ಬಿಹಾರ, ಜೂ.6: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂ.7 ಅಥವಾ 8ರಂದು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ, ಎನ್ಡಿಎ ಒಕ್ಕೂಟದ ಮೂಲಕ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಈಗಾಗಲೇ ರಾಷ್ಟ್ರಪತಿಗಳಿಗೆ ಮೋದಿ ನೇತೃತ್ವದ ಸರ್ಕಾರ ರಚನೆ ಮಾಡುವ ಬಗ್ಗೆ ಹಕ್ಕು ಮಂಡನೆ ಮಾಡಿದೆ. ಎನ್ಡಿಎ ಸರ್ಕಾರ ರಚನೆಗೆ ನೀತಿಶ್ ಕುಮಾರ್ ಮತ್ತು ಚಂದ್ರ ಬಾಬು ನಾಯ್ಡು ಅವರು ಕೂಡ ಬೆಂಬಲ ನೀಡಿದ್ದಾರೆ. ಮೋದಿ ಸರ್ಕಾರ ರಚನೆ ಮಾಡಲು ಇವರ ಬೆಂಬಲ ಅಗತ್ಯವು ಕೂಡ ಆಗಿತ್ತು. ಇದೀಗ ಇದರ ನಡುವೆ ಜೆಡಿಯು ನಾಯಕರೊಬ್ಬರು ಒಂದು ಅಪಸ್ವರವನ್ನು ಎತ್ತಿದೆ. ಹೌದು 2022ರಲ್ಲಿ ಮೋದಿ ಸರ್ಕಾರ ಪರಿಚಯ ಮಾಡಿದ ಅಗ್ನಿವೀರ್ ಯೋಜನೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ಜೆಡಿಯು ಪಕ್ಷದ ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ.
ಅಗ್ನಿಪಥ ಯೋಜನೆ ವಿರುದ್ಧ ಅಸಮಾಧಾನವಿದ್ದು, ಚುನಾವಣೆ ಸಂದರ್ಭದಲ್ಲಿ ಅದು ಗೊತ್ತಾಗಿದೆ. ಹಾಗಾಗಿ ಅಗ್ನಿಪಥ ಯೋಜನೆ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ. ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಅದರ ಪರಿಣಾಮ ಚುನಾವಣೆಯಲ್ಲೂ ಕಂಡುಬಂದಿದೆ ಎಂದು ಹೇಳಿದ್ದಾರೆ. ಅಗ್ನಿಪಥ್ ಯೋಜನೆ ಪರಿಚಯಿಸಿದಾಗ, ಸಶಸ್ತ್ರ ಪಡೆಗಳ ವರ್ಗದಲ್ಲಿ ಈ ಬಗ್ಗೆ ಅಸಮಾಧಾನವಿತ್ತು.
ಇನ್ನು ಅಗ್ನಿವೀರ್ಗೆ ನೇಮಕವಾದ ಸೈನಿಕರ ಕುಟುಂಬದವರು ಚುನಾವಣೆ ಸಮಯದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಆದ್ದರಿಂದ, ಈ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದರು. ಯುವಕರನ್ನು ಸಶಸ್ತ್ರ ಪಡೆಗಳತ್ತ ಒಲವು ಮೂಡಿಸಲು ಹಾಗೂ ರಕ್ಷಣಾ ಪಿಂಚಣಿ ಬಿಲ್ನ್ನು ಕಡಿಮೆ ಮಾಡಲು ಕೇಂದ್ರವು 2022 ರಲ್ಲಿ ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿತು.
ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ವಿಶ್ವ ನಾಯಕರಿಗೆ ಆಹ್ವಾನ, ಈ ಇಬ್ಬರು ಬರುವುದು ಪಕ್ಕಾ
ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಮೇಲೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಒಟ್ಟು ವಾರ್ಷಿಕ ನೇಮಕಾತಿಗಳಲ್ಲಿ, 25% ಮಾತ್ರ ಶಾಶ್ವತ ಆಯೋಗದ ಅಡಿಯಲ್ಲಿ ಇನ್ನೂ 15 ವರ್ಷಗಳವರೆಗೆ ಮುಂದುವರೆಯಲು ಅನುಮತಿಸಲಾಗಿದೆ. ಈ ಯೋಜನೆಯ ವಿರುದ್ಧ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ