Ram Mandir Inauguration: ರಾಮ ಮಂದಿರ ಪ್ರಾಣ ಪ್ರತಿಷ್ಠೆ: ಜನವರಿ 22 ರಂದು ಈ ರಾಜ್ಯಗಳಲ್ಲಿ ರಜೆ ಘೋಷಣೆ

|

Updated on: Jan 18, 2024 | 7:49 AM

ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರ(Ram Mandir)ದ ಪ್ರಾಣ ಪ್ರತಿಷ್ಠೆ ಜನವರಿ 22 ರಂದು ನಡೆಯಲಿದ್ದು, ಹಲವು ರಾಜ್ಯಗಳು ರಜೆ ಘೋಷಣೆ ಮಾಡಿವೆ. ಜನವರಿ 22 ರಂದು ರಾಮ ಲಲ್ಲಾ  ಪ್ರಾಣ ಪ್ರತಿಷ್ಠೆಯ ಪ್ರಾಥಮಿಕ ಧಾರ್ಮಿಕ ವಿಧಿಗಳನ್ನು ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡವು ನಡೆಸುತ್ತದೆ

Ram Mandir Inauguration: ರಾಮ ಮಂದಿರ ಪ್ರಾಣ ಪ್ರತಿಷ್ಠೆ: ಜನವರಿ 22 ರಂದು ಈ ರಾಜ್ಯಗಳಲ್ಲಿ ರಜೆ ಘೋಷಣೆ
ರಾಮ ಮಂದಿರ
Image Credit source: The Print
Follow us on

ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರ(Ram Mandir)ದ ಪ್ರಾಣ ಪ್ರತಿಷ್ಠೆ ಜನವರಿ 22 ರಂದು ನಡೆಯಲಿದ್ದು, ಹಲವು ರಾಜ್ಯಗಳು ರಜೆ ಘೋಷಣೆ ಮಾಡಿವೆ. ಜನವರಿ 22 ರಂದು ರಾಮ ಲಲ್ಲಾ  ಪ್ರಾಣ ಪ್ರತಿಷ್ಠೆಯ ಪ್ರಾಥಮಿಕ ಧಾರ್ಮಿಕ ವಿಧಿಗಳನ್ನು ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡವು ನಡೆಸುತ್ತದೆ.

ಅತಿಥಿಗಳಿಗೆ ಸ್ಮರಣಿಕೆಯಾಗಿ ದೇವಾಲಯದಿಂದ ಮಣ್ಣನ್ನು ನೀಡಲಾಗುತ್ತದೆ. ದೈವಿಕ ಅನುಗ್ರಹವನ್ನು ಸಂಕೇತಿಸುವ ಈ ಪವಿತ್ರ ಉಡುಗೊರೆಯನ್ನು ಮನೆ ತೋಟಗಳಲ್ಲಿ ಅಥವಾ ಹೂವಿನ ಕುಂಡಗಳಲ್ಲಿ ಬಳಸಬಹುದು, ಆಧ್ಯಾತ್ಮಿಕ ವಾತಾವರಣವನ್ನು ಹೆಚ್ಚಿಸುತ್ತದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದವರೂ ಭವಿಷ್ಯದಲ್ಲಿ ಈ ಅರ್ಥಪೂರ್ಣ ಉಡುಗೊರೆಯನ್ನು ಪಡೆಯಬಹುದು.

ಜನವರಿ 22 ಅನ್ನು ಸಾರ್ವಜನಿಕ ರಜಾದಿನವೆಂದು ಅಧಿಕೃತವಾಗಿ ಘೋಷಿಸಿದ ರಾಜ್ಯಗಳು ಇಲ್ಲಿವೆ.

ಉತ್ತರ ಪ್ರದೇಶ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದಂತೆ ಜನವರಿ 22 ರಂದು ಉತ್ತರ ಪ್ರದೇಶದ ಶಿಕ್ಷಣ ಸಂಸ್ಥೆಗಳು ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದ ದೃಷ್ಟಿಯಿಂದ ಮುಚ್ಚಿರುತ್ತವೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಹೆಚ್ಚುವರಿಯಾಗಿ, ಅಂದು ರಾಜ್ಯದಾದ್ಯಂತ ಮದ್ಯದಂಗಡಿಗಳನ್ನು ಕೂಡ ಮುಚ್ಚಲಾಗುವುದು.

ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಈಗಲೇ ಏಕೆ? ಕಾರಣ ಕೊಟ್ಟ ಪೇಜಾವರ ಶ್ರೀ

ಮಧ್ಯಪ್ರದೇಶ
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಜನವರಿ 22 ರಂದು ಶಾಲಾ ರಜೆ ಎಂದು ಘೋಷಿಸಿದ್ದಾರೆ, ಜನರು ಈ ದಿನವನ್ನು ಹಬ್ಬದಂತೆ ಆಚರಿಸಲು ಪ್ರೋತ್ಸಾಹಿಸಿದ್ದಾರೆ. ಯಾದವ್ ಅವರು ಜನವರಿ 22 ರಂದು ರಾಜ್ಯದಲ್ಲಿ ಡ್ರೈ ಡೇ ಘೋಷಿಸಿದ್ದಾರೆ, ಮದ್ಯ ಮತ್ತು ಭಾಂಗ್ ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.

ಗೋವಾ
ಲೈವ್ ಮಿಂಟ್ ವರದಿಯ ಪ್ರಕಾರ ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದ ಹಿನ್ನೆಲೆಯಲ್ಲಿ ಗೋವಾ ಸರ್ಕಾರವು ಜನವರಿ 22 ರಂದು ಸರ್ಕಾರಿ ನೌಕರರು ಮತ್ತು ಶಾಲೆಗಳಿಗೆ ರಜೆ ಘೋಷಿಸಿದೆ.
ಶಾಲೆಗಳೊಂದಿಗೆ ಸರ್ಕಾರಿ ನೌಕರರಿಗೆ ಮಾತ್ರ ಸಾರ್ವಜನಿಕ ರಜೆ ಇರುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಛತ್ತೀಸ್‌ಗಢ
ಅಯೋಧ್ಯೆಯ ರಾಮಮಂದಿರದಲ್ಲಿ ನೂತನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಆಚರಿಸಲು ಛತ್ತೀಸ್‌ಗಢ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಜನವರಿ 22 ರಂದು ರಜೆ ಘೋಷಿಸಿದೆ. ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಹರ್ಯಾಣ
ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹರ್ಯಾಣ ಸರ್ಕಾರ ಜನವರಿ 22 ರಂದು ಶಾಲೆಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಅಲ್ಲದೆ, ಮಹಾಮಸ್ತಕಾಭಿಷೇಕದ ದಿನದಂದು ರಾಜ್ಯದಲ್ಲಿ ಎಲ್ಲಿಯೂ ಮದ್ಯ ಸೇವನೆಯನ್ನು ಅನುಮತಿಸಲಾಗುವುದಿಲ್ಲ ಎಂದು ಕೂಡ ತಿಳಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ