Rekha Gupta Takes Oath: ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ರೇಖಾ ಗುಪ್ತಾ

|

Updated on: Feb 20, 2025 | 2:13 PM

Rekha Gupta: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಆರು ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಪ್ರವೇಶ್ ವರ್ಮಾ, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದ್ರ ಇಂದ್ರರಾಜ್, ಕಪಿಲ್ ಮಿಶ್ರಾ, ಆಶಿಶ್ ಸೂದ್ ಮತ್ತು ಪಂಕಜ್ ಸಿಂಗ್ ಅವರ ಹೆಸರುಗಳು ಸೇರಿವೆ. ಪ್ರವೇಶ್ ವರ್ಮಾ ಅವರು ನವದೆಹಲಿ ಕ್ಷೇತ್ರದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದಾರೆ.

Rekha Gupta Takes Oath: ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ರೇಖಾ ಗುಪ್ತಾ
ರೇಖಾ ಗುಪ್ತಾ
Follow us on

ನವದೆಹಲಿ, ಫೆಬ್ರವರಿ 20: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಆರು ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪರ್ವೇಶ್ ವರ್ಮಾ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಪರ್ವೇಶ್ ವರ್ಮಾ, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದ್ರ ಇಂದ್ರರಾಜ್, ಕಪಿಲ್ ಮಿಶ್ರಾ, ಆಶಿಶ್ ಸೂದ್ ಮತ್ತು ಪಂಕಜ್ ಸಿಂಗ್ ಅವರ ಹೆಸರುಗಳು ಸೇರಿವೆ. ಪರ್ವೇಶ್ ವರ್ಮಾ ಅವರು ನವದೆಹಲಿ ಕ್ಷೇತ್ರದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದಾರೆ.

ಕಪಿಲ್ ಮಿಶ್ರಾ ಕರವಾಲ್ ನಗರದಿಂದ ಶಾಸಕರಾಗಿದ್ದಾರೆ. ಮಂಜಿಂದರ್ ಸಿಂಗ್ ಸಿರ್ಸಾ ರಾಜೌರಿ ಗಾರ್ಡನ್ ಕ್ಷೇತ್ರದ ಶಾಸಕರು. ಆಶಿಶ್ ಸೂದ್ ಜನಕ್‌ಪುರಿಯ ಶಾಸಕರು. ಪಂಕಜ್ ಸಿಂಗ್ ವಿಕಾಸಪುರಿಯ ಶಾಸಕರು. ರವೀಂದ್ರ ಇಂದ್ರರಾಜ್ ಬವಾನದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಪರ್ವೇಶ್ ವರ್ಮಾ ಜಾಟ್ ಸಮುದಾಯಕ್ಕೆ ಸೇರಿದವರು. ಸಿರ್ಸಾ ಬಿಜೆಪಿಯ ದೊಡ್ಡ ಸಿಖ್ ಮುಖ ಎಂದು ಪ್ರಸಿದ್ಧವಾಗಿದೆ. ರವೀಂದ್ರ ಇಂದ್ರರಾಜ್ ಬಿಜೆಪಿಯ ದಲಿತ ಮುಖ. ಕಪಿಲ್ ಮಿಶ್ರಾ ಬ್ರಾಹ್ಮಣ ಮುಖವಾಗಿದ್ದು, ಆಮ್ ಆದ್ಮಿ ಪಕ್ಷದಿಂದ ಬಿಜೆಪಿಗೆ ಸೇರಿದ್ದರು. ಆಶಿಶ್ ಸೂದ್ ಪಕ್ಷದ ಹಿರಿಯ ನಾಯಕ ಮತ್ತು ಪಂಜಾಬಿ ಮುಖ. ಪ್ರಸ್ತುತ ಅವರು ಗೋವಾದ ಉಸ್ತುವಾರಿ ಮತ್ತು ಜಮ್ಮು ಮತ್ತು ಕಾಶ್ಮೀರದ ಸಹ-ಉಸ್ತುವಾರಿಯಾಗಿದ್ದಾರೆ. ಪಂಕಜ್ ಸಿಂಗ್ ಪೂರ್ವ ಪ್ರದೇಶದ ಮುಖ.

ಮತ್ತಷ್ಟು ಓದಿ: Rekha Gupta: ಮೊದಲ ಪ್ರಯತ್ನದಲ್ಲೇ ಖುಲಾಯಿಸಿದ ಅದೃಷ್ಟ; ದೆಹಲಿ ಸಿಎಂ ರೇಖಾ ಗುಪ್ತಾ ಹಿನ್ನೆಲೆಯೇನು?

ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆಯಲ್ಲಿ ಪರ್ವೇಶ್ ವರ್ಮಾ, ಸಿರ್ಸಾ, ರವೀಂದ್ರ ಇಂದ್ರರಾಜ್ ಮತ್ತು ಆಶಿಶ್ ಸೂದ್ ಎಂಬ ಮೂವರು ನಾಯಕರ ಹೆಸರುಗಳು ಮಾತ್ರ ಕೇಳಿಬರುತ್ತಿದ್ದವು. ಆದರೆ ಅಂತಿಮವಾಗಿ ಶಾಲಿಮಾರ್ ಬಾಗ್‌ನ ಶಾಸಕಿ ರೇಖಾ ಗುಪ್ತಾ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ರೇಖಾ ಗುಪ್ತಾ ಅವರು ಪಕ್ಷದ ಶಾಸಕರೊಂದಿಗೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಶಾಸಕರ ಬೆಂಬಲ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹಸ್ತಾಂತರಿಸಲಾಯಿತು, ನಂತರ ಅವರು ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದರು. ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಏಕನಾಥ್ ಶಿಂದೆ, ಚಂದ್ರಬಾಬು ನಾಯ್ಡು, ರಾಜನಾಥ್ ಸಿಂಗ್ ಸೇರಿ ಹಲವರು ಪಾಲ್ಗೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:26 pm, Thu, 20 February 25