Ram Navami 2024: ರಾಮನವಮಿ: ಅಯೋಧ್ಯೆಯ ರಾಮ ಮಂದಿರದಲ್ಲಿ ವಿಐಪಿ ದರ್ಶನ ನಿಷೇಧ

ರಾಮನವಮಿ ಹಿನ್ನೆಲೆಯಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಟ್ರಸ್ಟ್​ ವಿಶೇಷ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಪ್ರಕಾರ ನಾಲ್ಕು ದಿನಗಳ ಕಾಲ ವಿಐಪಿ ದರ್ಶನವನ್ನು ರದ್ದುಗೊಳಿಸಲಾಗಿದೆ. ನವರಾತ್ರಿಯ ನಾಲ್ಕು ದಿನಗಳ ಕಾಲ ವಿಐಪಿ ದರ್ಶನವನ್ನು ಏಪ್ರಿಲ್ 15 ರಿಂದ 18 ರವರೆಗೆ ನಿಷೇಧಿಸಲಾಗಿದೆ.

Ram Navami 2024: ರಾಮನವಮಿ: ಅಯೋಧ್ಯೆಯ ರಾಮ ಮಂದಿರದಲ್ಲಿ ವಿಐಪಿ ದರ್ಶನ ನಿಷೇಧ
ರಾಮಲಲ್ಲಾImage Credit source: Mint
Follow us
ನಯನಾ ರಾಜೀವ್
|

Updated on: Apr 15, 2024 | 10:26 AM

ರಾಮನವಮಿ(Ram Navami) ಪ್ರಯುಕ್ತ ಶ್ರೀರಾಮ ಮಂದಿರ ಟ್ರಸ್ಟ್​ ವಿಶೇಷ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ನವರಾತ್ರಿಯ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಅಯೋಧ್ಯೆಯ ರಾಮಮಂದಿರ(Ram Mandir)ದಲ್ಲಿ ವಿಐಪಿ ದರ್ಶನವನ್ನು ನಿಷೇಧಿಸಲಾಗಿದೆ. ಅಧಿಸೂಚನೆಯ ಪ್ರಕಾರ,  ಏಪ್ರಿಲ್ 15 ರಿಂದ 18 ರವರೆಗೆ ನವರಾತ್ರಿಯ ನಾಲ್ಕು ದಿನಗಳ ಕಾಲ ವಿಐಪಿ ದರ್ಶನವನ್ನು  ನಿಷೇಧಿಸಲಾಗಿದೆ.

ಅಯೋಧ್ಯೆಯ ರಾಮಮಂದಿರದಲ್ಲಿ ರಾಮನವಮಿಯ ಸಂದರ್ಭದಲ್ಲಿ ದರ್ಶನಕ್ಕೆ ವಿಐಪಿ ಪಾಸ್‌ಗಳಿಗೆ ನಿಷೇಧ ಹೇರಲಾಗಿದೆ. ಟ್ರಸ್ಟ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಏಪ್ರಿಲ್ 15 ರಿಂದ ಏಪ್ರಿಲ್ 18 ರವರೆಗೆ ಆರತಿಗಾಗಿ ಭಕ್ತರಿಗೆ ಅನುಕೂಲಕರ ದರ್ಶನ ಅಥವಾ ವಿಐಪಿ ಪಾಸ್‌ಗಳು ಲಭ್ಯವಿರುವುದಿಲ್ಲ.

ಇದರರ್ಥ ರಾಮ ನವಮಿಯಂದು ಸಾಮಾನ್ಯ ಮತ್ತು ವಿಶೇಷ ಭಕ್ತರ ದರ್ಶನದ ವ್ಯವಸ್ಥೆಯನ್ನು ಒಂದೇ ರೀತಿ ಇರಿಸಲಾಗಿದೆ. ಶ್ರೀರಾಮನು ಈ ನಾಲ್ಕು ದಿನಗಳಲ್ಲಿ ಎಲ್ಲಾ ಭಕ್ತರಿಗೆ ಒಂದೇ ರೀತಿಯ ದರ್ಶನವನ್ನು ನೀಡುತ್ತಾನೆ, ಯಾರಿಗೂ ವಿಶೇಷ ಉಪಚಾರವಿಲ್ಲ.

ಮತ್ತಷ್ಟು ಓದಿ: 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ; ಅಯೋಧ್ಯಾ ರಾಮನಿಗೆ ಸಮರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

ರಾಮನವಮಿಯಂದು ಭಕ್ತರು ಮೊಬೈಲ್​ಗಳನ್ನು ತರಬೇಡಿ ಎಂದು ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಜನರಿಗೆ ಮನವಿ ಮಾಡಿದ್ದಾರೆ. ರಾಮನ ದರ್ಶನಕ್ಕಾಗಿ ನೀಡಲಾಗಿದ್ದ ಹಿಂದಿನ ಪಾಸ್‌ಗಳನ್ನು ರಾಮಮಂದಿರ ಟ್ರಸ್ಟ್ ರದ್ದುಗೊಳಿಸಿದೆ ಎಂದು ರಾಮ ಜನ್ಮಭೂಮಿಯಿಂದ ತಿಳಿಸಲಾಗಿದೆ. ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಮ ಮಂದಿರವನ್ನು ಜನವರಿ 22ರಂದು ಉದ್ಘಾಟಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ