PM CARES Fund ರತನ್ ಟಾಟಾ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟಿ, ಸಲಹಾ ಮಂಡಳಿಯಲ್ಲಿ ಸುಧಾಮೂರ್ತಿ
ದೇಶಕ್ಕೆ ನಿರ್ಣಾಯಕ ಸಮಯದಲ್ಲಿ ನಿಧಿಯು ನಿರ್ವಹಿಸಿದ ಪಾತ್ರವನ್ನು ಟ್ರಸ್ಟಿಗಳು ಶ್ಲಾಘಿಸಿದರು. ಪಿಎಂ ಕೇರ್ಸ್ ನಿಧಿಗೆ ತುಂಬು ಹೃದಯದಿಂದ ಕೊಡುಗೆ ನೀಡಿದ್ದಕ್ಕಾಗಿ ದೇಶದ ಜನರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ದೆಹಲಿ: ಪಿಎಂ ಕೇರ್ಸ್ ನಿಧಿಗೆ (PM CARES Fund) ಕೊಡುಗೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಜನರನ್ನು ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಅವರು ಮಂಗಳವಾರ ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟಿಗಳ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತುರ್ತು ಮತ್ತು ಸಂಕಷ್ಟದ ಪರಿಸ್ಥಿತಿಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಈ ಉಪಕ್ರಮವು ದೊಡ್ಡ ದೃಷ್ಟಿಕೋನವನ್ನು ಹೊಂದಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ 4,345 ಮಕ್ಕಳನ್ನು ಬೆಂಬಲಿಸುವ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆ ಸೇರಿದಂತೆ ಪಿಎಂ ಕೇರ್ಸ್ ನಿಧಿಯ ಸಹಾಯದಿಂದ ಕೈಗೊಂಡ ವಿವಿಧ ಉಪಕ್ರಮಗಳ ಕುರಿತು ಪ್ರಸ್ತುತಿ ಮಾಡಲಾಯಿತು ಎಂದು ಪ್ರಧಾನಮಂತ್ರಿ ಕಾರ್ಯಾಲಯ (PMO) ಹೊರಡಿಸಿದ ಹೇಳಿಕೆ ತಿಳಿಸಿದೆ. ದೇಶಕ್ಕೆ ನಿರ್ಣಾಯಕ ಸಮಯದಲ್ಲಿ ನಿಧಿಯು ನಿರ್ವಹಿಸಿದ ಪಾತ್ರವನ್ನು ಟ್ರಸ್ಟಿಗಳು ಶ್ಲಾಘಿಸಿದರು. ಪಿಎಂ ಕೇರ್ಸ್ ನಿಧಿಗೆ ತುಂಬು ಹೃದಯದಿಂದ ಕೊಡುಗೆ ನೀಡಿದ್ದಕ್ಕಾಗಿ ದೇಶದ ಜನರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಪಿಎಂ ಕೇರ್ಸ್ ತುರ್ತು ಮತ್ತು ಸಂಕಷ್ಟದ ಸಂದರ್ಭಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ದೊಡ್ಡ ದೃಷ್ಟಿಯನ್ನು ಹೊಂದಿದೆ ಎಂದ ಮೋದಿ, ಪಿಎಂ ಕೇರ್ಸ್ ಫಂಡ್‌ನ ಅವಿಭಾಜ್ಯ ಅಂಗವಾಗಲು ಟ್ರಸ್ಟಿಗಳನ್ನು ಸ್ವಾಗತಿಸಿದರು. ಸಭೆಯಲ್ಲಿ ಪಿಎಂ ಕೇರ್ಸ್ ಫಂಡ್ ಟ್ರಸ್ಟಿಗಳಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿದ್ದರು. PM CARES ನಿಧಿಯ ಹೊಸದಾಗಿ ನಾಮನಿರ್ದೇಶನಗೊಂಡ ಟ್ರಸ್ಟಿಗಳಾದ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶರಾದ ಕೆ ಟಿ ಥಾಮಸ್; ಮಾಜಿ ಡೆಪ್ಯುಟಿ ಸ್ಪೀಕರ್ ಕರಿಯಾ ಮುಂಡಾ ಮತ್ತು ಎಮೆರಿಟಸ್, ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಪಿಎಂ ಕೇರ್ಸ್ ಫಂಡ್‌ಗೆ ಸಲಹಾ ಮಂಡಳಿಗೆ ಪ್ರಖ್ಯಾತ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲು ಟ್ರಸ್ಟ್ ನಿರ್ಧರಿಸಿದೆ. ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ರಾಜೀವ್ ಮಹಿರ್ಷಿ, , ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಸುಧಾಮೂರ್ತಿ, ಟೀಚ್ ಫಾರ್ ಇಂಡಿಯಾದ ಸಹ-ಸಂಸ್ಥಾಪಕ ಮತ್ತು ಇಂಡಿಕಾರ್ಪ್ಸ್ ಮತ್ತು ಪಿರಮಲ್ ಫೌಂಡೇಶನ್‌ನ ಮಾಜಿ ಸಿಇಒ ಆನಂದ್ ಶಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಹೊಸ ಟ್ರಸ್ಟಿಗಳು ಮತ್ತು ಸಲಹೆಗಾರರ ಭಾಗವಹಿಸುವಿಕೆಯು ಪಿಎಂ ಕೇರ್ಸ್ ಫಂಡ್‌ನ ಕಾರ್ಯಚಟುವಟಿಕೆಗೆ ವ್ಯಾಪಕ ದೃಷ್ಟಿಕೋನಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಾರ್ವಜನಿಕ ಜೀವನದ ಅವರ ಅಪಾರ ಅನುಭವವು ವಿವಿಧ ಸಾರ್ವಜನಿಕ ಅಗತ್ಯಗಳಿಗೆ ನಿಧಿಯನ್ನು ಹೆಚ್ಚು ಸ್ಪಂದಿಸುವಂತೆ ಮಾಡುವಲ್ಲಿ ಮತ್ತಷ್ಟು ಉತ್ಸಾಹ ನೀಡುತ್ತದೆ ಎಂದು ಅವರು ಹೇಳಿದರು.
Published On - 4:17 pm, Wed, 21 September 22