್ಸವ, ಅದಕ್ಕೂ ಮುನ್ನ ಬೆಳಗ್ಗೆ 11 ಗಂಟೆಗೆ ಮೊದಲಿದ್ದಂತ ಉತ್ಸವ ಮೂರ್ತಿ ರಾಮ, ಲಕ್ಷ್ಮಣ, ಭರತ ಶತ್ರುಘ್ನ ಅಭಿಶೇಷ ನಡೆಯಲಿದೆ.

12 ಗಂಟೆಗೆ ಸರಿಯಾಗಿ ಆರತಿ ಮೂಲಕ ಪ್ರಕಟೋತ್ಸವ ನಡೆಯಲಿದೆ, ರಾಮ ಸೂರ್ಯವಂಶಿಯಾದ್ದರಿಂದ ರಾಮನ ಹಣೆಯನ್ನು ಪ್ರಕಾಶಿಸುವ ಸೂರ್ಯ ತಿಲಕ ಪ್ರಯೋಗ ಯಶಸ್ವಿ ಈಗಾಗಲೇ ಯಶಸ್ವಿಯಾಗಿದ್ದು, ಮೂರು ನಿಮಿಷಗಳ ಸೂರ್ಯ ತಿಲಕದಿಂದ ರಾಮನ ಹಣೆಯನ್ನು ಪ್ರಕಾಶಿತಗೊಳಿಸುವುದನ್ನು ನೀವು ಕಣ್ತುಂಬಿಕೊಳ್ಳಬಹುದು. ಪ್ರತಿಯೊಬ್ಬ ಭಕ್ತರೂ ರಾಮನನ್ನು ಅಲ್ಲಿಗೆ ಬಂದಾದರೂ ಅಥವಾ ಮನೆಯಲ್ಲೇ ಇದ್ದುಕೊಂಡು ರಾಮನ ಆಶೀರ್ವಾದಕ್ಕೆ ಪ್ರಾಪ್ತರಾಗಿ ಎಂದು ಗೋಪಾಲ್​ ಜಿ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್