ಮುಂಬೈ ಆಸ್ಪತ್ರೆಯ ಐಸಿಯುನಲ್ಲಿ ರತನ್ ಟಾಟಾ, ಆರೋಗ್ಯ ಸ್ಥಿತಿ ಗಂಭೀರ: ವರದಿ

|

Updated on: Oct 09, 2024 | 8:47 PM

86 ವರ್ಷ ವಯಸ್ಸಿನ ಕೈಗಾರಿಕೋದ್ಯಮಿ ಈ ವಾರದ ಆರಂಭದಲ್ಲಿ ಸಾರ್ವಜನಿಕರಿಗೆ ಅವರ ಆಸ್ಪತ್ರೆಯ ವಾಸ್ತವ್ಯವು ಅವರ ವಯಸ್ಸು ಮತ್ತು ಸಂಬಂಧಿತ ಆರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಾಡಿಕೆಯ ವೈದ್ಯಕೀಯ ತಪಾಸಣೆಯ ಭಾಗವಾಗಿದೆ ಎಂದು ಭರವಸೆ ನೀಡಿದ್ದರು

ಮುಂಬೈ ಆಸ್ಪತ್ರೆಯ ಐಸಿಯುನಲ್ಲಿ ರತನ್ ಟಾಟಾ, ಆರೋಗ್ಯ ಸ್ಥಿತಿ ಗಂಭೀರ: ವರದಿ
ರತನ್ ಟಾಟಾ
Follow us on

ಮುಂಬೈ ಅಕ್ಟೋಬರ್ 09: ಟಾಟಾ ಸನ್ಸ್‌ನ (Tata Sons) ಅಧ್ಯಕ್ಷ ರತನ್ ಟಾಟಾ (Ratan Tata) ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಮುಂಬೈ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಿಟರ್ಸ್ ಬುಧವಾರ ವರದಿ ಮಾಡಿದೆ. 86 ವರ್ಷ ವಯಸ್ಸಿನ ಕೈಗಾರಿಕೋದ್ಯಮಿ ಈ ವಾರದ ಆರಂಭದಲ್ಲಿ ಸಾರ್ವಜನಿಕರಿಗೆ ಅವರ ಆಸ್ಪತ್ರೆಯ ವಾಸ್ತವ್ಯವು ಅವರ ವಯಸ್ಸು ಮತ್ತು ಸಂಬಂಧಿತ ಆರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಾಡಿಕೆಯ ವೈದ್ಯಕೀಯ ತಪಾಸಣೆಯ ಭಾಗವಾಗಿದೆ ಎಂದು ಭರವಸೆ ನೀಡಿದ್ದರು. ಆದಾಗ್ಯೂ, ಅವರ ಸ್ಥಿತಿಯು ಹದಗೆಟ್ಟಿದ್ದರಿಂದ ಆತಂಕಗಳು ಉಲ್ಬಣಗೊಂಡಿವೆ.

ಸೋಮವಾರ, ಟಾಟಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿ, ಅವರ ಆರೋಗ್ಯದ ಬಗ್ಗೆ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಪೋಸ್ಟ್‌ನಲ್ಲಿ, ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸೂಚಿಸುವ ವರದಿಗಳನ್ನು ನಿರಾಕರಿಸಿದ್ದು “ಚಿಂತಿಸಬೇಡಿ, ನಾನು ಚೆನ್ನಾಗಿದ್ದೇನೆ” ಎಂದು ಹೇಳಿದ್ದಾರೆ.

ರತನ್ ಟಾಟಾ ಭಾರತೀಯ ಉದ್ಯಮದಲ್ಲಿ ಅಪ್ರತಿಮ ವ್ಯಕ್ತಿ. ಅವರು 1991 ರಲ್ಲಿ ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದು 2012 ರವರೆಗೆ ಟಾಟಾ ಗ್ರೂಪನ್ನು ಮುನ್ನಡೆಸಿದರು. ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್ ಜಾಗತಿಕವಾಗಿ ವಿಸ್ತರಿಸಿತು, ಟೆಟ್ಲಿ, ಕೋರಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ ಪ್ರಮುಖ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿತು. ಬಹುಮಟ್ಟಿಗೆ ದೇಶೀಯ ಸಂಸ್ಥೆಯಿಂದ ಜಾಗತಿಕ ಶಕ್ತಿಶಾಲಿಯಾಗಿ ಟಾಟಾ ಬೆಳೆಯಿತು.

ಟಾಟಾದ ನಾಯಕತ್ವದಲ್ಲಿ, ಸಮೂಹವು ವಿಶ್ವದ ಅತ್ಯಂತ ಅಗ್ಗದ ಕಾರು ಟಾಟಾ ನ್ಯಾನೊವನ್ನು ಬಿಡುಗಡೆ ಮಾಡಿತು ಮತ್ತು ಅದರ ಸಾಫ್ಟ್‌ವೇರ್ ಸೇವೆಗಳ ವಿಭಾಗವಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಅನ್ನು ಜಾಗತಿಕ ಐಟಿ ಲೀಡರ್ ಆಗಿ ಮಾಡಿತು.

ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಏಕಾಂಗಿ ಸ್ಪರ್ಧೆ

ಟಾಟಾ 2012 ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಆದರೆ ನಂತರ ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್ ಮತ್ತು ಟಾಟಾ ಸ್ಟೀಲ್ ಸೇರಿದಂತೆ ಇತರ ಸಮೂಹ ಕಂಪನಿಗಳ ಗೌರವಾನ್ವಿತ ಅಧ್ಯಕ್ಷರಾಗಿ ಆಗಿ ನೇಮಕಗೊಂಡರು. ನಾಯಕತ್ವದ ವಿವಾದದ ಸಂದರ್ಭದಲ್ಲಿ ಅವರು 2016 ರಲ್ಲಿ ಅವರು ಅಲ್ಪಾವಧಿ ಅಧ್ಯಕ್ಷ ಸ್ಥಾನ ವಹಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:46 pm, Wed, 9 October 24